ಉತ್ತರಪ್ರಭ ಸುದ್ದಿ
ಗದಗ:
ಕಾಂಗ್ರೆಸ್‌ನ ಹಿಡಿತದಲ್ಲಿದ್ದ ನಗರಸಭೆ ಗದ್ದುಗೆ ದಶಕಗಳ ಬಳಿಕ ಬಿಜೆಪಿ ಪಾಲು, ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಸೋಮವಾರ ನಡೆದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಯ ಉಷಾ ಮಹೇಶ ದಾಸರ ನಗರಸಭೆಯ 60ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುನಂದಾ ಪ್ರಕಾಶ ಬಾಕಳೆ ಅವರು ಆಯ್ಕೆಯಾಗುವ ಮೂಲಕ ಬಿಜೆಪಿಗೆ ರಾಮನಿಂದ ಪಟ್ಟಾಭಿಷೇಕ ಆಗಿದಂತಾಗಿದೆ. ಅದಕ್ಕೆ ಈ ಹಿಂದೆ ಉತ್ತರಪ್ರಭ ರಾಮನಿಂದ ಬಿಜೆಪಿಗೆ ಪಟ್ಟಾಭಿಷೇಕ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿಯನ್ನು ಪ್ರಕಟಮಾಡಿತ್ತು. 35ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಉಷಾ ದಾಸರ ಇಂದು ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷಿಣಿ ಎಂಬ ಪಟ್ಟದೊಂದಿಗೆ ರಾಮನಗರದ ಜನತೆ ಕೈ ಹಿಡಿದ ಪರಿಣಾಮ ಇಂದು ಬಿಜೆಪಿಯ ಸಂಭ್ರಮಕ್ಕೆ ವರ ಎಂದರೆ ತಪ್ಪಾಗಲಾರದು.

ಬಿಜೆಪಿಯ ಉಷಾ ಮಹೇಶ ದಾಸರ ನಗರಸಭೆಯ 60ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುನಂದಾ ಪ್ರಕಾಶ ಬಾಕಳೆ ಅವರು ಆಯ್ಕೆ


ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪರವಾಗಿ 19 ಮತಗಳು ಚಲಾವಣೆಯಾಗಿದೆ ಎಂದು ಚುನಾವಣಾಧಿಕಾರಿ ರಾಯಪ್ಪ ಹುಣಸಗಿ ಅಧಿಕೃತವಾಗಿ ಘೋಷಿಸಿದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು. ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮೀಸಲಿದ್ದ ಕಾರಣ ಬಿಜೆಯಿಂದ ಉಷಾ ಮಹೇಶ ದಾಸರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುನಂದಾ ಪ್ರಕಾಶ ಬಾಕಳೆ ನಾಮಪತ್ರ ಸಲ್ಲಿಸಿದ್ದರು. ಇತ್ತ ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಚಂದಾವರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಕ್ಕಿ ಉಮೇದುವಾರಿಕೆ ಸಲ್ಲಿಸಿದ್ದರು. ಸಣ್ಣ ಸಮುದಾಯದಿಂದ ಬಂದ ಉಷಾ ದಾಸರ ನಗರಸಭೆ ಅಧ್ಯಕ್ಷರಾಗುವ ಮೂಲಕ ಆ ಸಮುದಾಯದಲ್ಲಿ ರಾಜಕೀಯ ಕಿಡಿಯನ್ನು ಹೊತ್ತಿಸಿದ್ದಾರೆಂದರೆ ತಪ್ಪಾಗಲಾರದು.


