ವಾಷಿಂಗ್ಟನ್‌: ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಚ್‌-1ಬಿ, ಎಲ್‌-1 ವೀಸಾ ಮತ್ತು ಇತರೆ ತಾತ್ಕಾಲಿಕ ಕೆಲಸಗಳ ಪರವಾನಿಗೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತೀಯ ಐಟಿ ವೃತ್ತಿಪರರಿಗೆ ಅನುಕೂಲವಾಗುತ್ತಿದ್ದ ಎಚ್ -1 ಬಿ ಮತ್ತು ಎಲ್ 1 ಸೇರಿದಂತೆ ವಿದೇಶಿ ಕೆಲಸದ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಹೀಗಾಗಿ ಅಮೆರಿಕದಲ್ಲಿ 5,25,000 ಉದ್ಯೋಗಗಳು ಮುಕ್ತವಾಗಲಿವೆ ಎಂದು ಶ್ವೇತ ಭವನದ ಅಧಿಕಾರಿ ತಿಳಿಸಿದ್ದಾರೆ. 2020 ರ ಅವಧಿಯಲ್ಲಿ ಅಮೆಕನ್ನರಿಗೆ ಉದ್ಯೋಗ ಮುಕ್ತಗೊಳಿಸುವ ಉದ್ಧೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಅಮೆರಿಕನ್ನರಿಗೆ ಸುಮಾರು 5.25 ಲಕ್ಷ ಉದ್ಯೋಗಗಳು ಕೈಗೆ ಸಿಗಲಿವೆ.

ಕೊರೊನಾ ಹಾವಳಿಯಿಂದಾಗಿ ಅಮೆರಿಕ ಕೂಡ ಎಲ್ಲ ರಾಷ್ಟ್ರಗಳಂತೆ ಆರ್ಥಿಕ ಸಮಸ್ಯೆಯಿಂದ ನಲುಗುತ್ತಿದೆ. ಹೀಗಾಗಿ ಇಷ್ಟು ಬೃಹತ್ ಸಂಖ್ಯೆ ಉದ್ಯೋಗಗಳನ್ನು ಅಮೆರಿಕನ್ನರಿಗೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಂಪ್ ಅವರ ಘೋಷಣೆ ಪ್ರಕಾರ H-1B, H-4, H-2B ವೀಸಾ, ಜೆ ಮತ್ತು ಎಲ್ ವೀಸಾಗಳು ಸೇರಿದಂತೆ ಹಲವಾರು ಜನಪ್ರಿಯ ವಲಸೆರಹಿತ ವೀಸಾಗಳನ್ನು ಪ್ರಸಕ್ತ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

Leave a Reply

Your email address will not be published.

You May Also Like

ರಾಯಚೂರಿನಲ್ಲಿಂದು 9 ಕೊರೊನಾ ಪಾಟಿಟಿವ್..!

ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ.

ರೈತರು ಬೆಳೆಗೆ ಬೆಳೆ ಮಾರಾಟಕ್ಕೆ ಡಿಕೆಶಿ ಮನವಿ

ಬೆಂಗಳೂರು : ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ಸದ್ಯ ಮೇ. 17ರ ವರೆಗೆ ಲಾಕ್ ಡೌನ್…
ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಅರುಣಕುಮಾರ ಮ ನರಗುಂದ. ಇವರು ವೃತ್ತಿಯಲ್ಲಿ ಹಿರೇಕೆರೂರಿನಲ್ಲಿ ನ್ಯಾಯಾಂಗ ಇಲಾಖೆಯ ನೌಕರ. ವೃತ್ತಿ ನ್ಯಾಯಾಂಗ ಇಲಾಖೆ ಆದರೆ ಸಾಹಿತ್ಯ ಕೃಷಿ ಇವರ ಪ್ರವೃತ್ತಿ.

ಬಿಜೆಪಿಯಿಂದ ಎಂಎಲ್ಸಿ ಆಗಬೇಕಂತಾರಾ ವಾಟಾಳ್ ನಾಗರಾಜ್..?

ನ್ನಡಪರ ಹೋರಾಟಗಾರ, ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬಿಜೆಪಿ ಸೇರ್ತಾರಾ..? ಹೀಗೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ.