ಬೆಂಗಳೂರು: ರಾಜ್ಯದಲ್ಲಿ ಕೊರೋನಾದಿಂದ ಕರ್ಫ್ಯೂ ಜಾರಿಯಾಗಿದ್ದರಿಂದ ಸರಳವಾಗಿ ವಿವಾಹ ಮಾಡಿಕೊಳ್ಳಲು ತೆರಳುತ್ತಿದ್ದ ವರನನ್ನು ತಡೆದ ಪೊಲೀಸರು, ಮದುವೆ ಆಗುತ್ತಿರುವುದು ಖಚಿತ ಪಡಿಸಿಕೊಂಡ ಬಳಿಕ ಶುಭಕೋರಿ ಕಳುಹಿಸಿರುವ ಘಟನೆ ನಡೆದಿದೆ.

ವಿವಾಹ ಸಮಾರಂಭಕ್ಕೆ ಸರ್ಕಾರ ಜನರನ್ನು ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಆಡಂಬರ ಇಲ್ಲದೆ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವರನನ್ನು ಅಡ್ಡಿಪಡಿಸಿದ ಮಾಗಡಿ ರಸ್ತೆಯ ಪೊಲೀಸರು, ಕರ್ಫ್ಯೂ ನಡುವೆ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಧುಮಗ, ಇಂದು ನನ್ನ ವಿವಾಹ, ದೇವಸ್ಥಾನದಲ್ಲಿ ಮದುವೆ ಆಗುತ್ತಿದ್ದೇನೆ. ನಮ್ಮ ತಂದೆಯವರೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದೇನೆ ವಿವರಿಸಿದರು.

ಇದನ್ನು ಒಪ್ಪದ ಪೊಲೀಸರು ದಂಡ ವಿಧಿಸಲು ಮುಂದಾದರು. ಮೂಹೂರ್ತಕ್ಕೆ ಸಮಯ ಮೀರುತ್ತಿದೆ ಎಂದರೂ ಪೊಲೀಸರು ಕನಿಕರ ತೋರಲಿಲ್ಲ. ಬಳಿಕ ಮಧುಮಗನ ಸಂಬಂಧಿಕರು ವಿವಾಹದ ಅಹ್ವಾನ ಪತ್ರಿಕೆಯನ್ನು ತಂದು ಪೊಲೀಸರಿಗೆ ತೋರಿಸಿದರು. ವರನ ಹೆಸರನ್ನು ಖಚಿತಪಡಿಸಿಕೊಂಡ ಪೊಲೀಸರು ಶುಭಕೋರಿ ಕಳುಹಿಸಿದರು ಎಂದು ವರನ ಸಂಬಂಧಿಕರು ಮಾಧ್ಯಮಗಳಿಗೆ ವಿವರಿಸಿದರು.

Leave a Reply

Your email address will not be published. Required fields are marked *

You May Also Like

ಅರಣ್ಯ ಇಲಾಖೆಯ ಕಿರುಕುಳಕ್ಕೆ ಮನನೊಂದು ಶಿಂಗಟರಾಯನಕೆರೆ ತಾಂಡಾದ ಮಹಿಳೆ ಸಾವು

ಗದಗ: ಬಗರಹೂಕುಮ ಸಾಗುವಳಿದಾರರಿಗೆ ಅರಣ್ಯ ಇಲಾಖೆ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ಕೊಡುತ್ತಾ ಬಂದಿದೆ.ಅದರಲ್ಲೂ ಮುಂಡರಗಿ…

ಅಧಿಕಾರಿಗಳ ನಿರ್ಲಕ್ಷ್ಯ : ಪೈಪ ಒಡೆದು ನೀರು ಪೊಲು ರಸ್ತೆ ದಾಟಲು ವಿದ್ಯಾರ್ಥಿಗಳ ಪರದಾಟ

ಒಂದು ವಾರದಿಂದ ಕುಡಿಯೋ ನೀರಿನ ಪೈಪ ಹೊಡದೈತರಿ ಹಂಗ ನೀರ ಹರದ ರೊಡ ಮತ್ತು ಹೊಲಕ್ಕ ಹರಿಯಾಕತೈತಿ ಯಾರು ಬಂದು ಅದನ್ನು ರೀಪೆರಿ ಮಾಡಿಲ್ಲ ಶಾಲೆ ಹುಡುಗರು, ಮುದುಕರು ಮತ್ತು ಬಹಳ ಗಾಡಿಯವರು ಜಾರಿ ಬಿದ್ದ ಗಾಯಾ ಮಾಡಕೊಂಡಾರ ಅಷ್ಟ ಅಲ್ಲರಿ ಹೊಲದಾಗ ಒಟ್ಟಿರೊ ಬಣವಿಗೆ ನೀರ್ ಹೊಕ್ಕೊಂಡು ಮೇವ ಹಾಳಾಗೈತಿ, ಈ ಸಮಸ್ಯೆ ಯಾರಿಗ ಹೆಳೋದು ಅಂತ ತಿಳಿವಲ್ದ, ಒಟ್ಟಾರೆ ಸರಿಹೋದ್ರ ಸಾಕು. -ಸೋಮನಗೌಡರ ಪಾಟೀಲ್ ಅಡವಿಸೋಮಾಪುರ ಗ್ರಾಮದ ನಿವಾ

5 ರಂದು ನಡೆಯುವ ಯುವಜನ ಸಂಕಲ್ಪ ನಡಿಗೆ ಯಾತ್ರೆ ಯಶಸ್ವಿಗೆ ಮನವಿ

ಆಲಮಟ್ಟಿ: 75 ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದಂಗವಾಗಿ ಸದೃಢ, ಸಶಕ್ತ ಭಾರತಕ್ಕಾಗಿ ಅಗಷ್ಟ 5 ರಂದು…