ಲಕ್ಷ್ಮೇಶ್ವರ: ಕೆಲಸ ಇಲ್ಲದೆ ಹಳ್ಳಿ ಜನ ಉದ್ಯೋಗ ಅರಸಿ ಗುಳೆ ಹೋಗಬಾರದು ಎಂಬ ಉದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಮಾನ ವೇತನ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿ ಬಿ.ಕಲ್ಲೇಶ ಹೇಳಿದರು.

ನರೇಗಾ ಯೋಜನೆಯಡಿ ಸಮೀಪದ ಅಮರಾಪುರದಲ್ಲಿ ನಡೆದಿರುವ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ಯೋಜನೆಯಡಿ ಗ್ರಾಮಸ್ಥರು ಊರಿಗೆ ಉಪಯುಕ್ತವಾದ ರಸ್ತೆ, ಕೆರೆ ನಿರ್ಮಾಣ ಮತ್ತು ಹೂಳೆತ್ತುವುದು, ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಇದೆ. ಆದ್ದರಿಂದ ಕಾರ್ಮಿಕರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಊರಿನ ಕೆರೆಗಳು ತುಂಬಿದರೆ ಗ್ರಾಮಸ್ಥರಿಗೆ ಬಹಳಷ್ಟು ಅನುಕೂಲ ವಾಗುತ್ತದೆ. ಈ ನಿಟ್ಟಿನಲ್ಲಿ ಯೋಜನೆಯಡಿ ಕೆರೆಗಳ ಹೂಳೆತ್ತಲು ಹೆಚ್ಚು ಮಹತ್ವ ನೀಡಲಾಗಿದೆ ಎಂದರು.

ತಾಲ್ಲೂಕು ಪಂಚಾಯತ್‍ನ ಸಹಾಯಕ ನಿರ್ದೇಶಕ ಶಿವಕುಮಾರ ವಾಲಿ ಮಾತನಾಡಿ, ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 14,904 ಜಾಬ್‍ಕಾರ್ಡ್ ಇವೆ. ಈಗಾಗಲೇ ಉದ್ಯೋಗ ಖಾತ್ರಿ ಕೆಲಸಗಳನ್ನು ಆರಂಭಿಸಲಾಗಿದೆ. ದೊಡ್ಡೂರು, ಹರದಗಟ್ಟಿ, ಅಮರಾಪುರಗಳಲ್ಲಿ ನಿತ್ಯ ನೂರಾರು ಜನ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಪಂಚಾಯ್ತಿ ಕಾರ್ಯದರ್ಶಿ ಎಸ್.ಬಿ. ವಡಕನಗೌಡ್ರ, ನರೇಗಾ ಎಂಜಿನಿಯರ್ ನಿಂಗರಾಜ ಅರಿಷಣದ, ಶಿಲ್ಪಾ ಲಮಾಣಿ, ಫಕ್ಕೀರೇಶ ಮಾಗಡಿ, ಎಂ.ಜೆ.ಸಾಸಲವಾಡ, ಬಸಪ್ಪ ತಳವಾರ ಇದ್ದರು.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಮಳೆಗಾಳಿ ಆರ್ಭಟ- ಧರೆಗುರುಳಿದ ಗಿಡಮರಗಳು

ಆಲಮಟ್ಟಿ: ಇಂದು ಸಂಜೆ 6 ಗಂಟೆಯ ಸುಮಾರಿಗೆ ಗುಡುಗು,ಮಿಂಚು ಮಿಶ್ರಿತ ಭಾರೀ ಗಾಳಿಯೊಂದಿಗೆ ಅರ್ಧಗಂಟೆಗು ಹೆಚ್ಚು…

ಕೊರೊನಾ ನಿಯಂತ್ರಣ ಮಾರ್ಗಸೂಚಿ: ಗದಗ ಡಿಸಿ ಪ್ರಕಟಣೆ

ರಾಜ್ಯದಲ್ಲಿ ಕೊರೊನಾ ಎರಡನೆ ಅಲೆ ಹೆಚ್ಚಾಗುತ್ತಿದ್ದು, ನಿಯಂತ್ರಣ ಕಾರ್ಯ ಅತ್ಯಾವಶ್ಯವಾಗಿದೆ. ವಿಪತ್ತು ನಿರ್ವಹಣೆ ಕಾಯ್ದೆ 2005 ರಲ್ಲಿನ ಸೆಕ್ಷನ್ 24ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯಾದ್ಯಂತ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ಕೆಳಕಂಡಂತೆ ನಿಯಂತ್ರಣ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ.

ಸಾವರಕರ್ ಬದಲಾಗಿ ರಾಹುಲ್, ಸೋನಿಯಾಗಾಂಧಿ ಹೆಸರಿಡಬೇಕಾ?: ಸಿ.ಸಿ.ಪಾಟೀಲ್

ಗದಗ: ಸಾವರ್ಕರ್ ಹೆಸರಿಡದೇ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಹೆಸರಿಡಬೇಕಾ? ಸಾವರ್ಕರ್ ತ್ಯಾಗ ಬಲಿದಾನ, ಕಾಲಾಪಾನಿ ಶಿಕ್ಷೆ,…

ಬೆಂಬಲ ಬೆಲೆಯಲ್ಲಿ ಸರ್ಕಾರ ಗೋವಿನ ಜೋಳ ಖರೀದಿಸಲು ರೈತರ ಆಗ್ರಹ

ತಾನು ಬೆಳೆದ ಬೆಳೆ ತನ್ನ ಬದುಕು ಬಂಗಾರವಾಗಿಸುತ್ತದೆ ಎಂದು ನಂಬಿದ ಅನ್ನದಾನಿಗೆ ಭಾರಿ ನಿರಾಶೆಯಾಗಿದೆ. ಬಿಳಿ ಗೋವಿನ ಜೋಳ ಬದುಕಿನಲ್ಲಿ ಬೆಳಕು ಚೆಲ್ಲುತ್ತೆ ಎಂಬ ವಿಶ್ವಾಸದಲ್ಲಿ ರೈತನಿಗೆ ಬಿಳಿ ಗೋವಿನ ಜೋಳ ಕೂಡ ಉತ್ತಮ ಧಾರಣೆ ನೀಡದ ಹಿನ್ನೆಲೆ ಬದುಕಿಗೆ ಕತ್ತಲೆ ಆವರಿಸಿದಂತಾಗಿದೆ. ಇದರಿಂದ ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದ ರೈತರು ಅಸಹಾಯಕರಾಗಿ ಕೈಚೆಲ್ಲಿ ಕುಳಿತಿದ್ದಾರೆ.