ಸವಾಲುಗಳು: ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳಿಗೆ ಸವಾಲುಗಳ ಸುರಿಮಳೆಯೆ ಇದೆ, ಸುಮಾರು ಮೂರು ವರ್ಷಗಳಿಂದ ಜನಪ್ರತಿನಿಧಿಗಳು ಇಲ್ಲದೆ ನಗರಸಭೆಯಿಂದ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೇ. ಸ್ವಚ್ಚ ಆಡಳಿತ ನೀಡಲು ಒತ್ತು ಕೊಡಬೇಕಾಗುತ್ತದೆ, ಅದರೊಂದಿಗೆ ಜನರ ನಾಡಿ ಮೀಡಿತ ಅರಿತು ಕೆಲಸಮಾಡಬೇಕಾಗಿದೆ. ಜನರು ದಶಕಗಳಿಂದ ಒಂದೇ ಪಕ್ಷದ ಆಡಳಿತ ನೋಡಿರುವುದರಿಂದ ವಿಭಿನ್ನ ರೀತಿಯ ಜನಪರ ಕೆಲಸಗಳ ನಿರೀಕ್ಷೆಯೇ ಹೆಚ್ಚು. ಗದಗ-ಬೆಟಗೇರಿ ನಗರದಲ್ಲಿ ರಸ್ತೆ ಅಭಿವೃದ್ಧಿಯಿಂದ ಹಿಡಿದು ಮೂಲಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ನಗರ ಸೌಂದರಿಕರಣ ಮಾಡಿ ಪ್ರವಾಸಿಗರನ್ನ ಸೆಳೆಯುವ ಪ್ರಯತ್ನದೊಂದಿಗೆ ಯುವಸಮುದಾಯಕ್ಕೆ ಉದ್ಯೋಗ ನೀಡಬೇಕಾಗಿದೆ. ವಿಶೇಷವಾಗಿ ಸ್ಲಂಗಳು ನಗರದಲ್ಲಿ ಇರದಂತೆ ಮಾಡಿ ಬಡಜನರ ಜೀವನಕ್ಕೆ ಸೂರು ಒದಗಿಸುವ ಕೆಲಸವಾಗಬೇಕಾಗಿದೆ.


ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುವುದÀರೊಂದಿಗೆ ವಿರೋಧ ಪಕ್ಷ ದಶಕಗಳ ಆಡಳಿತ ಮಾಡಿರುವುದರಿಂದ ಆಡಳಿತ ಪಕ್ಷ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಬೇಕಾಗಿದೆ ಹೀಗೆ ಹತ್ತು ಹಲವು ಸಮಸ್ಯೆಗಳ ಸೂರಿ ಮಳೆ ಅಂತು ಇದೆ, ಇವೆಲ್ಲವನ್ನು ನಿಭಾಯಿಸಿ ಉತ್ತಮ ಆಡಳಿತಮಾಡಿ ಜನರ ಮನಸ್ಸನ್ನು ಗೆಲ್ಲಬೇಕಾಗಿದೆ.


ನನ್ನ ಮೊದಲ ಆಧ್ಯತೆ ಗದಗ-ಬೇಟಗೇರಿ ನಗರ ಸಭೆಯನ್ನು ಮಾದರಿ ನಗರಸಭೆಯನ್ನಾಗಿ ಮಾಡುವುದು ಮತ್ತು ಪಾರದರ್ಶಕ ಆಡಳಿತ ನೀಡಲು ಹೆಚ್ಚಿನ ಒತ್ತನ್ನು ನೀಡುತ್ತೇನೆ. ನಗರದ ಅಭಿವೃದ್ಧಿಯ ಜೋತೆಗೆ ನಗರದಲ್ಲಿ ನೈರ್ಮಲ್ಯ ಕಾಪಾಡಲು ಕ್ರಮವಹಿಸುವುದರೊಂದಿಗೆ, ಗದಗ-ಬೆಟಗೇರಿ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ.
ನನ್ನನ್ನು 35ನೇ ವಾರ್ಡಿನಿಂದ ಬಹುಮತದೊಂದಿಗೆ ಆಯ್ಕೆ ಮಾಡಿದ ನನ್ನ ಮತದಾರ ಬಾಂಧವರಿಗೆ ಮತ್ತು ನನ್ನನ್ನು ಗುರುತಿಸಿ ಪಕ್ಷದ ಟಿಕೇಟ ನೀಡಿ ಹಗಲು ರಾತ್ರಿಯೆನ್ನದೇ ಪಕ್ಷದ ವರಿಷ್ಠರು ಮತ್ತು ಪಕ್ಷದ ಕಾರ್ಯಕರ್ತರು ಪ್ರಚಾರಮಾಡಿ ನನ್ನನ್ನು ಗೆಲ್ಲಿಸಿ ಅಧ್ಯಕ್ಷರನ್ನಾಗಿ ಮಾಡಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ವಿಶೇಷವಾಗಿ ಉಸ್ತುವಾರಿ ಸಚಿವರಾಗಿದ್ದ ಸಿ ಸಿ ಪಾಟೀಲ, ಸಚಿವ ಶ್ರೀರಾಮಲು, ನಮ್ಮ ಯುವನಾಯಕರಾದ ಅನೀಲ ಮೇಣಸಿಕಾಯಿ, ರೋಣ, ಶಿರಹಟ್ಟಿ ಶಾಸಕರು, ಸಂಸದರು ಮತ್ತು ಪಕ್ಷದ ಅಧ್ಯಕ್ಷರಾದ ಮೋಹನ ಮಾಳಶೇಟ್ಟಿ ಸೇರಿದಂತೆ ಶಹರ ಹಾಗೂ ಜಿಲ್ಲೆಯ ಎಲ್ಲ ನಾಯಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.


