ಬೆಂಗಳೂರು : ರಾಜರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಅವರು ಹಗುರವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ನಾಯಕಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ರವಿ ಹೆಸರನ್ನು ಯಾರೇ ಬಳಸಿಕೊಂಡರೂ ಅವರಿಗೆ ಒಳ್ಳೆಯದಾಗಲ್ಲ ಎಂದು ಶೋಬಾ ಕರಂದ್ಲಾಜೆ ಹೇಳಿದ್ದರು. ಈ ಸಂದರ್ಭದಲ್ಲಿ ಡಿ.ಕೆ. ರವಿ ಅವರ ಪತ್ನಿ, ನಿಮ್ಮ ಹೇಳಿಕೆಯನ್ನು ಕನ್ನಡಿಯ ಮುಂದೆ ನಿಂತು ಹೇಳಿ ಎಂದು ಕಿಡಿಕಾರಿದ್ದರು. ಈಗ ಶಾಸಕ ಸೌಮ್ಯ ರೆಡ್ಡಿ, ಕೆಪಿಸಿಸಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ ಹರಿಹಾಯ್ದಿದ್ದಾರೆ..

ಈ ಕುರಿತು ಮಾತನಾಡಿ ಉಮಾಶ್ರೀ, ಗಂಡ ಸತ್ತವರು, ಬಿಟ್ಟವರು ಎಲೆಕ್ಷನ್‌ ಗೆ ನಿಲ್ಲಬಾರದು ಎಂದು ಸಂವಿಧಾನದಲ್ಲಿ ಹೇಳಿಲ್ಲ. ಇದು ಮಹಿಳೆಯರ ಹಕ್ಕು. ಕುಸುಮಾ ಅವರು ಡಿ.ಕೆ. ರವಿ ಅವರ ಪತ್ನಿ ಎಂದೇ ಹೇಳುತ್ತೇವೆ. ಅವರೊಬ್ಬ ಸಂಸದೆ ಎಂಬುವುದನ್ನು ಮರೆಯಬಾರದು ಎಂದು ಕಿಡಿಕಾರಿದ್ದಾರೆ. 

 ಈ ಕುರಿತು ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ ಅವರು, ಮಹಿಳೆಯರಿಗೆ ಮಹಿಳೆಯರೇ ಶತೃಗಳು ಎನ್ನುವಂತಾಗಿದೆ. ಹತ್ರಾಸ್, ಬಲರಾಂಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾಗಿವೆ. ಇದನ್ನು ಜಾತಿ, ಧರ್ಮ ಹಾಗೂ ಪಕ್ಷ ಮೀರಿ ಖಂಡಿಸಬೇಕಾಗಿತ್ತು. ಶೋಭಕ್ಕಾ ನೀವು ಇದನ್ನು ಖಂಡಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ. 

Leave a Reply

Your email address will not be published. Required fields are marked *

You May Also Like

ಬಿಎಂಟಿಸಿಗೆ ಡಿಜಿಟಲ್ ಸ್ಪರ್ಷ: ಡಿಜಿಟಲ್ ಹಣ ನೀಡಿ ಟಿಕೇಟ್ ಪಡೆಯಲು ಅವಕಾಶ

ಬೆಂಗಳೂರು: ಕೊರೊನಾ ಕಾಟದಿಂದಾಗಿ ಪ್ರಯಾಣಿಕರು ಹಾಗೂ ಸಿಬ್ಬಂಧಿಗಳ ಹಿತದೃಷ್ಟಿಯಿಂದ ಬಿಎಂಟಿಸಿ ಡಿಜಿಟಲ್ ಗೆ ಮಾರು ಹೋಗಿದೆ.ಫೋನ್…

ಕಡಕೋಳದಲ್ಲಿ ಸಿಡಿಲು: ಮೂವರು ಸಾವು: ನಾಲ್ವರಿಗೆ ಗಂಭೀರ ಗಾಯ

ತಾಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ ಧಾರುಣ ಘಟನೆ ಜರುಗಿದೆ. ಘಟನೆಯ ವಿವರ: ಕಡಕೋಳ ಗ್ರಾಮದ ನಿವಾಸಿಗಳಾದ ಕುಮಾರ(24), ಶರಣಪ್ಪ ಮಾಲಿಂಗಪ್ಪ(38) ಮಾರುತಿ(50) ಹೊಲ ನೋಡಿ ಬರಲು ಹೋಗಿದ್ದು, ಮಳೆ, ಗಾಳಿ ಪ್ರಾರಂಭವಾಗಿದ್ದರಿಂದ ಅಲ್ಲಿಯೇ ಗಿಡದ ಮರೆಯಲ್ಲಿ ನಿಂತುಕೊಂಡಿದ್ದಾರೆ. ದುರಾದೃಷ್ಟವಶಾತ್ ಸಿಡಿಲು ಬಡಿದು ಈ ಮೂವರು ಸಾವನ್ನಪ್ಪಿದ್ದಾರೆ.

ಸಿಂದಗಿ ಶಾಸಕ ಎಂ.ಸಿ. ಮನಗೂಳಿ ವಿಧಿವಶ

ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿ. (85) ತಡರಾತ್ರಿ ನಿಧನರಾಗಿದ್ದಾರೆ.

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ : ರಾಜ್ಯದಲ್ಲಿ ಲೇಟ್ ನೈಟ್ ಪಾರ್ಟಿ ನಿಷೇಧಿಸಿದ ಕರ್ನಾಟಕ ಸರ್ಕಾರ

ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಗುರುವಾರದಿಂದ ಲೇಟ್ ನೈಟ್ ಪಾರ್ಟಿಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯದ ಎಲ್ಲಾ ಸ್ಟಾರ್ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಿಗೆ ಸೂಚಿಸಲಾಗಿದೆ ಎಂದು ಸುಧಾಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.