ಉಡುಪಿ: ಇಬ್ಬರೂ ಕಳೆದ 13 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಪ್ರೀತಿಯ ಪಾತ್ರವಾಗಿ ಎರಡು ಬಾರಿ ಯುವತಿಯ ಗರ್ಭಪಾತವೂ ಆಗಿದೆ. ಆದರೆ, ಮದುವೆಯೇ ದಿನವೇ ಹುಡುಗ ಕೈ ಕೊಟ್ಟ ಘಟನೆ ನಡೆದಿದೆ.
ಈ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಹೀಗಾಗಿ ಯುವತಿಯ ಮನೆಯವರು ವರನಿಗಾಗಿ ಪೋಲೀಸ್ ಠಾಣೆಯ ಮೊರೆ ಹೋಗಿದ್ದಾರೆ.

ಕಾರ್ಕಳದ ಗಣೇಶ್ ಹಾಗೂ ಮಣಿಪಾಲದ ಯುವತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ, ಈ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ಕೂಡ ಸೂಚಿಸಿದ್ದರು. ಹೀಗಾಗಿ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ, ವಿವಾಹದ ದಿನವೇ ಗಣೇಶ್ ನಾಪತ್ತೆಯಾಗಿದ್ದಾನೆ. ಈಗ ಮದುವೆ ನಿಂತು ಹೋಗಿದ್ದು, ಯುವತಿ, ವರನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

ಪರಸ್ಪರ ಪ್ರೀತಿಸುತ್ತಿರುವುದರಿಂದಾಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಏರ್ಪಟ್ಟಿತ್ತು. ಈ ಪ್ರೀತಿಯನ್ನು ಯುವತಿ ನಿಜವಾದ ಪ್ರೀತಿ ಎಂದು ಭಾವಿಸಿದ್ದಳು. ಆತ ಮದುವೆಯಾಗುವುದಾಗಿ ಕೂಡ ಹೇಳಿದ್ದ. ಮದುವೆಯ ದಿನ ಕೂಡ ನಿಗದಿಯಾಗಿತ್ತು.

ಇದಕ್ಕೂ ಮೊದಲು ಯುವಕನ ಮದುವೆ ಬೇರೆಯವರೊಂದಿಗೆ ನಿಶ್ಚಯವಾಗಿತ್ತು. ಈ ಮದುವೆ ನ. 4ಕ್ಕೆ ನಿಶ್ಚಯವಾಗಿತ್ತು. ಈ ಸಂದರ್ಭದಲ್ಲಿ ರಹಸ್ಯವಾಗಿ ವಿವಾಹವಾಗಲು ಆತ ತಯಾರಾಗಿದ್ದ. ಇದನ್ನು ನಿಲ್ಲಿಸುವಲ್ಲಿ ಯುವತಿ ಯಶಸ್ವಿಯಾಗಿದ್ದಳು.

ಆಗ ಗಣೇಶ್, ತನ್ನ ದೀರ್ಘಾವಧಿಯ ಪ್ರೇಯಸಿಯನ್ನು ವಿವಾಹವಾಗಲು ನಿರ್ಧರಿಸಿದ್ದ. ನ. 6ಕ್ಕೆ ವಿವಾಹ ನಿಶ್ಚಯವಾಗಿತ್ತು. ಆದರೆ, ಗಣೇಶ್ ಈ ಸಂದರ್ಭದಲ್ಲಿಯೇ ಪರಾರಿಯಾಗಿದ್ದಾನೆ. ಸದ್ಯ ಈ ಪ್ರಕರಣ ಪೊಲೀಸ್ ಮೆಟ್ಟಿಲು ಏರಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೊನಾ ವಿಚಾರ : ಶೀಘ್ರದಲ್ಲೇ ನೂತನ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬುಧವಾರ ಬೆಂಗಳೂರಿನಲ್ಲಿ…

ಮಾ.4 ರಿಂದ ರಾಜ್ಯ ಬಜೆಟ್ ಅಧಿವೇಶನ: ಮೀಸಲಾತಿ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆ!

ಮಾರ್ಚ್ ತಿಂಗಳ ಕೊನೆಯವರೆಗೂ ಬಜೆಟ್ ಅಧಿವೇಶನ ನಡೆಸಲಾಗುತ್ತಿದ್ದು, ಮಾರ್ಚ್ 4 ಮತ್ತು 5 ಎರಡು ದಿನ ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಕೊರೊನಾ ರೋಗಿಗಳಿಗೆ ಔಷಧಿ, ಆಹಾರ ತಲುಪಿಸಲು ಹೊಸ ಐಡಿಯಾ!

ಹುಬ್ಬಳ್ಳಿ : ಸೋಂಕಿತರಿಗೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಾರ್ಡ್ ಗೆ ತೆರಳುತ್ತಿರುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಪಿಪಿಇ ಕಿಟ್ ಧರಿಸಲೇಬೇಕು.

ತ್ರಿಪುರಾದಲ್ಲಿ ಸೈನಿಕರಿಗೆ ಮಾತ್ರ ಕಂಡು ಬಂದ ಸೋಂಕು!

ತ್ರಿಪುರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಮತ್ತೆ 24 ಜನ ಬಿಎಸ್ ಎಫ್ ಯೋಧರಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣ 88 ಕ್ಕೆ ತಲುಪಿವೆ .