ಶಿರಹಟ್ಟಿ: ಪ್ರಸ್ತುತ ವರ್ಷದಲ್ಲಿ ಕೊರೊನಾ ನಿಯಮಾನುಸಾರ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಹೇಳಿದರು.

ಅವರು ಇಲ್ಲಿನ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಧ್ವಜದ ಕಟ್ಟೆ ನಿರ್ವಹಣೆ, ಮೈದಾನ ಸ್ವಚ್ಚಗೊಳಿಸುವುದು, ಪುಷ್ಪಾರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮದ ಒಂದೊಂದು ಜವಾಬ್ದಾರಿಯನ್ನು ಒಂದೊಂದು‌ ಇಲಾಖೆಗೆ ವಹಿಸಲಾಯಿತು. ಪ್ರಸ್ತುತ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಶಾಲಾ ಮಕ್ಕಳು ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ನಿಯಮ ಪಾಲನೆ ಮಾಡಬೇಕಾಗಿರುವುದರಿಂದ ಕೇವಲ ಎಸ್ ಎಸ್ಎಲ್ಸಿ ವಿದ್ಯಾರ್ಥಿಗಳು ಪಾಲಕರ ಒಪ್ಪಂದದ ಮೇರೆಗೆ ಪಾಲ್ಗೊಳ್ಳಬೇಕು.

ಪ್ರತಿ ಇಲಾಖೆಯಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಬೇಕಿದ್ದು, ಅಂಬೇಡ್ಕರ್ ಅವರ ಪೋಟೋಕ್ಕೆ ಕಡ್ಡಾಯವಾಗಿ ಪೂಜೆ ಸಲ್ಲಿಸಬೇಕು. ಇಲ್ಲದೆ ಹೊದಲ್ಲಿ ಆ ಇಲಾಖೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾರ್ಯಕ್ರಮ ಮುಗಿಯುವವರೆಗೆ ಅಯಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಹಾಜರಿರಬೇಕು.

ಪ್ರತಿವರ್ಷ ನಡೆಯುತ್ತಿದ್ದ ಪೊಲೀಸ್ ಇಲಾಖಾ ಪಥಸಂಚಲ ಈ ಬಾರಿ‌ ಇರುವುದಿಲ್ಲ. ಸರಳವಾಗಿ ಸರ್ಕಾರದ ನಿಯಮನುಸಾರ ಗಣರಾಜ್ಯೋತ್ಸವ ಆಚರಣೆ ಮಾಡಬೇಕಿದ್ದು, ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿ, ಸ್ಯಾನಿಟೈಸರ್ ಬಳಸುವುದರ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಬುರಡಿ, ಸಮಾಜ ಕಲ್ಯಾಣ ಅಧಿಕಾರಿ ಎಸ್.ಬಿ.ಹರ್ತಿ, ತಾಲೂಕಾ ವೈದ್ಯಾಧಿಕಾರಿ ಸುಭಾಶ ದಾಯಗೊಂಡ, ತೋಟಗಾರಿಕೆ ಅಧಿಕಾರಿ ಸುರೇಶ ಕುಂಬಾರ, ಶ್ರೀಧರ ತಳವಾರ, ಸಿ. ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಶೋಭಾ ಕರಂದ್ಲಾಜೆ ವಿರುದ್ಧ ಮುಗಿ ಬಿದ್ದ ಕಾಂಗ್ರೆಸ್ ಮಹಿಳೆಯರು!

ಬೆಂಗಳೂರು : ರಾಜರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಅವರು ಹಗುರವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ನಾಯಕಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯಲ್ಲಿಂದು 61 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 61 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 943…

ಮಹಿಳಾ ಮಣಿಗಳ ಅಧಿಪತ್ಯಪ್ರಾರಂಭ: ಬಿಜೆಪಿಗೆ ರಾಮನಿಂದ ಪಟ್ಟಾಭಿಷೇಕ,ಕಾನೂನು ಹೋರಾಟ -ಎಚ್ ಕೆ ಪಾಟೀಲ

ಉತ್ತರಪ್ರಭ ಸುದ್ದಿಗದಗ: ಕಾಂಗ್ರೆಸ್‌ನ ಹಿಡಿತದಲ್ಲಿದ್ದ ನಗರಸಭೆ ಗದ್ದುಗೆ ದಶಕಗಳ ಬಳಿಕ ಬಿಜೆಪಿ ಪಾಲು, ಬಿಜೆಪಿಯಲ್ಲಿ ಸಂಭ್ರಮ…

ಮದುಮಗನ ತಡೆದ ಪೊಲೀಸರು : ಶುಭ ಕೋರಿ ಕಳುಹಿಸಿದರು

ರಾಜ್ಯದಲ್ಲಿ ಕೊರೋನಾದಿಂದ ಕರ್ಫ್ಯೂ ಜಾರಿಯಾಗಿದ್ದರಿಂದ ಸರಳವಾಗಿ ವಿವಾಹ ಮಾಡಿಕೊಳ್ಳಲು ತೆರಳುತ್ತಿದ್ದ ವರನನ್ನು ತಡೆದ ಪೊಲೀಸರು, ಮದುವೆ ಆಗುತ್ತಿರುವುದು ಖಚಿತ ಪಡಿಸಿಕೊಂಡ ಬಳಿಕ ಶುಭಕೋರಿ ಕಳುಹಿಸಿರುವ ಘಟನೆ ನಡೆದಿದೆ.