ಹುಬ್ಬಳ್ಳಿ: ಸೋಂಕಿತರಿಗೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಾರ್ಡ್ ಗೆ ತೆರಳುತ್ತಿರುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಪಿಪಿಇ ಕಿಟ್ ಧರಿಸಲೇಬೇಕು. ಈ ತಾಪತ್ರಯ ತಪ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಲ್ಲೊಂದು ವಾಹನ ಕಂಡು ಹಿಡಿದಿದ್ದಾರೆ.

ಇಲ್ಲಿಯ ಕೆಎಲ್‌ ಇ ಎಂಜನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೋಂಕಿತರಿಗೆ ಆಹಾರ, ಔಷಧ ವಿತರಿಸುವ ವಾಹನ ಕಂಡು ಹಿಡಿದಿದ್ದಾರೆ. ಈ ವಾಹನ ಸ್ವಯಂ ಚಾಲಿತವಾಗಿ ಸಂಚರಿಸಲಿದೆ.

ವೈರ್ ಲೆಸ್ ತಂತ್ರಜ್ಞಾನದ ಮೂಲಕ ಈ ವಾಹನ ಸಂಚರಿಸಲಿದೆ. ಈ ವಾಹನದಲ್ಲಿ ನಾಲ್ಕು ವಿಭಾಗಗಳಿವೆ. ಆ ವಿಭಾಗದಲ್ಲಿ ಆಹಾರ ಮತ್ತು ಔಷಧಿಗಳನ್ನು ಇಟ್ಟು ಸೋಂಕಿತರಿಗೆ ತಲುಪಿಸಬಹುದು. ಸದ್ಯ ವಾಹನದ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಂಶೋಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಒಂದು ವೇಳೆ ಈ ವಾಹನವನ್ನು ಆಸ್ಪತ್ರೆಗಳು ಬಳಕೆ ಮಾಡಿದರೆ, ವೈದ್ಯರಿಗೆ ತುಂಬಾ ಸಹಕಾರಿಯಾಗಲಿದೆ.

Leave a Reply

Your email address will not be published. Required fields are marked *

You May Also Like

ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ

ಈಗಾಗಲೇ ಕೆಲವು ದಿನಗಳಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಇಡೇರಿಕೆಗಾಗಿ ಒತ್ತಾಯಿಸುತ್ತಲೇ ಇದ್ದರು. ಕೊನೆಗೂ ಸರ್ಕಾರ ಅತಿಥಿ ಉಪನ್ಯಾಸಕರಿಗೊಂದು ಸಿಹಿ ಸುದ್ದಿ ನೀಡಿದೆ.

ಮಾಜಿ ಭೂಗತ ದೊರೆ ಮುತ್ತಪ್ಪ ರೈ ನಿಧನ

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ(68) ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಫಾರ್ಮ ಹೌಸ್ ನಲ್ಲಿ ಮುತ್ತಪ್ಪ ರೈ ಅವರ ಅಂತ್ಯಕ್ರಿಯೇ ನಡೆಯಲಿದೆ.

ಜಿಲ್ಲಾ ಕಸಾಪ ದಿಂದ ಕಥೆ ಹಾಗೂ ಕವನಗಳ ಆಹ್ವಾನ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜನೇವರಿ ತಿಂಗಳಲ್ಲಿ ಜರುಗುವ ಗದಗ ಜಿಲ್ಲಾ 9 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಕಥೆಗಾರರ ಹಾಗೂ ಕವಿಗಳ ಪ್ರಾತಿನಿಧಿಕ ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರಲಾಗುತ್ತಿದೆ.

ರಾಜ್ಯದಲ್ಲಿಂದು ಸೋಂಕಿನ ಸುಂಟರಗಾಳಿ: 3176 ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 3176 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47253 ಕ್ಕೆ ಏರಿಕೆಯಾದಂತಾಗಿದೆ.