-ಉಷಾ ಮಹೇಶ ದಾಸರ
ನೂತನ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರು


ಗೊಂದಲ: ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನಾಮಪತ್ರ ಸಲ್ಲಿಕೆಯಾದ ನಂತರ ಚುನಾವಣಾಧಿಕಾರಿಯಿಂದ ಫಲಿತಾಂಶ ಘೋಷಣೆಗೆ ಮುನ್ನ ಕಾಂಗ್ರೇಸ್‌ನ ಶಾಸಕರಾದ ಎಚ್ ಕೆ ಪಾಟೀಲರಿಂದ ಚುನಾವಣಾಧಿಕಾರಿಗೆ ಕಾಂಗ್ರೇಸ್‌ನ ಚಂದಾವರಿಗೆ 19 ಮತಗಳು ಬಿದ್ದಿವೆ, ಅವರನ್ನು ವೀಜೆತ ಅಧ್ಯಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕು, ಇಲ್ಲವೆಂದರೆ ಮರು ಚುನಾವಣೆ ಮಾಡಬೇಕು ಎಂದು ಒತ್ತಾಯ ಮಾಡಿದ ಘಟನೆ ನಡೆಯಿತು.
ಕೊನೆಗೆ ಚುನವಣಾಧಿಕಾರಿ ಬಿಜೆಪಿಯ ಉಷಾ ದಾಸರ ಅವರನ್ನು ಅಧ್ಯಕ್ಷವೆಂದು ಘೋಷಣೆ ಮಾಡಿದ ನಂತರ ಶಾಸಕರಾದ ಎಚ್ ಕೆ ಪಾಟೀಲರು ಚುನಾವಣಾ ಅಧಿಕಾರಿಗಳ ವಿರುಧ್ದ ಆಕ್ರೋಶ ವ್ಯಕ್ತಪಡಿಸುತ್ತಾ ಚುನಾವಣಾ ಪ್ರಕಿಯೆಯಿಂದ ಅರ್ಧಕ್ಕೆ ಹೊರ ನಡೆದು ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದಾಗ ಕೆಲವರಲ್ಲಿ ಗೊಂದಲ ಉಂಟುಮಾಡಿತು.

ಶಾಸಕರಾದ ಎಚ್ ಕೆ ಪಾಟೀಲರು ಚುನಾವಣಾ ಅಧಿಕಾರಿಗಳ ವಿರುಧ್ದ ಆಕ್ರೋಶ ವ್ಯಕ್ತಪಡಿಸುತ್ತಾ ಚುನಾವಣಾ ಪ್ರಕಿಯೆಯಿಂದ ಅರ್ಧಕ್ಕೆ ಹೊರ ನಡೆದು ನಾವು ಕಾನೂನು ಹೋರಾಟ ಮಾಡುತ್ತೇವೆ


ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೊಂದಲವಿದೆ. ಪಾರದರ್ಶಕ ಚುನಾವಣೆಯನ್ನು ಚುನಾವಣಾ ಅಧಿಕಾರಿಗಳು ನಡೆಸಿಲ್ಲ, ಅಭ್ಯರ್ಥಿಗಳ ಪರವಾಗಿ ಸಹಿ ಆಗಿದ್ದನ್ನು ಸಂಸದರ ಜೊತೆ ಸೇರಿಕೊಂಡು ಎಣಿಕೆ ಮಾಡಿದಾಗ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಚಂದಾವರಿಗೆ 19, ಉಷಾ ದಾಸರರವರಿಗೆ 18 ಮತಗಳು ಬಿದ್ದಿವೆ. ಹೀಗಾಗಿ ಚಂದಾವರಿ ಅವರನ್ನು ಚುನಾಯಿತರೆಂದು ಘೋಷಣೆ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು. ಆದರೂ ಅಧಿಕಾರಿಗಳು ಒಪ್ಪದೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಹೀಗಾಗಿ ಮರು ಚುನಾವಣೆ ಮಾಡಬೇಕು. ಈ ಕುರಿತು ಕಾನೂನಾತ್ಮಕ ಹೋರಾಟ ನಡೆಸಲಾಗುವುದು.

ಶಾಸಕ ಎಚ್.ಕೆ.ಪಾಟೀಲ್


ಮಾತಿನ ಚಕಮಕಿ: ನಗರ ಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆಯಿಂದ ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿಟ್ಟಿದ್ದಕ್ಕೆ ಮಾಧ್ಯಮ ಪ್ರತಿನಿಧಿಗಳು ಚುನಾವಣಾ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸದೆ ತಡವಡಿಸಿದ ಚುನಾವಣಾ ಅಧಿಕಾರಿ ಕಾನೂನು ಪ್ರಕಾರ ಪಾರದರ್ಶಕತೆಯಿಂದ ಚುನಾವಣೆ ನಡೆಯುತ್ತದೆ ಅದರ ಬಗ್ಗೆ ಸಂಶಯ ಬೇಡಾ ಅದಕ್ಕೆ ಚಾಯಾಗ್ರಾಹಕರು ನೇಮಕವಾಗಿದ್ದು, ಅದಕ್ಕೆ ಸಂಬAಧ ಪಟ್ಟ ಎಲ್ಲ ಮಾಹಿತುಗಳು ಸಿಡಿಗಳಲ್ಲಿ ಶೇಕರಣೆ ಮಾಡಲಾಗಿದೆ ಎಂದು ಉತ್ತರಿಸಿದಾಗ ಮಾಧ್ಯಮದವರು ಸಮಾಧಾನವಾಗಿ ಹೊದ ಘಟನೆ ನಡೆಯಿತು.


ಭದ್ರತೆ: ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಹಿನ್ನಲೇ ಸೋಮವಾರ ನಗರಸಭೆಯ ಸುತ್ತ ಮುತ್ತ ಪೋಲೀಸ್ ಸರ್ಪಗಾವಲೇ ನಿರ್ಮಾಣವಾಗಿತ್ತು. ಈ ಚುನಾವಣೆ ಎರಡು ಪಕ್ಷಗಳಿಗೆ ಪ್ರತೀಷ್ಠೆಯ ಕಣವಾಗಿದ್ದರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಪೋಲೀಸ್ ಬೀಗಿ ಭದ್ರತೆಯನ್ನು ಒದಗಿಸಿತ್ತು.
ಸೊಮವಾರ ಬೆಳ್ಳಿಗ್ಗೆಯಿಂದ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಸಾವಿರಾರು ಕಾರ್ಯಕರ್ತರ ದಂಡೆ ನಗರಸಭೆೆಯತ್ತ ಜಮಾವಣೆ ಆದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಇಲಾಖೆ ಕರ್ತವ್ಯ ನಿರ್ವಹಿಸಿದೆ.

ಗದಗ ಬೆಟಗೇರಿ ನಗರವನ್ನು ಸಮಗ್ರ ಅಭಿವೃದ್ಧಿಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ, ನನ್ನ ಪತಿಯವರಾದ ಪ್ರಕಾಶ ಬಾಕಳೆ 3 ಭಾರಿ ಸದಸ್ಯರಾಗಿ ಆಯ್ಕೆಯಾಗಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ, ಅವರ ಮತ್ತು ಪಕ್ಷದ ವರಿಷ್ಠರ ಮಾರ್ಗದರ್ಶನದಲ್ಲಿ, ಹೊಸ ಹೊಸ ಜನಪರ ಯೋಜನೆಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸುವ ಪ್ರಮಾಣಿಕ ಪ್ರಯತ್ನಮಾಡುತ್ತೇನೆ. ಉಸ್ತುವಾರಿ ಸಚಿವರಾಗಿದ್ದ ಸಿಸಿ ಪಾಟೀಲ, ಸಚಿವ ಶ್ರೀರಾಮಲು, ನಮ್ಮ ಯುವನಾಯಕರಾದ ಅನೀಲ ಮೇಣಸಿಕಾಯಿ, ರೋಣ, ಶಿರಹಟ್ಟಿ ಶಾಸಕರು, ಸಂಸದರು ಮತ್ತು ಪಕ್ಷದ ಅಧ್ಯಕ್ಷರಾದ ಮೋಹನ ಮಾಳಶೇಟ್ಟಿ ಸೇರಿದಂತೆ ಶಹರ ಮತ್ತು ಜಿಲ್ಲೆಯ ಎಲ್ಲ ನಾಯಕರಿಗೆ ಹಾಗೂ ನನ್ನ ಗೆಲುವಿಗೆ ಕಾರಣರಾದ ಮತಭಾಂದವರು ಸೇರಿದಂತೆ ಪಕ್ಷದ ಎಲ್ಲ ವರಿಷ್ಠರು ಮತ್ತು ಕಾರ್ಯಕರ್ತರಿಗೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
-ಸುನಂದಾ ಪ್ರಕಾಶ ಬಾಕಳೆ
ನೂತನ ಉಪಾಧ್ಯಕ್ಷರು ಗದಗ-ಬೇಟಗೇರಿ ನಗರಸಭೆ


ಘೋಷಣೆಗಳ ಸುರಿಮಳೆ: ನಗರ ಸಭೆಯ ಆವರಣದಲ್ಲಿ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ತಮ್ಮ ನಾಯಕರ ಪರ ಘೋಷಣೆಗಳ ಸುರಿಮಳೆ ಹರಿಸಿದರು. ನಗರ ಸಭೆಯ ಆವರಣದಲ್ಲಿ ಪಾಟೀಲ್ ವರ್ಸಸ್ಸ ಪಾಟೀಲರದ್ದೇ ಸದ್ದು. ಇತ್ತ ಕಾಂಗ್ರೇಸ್ ಕಾರ್ಯಕರ್ತರು ಎಚ್ ಕೆ ಪಾಟೀಲ ಮತ್ತು ಬಿಜೆಪಿ ಕಾರ್ಯಕರ್ತರು ಸಿ ಸಿ ಪಾಟೀಲ ಪರ ಘೋಷಣೆಯೋಂದಿಗೆ ಕಾಂಗ್ರೇಸ್ ಬಿಜೆಪಿಯ ನಾಯಕರ ಪರ ವಿರೋಧ ಘೋಷಣೆಗಳ ಕೂಗೂ ಜೋರಾಗಿತ್ತು.


Leave a Reply

Your email address will not be published. Required fields are marked *

You May Also Like

ಗದಗ: ಜಿಮ್ಸ್ ನಲ್ಲಿ ರೋಗಿ ಆತ್ಮಹತ್ಯೆ..!

ಲಿವರ್ ವೈಫಲ್ಯದಿಂದ ಬಳಲುತ್ತಿರುವ ರೋಗಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಗ್ರಾಪಂ ಚುನಾವಣೆ ಯಾವಾಗ ನಡೆಯಲಿವೆ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ಗ್ರಾಪಂಗೆ ಡಿಸೆಂಬರ್ ಸಮಯದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಸದ್ಯ ಈ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಅನಾಮಧೇಯ ವ್ಯಕ್ತಿಯ ಶವಪತ್ತೆ: ಗುರುತು ಪತ್ತೆಗೆ ಮನವಿ

ಗಜೇಂದ್ರಗಡ : ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಸಮೀಪದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಪಟ್ಟಣದ…

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಸೋಂಕು!

ಹಾವೇರಿ: ರಾಜ್ಯದಲ್ಲಿ ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜರುಗಲಿವೆ. ಆದರೆ, ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯಲ್ಲಿ ಕೊರೊನಾ…