ಬೆಂಗಳೂರು: ಮಾರ್ಚ್ ತಿಂಗಳ ಕೊನೆಯವರೆಗೂ ಬಜೆಟ್ ಅಧಿವೇಶನ ನಡೆಸಲಾಗುತ್ತಿದ್ದು, ಮಾರ್ಚ್ 4 ಮತ್ತು 5 ಎರಡು ದಿನ ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಈ ಕುರಿತು ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಯ ಬಳಿಕೆ ಮಾತನಾಡಿದ ಅವರು, ರಾಜ್ಯ ಬಜೆಟ್ ಅಧಿವೇಶವನ್ನು ಮಾ.4 ರಿಂದ ಆರಂಭಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಾ.8 ರಂದು ಸಿಎಂ ಬಿ.ಎಸ್.ಯಡಿಯೂರಪ್ಪ, 2021-22ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈಗಾಗಲೇ ಬಜೆಟ್ ಗೆ ಸಂಬಂಧಿಸಿದಂತೆ ಸಿದ್ಧತೆ ನಡೆಸಲಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದಿದ್ದಾರೆ ಎಂದರು.
ಸಂಪುಟ ಸಭೆಯಲ್ಲಿ ಕೊವೀಡ್ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಗಳಿಗೆ ಸುವರ್ಣ ಕರ್ನಾಟಕ ಆರೋಗ್ಯ ಯೋಜನೆಯಡಿ 700 ಕೋಟಿ ಹಣ ಬಿಡುಗಡೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವ ಕುರಿತು ಅವರು ತಿಳಿಸಿದರು.
ಸಂಪುಟ ಸಭೆಯಲ್ಲಿ ವಿವಿಧ ಸಮುದಾಯಗಳ ಮೀಸಲಾತಿ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಹಲವು ಸಲಹೆಗಳನ್ನು ಕೇಳಿದ್ದರು. ಈ ಸಂಬಂಧಿಸಿದಂತೆ ಸಚಿವರುಗಳು ಸಿಎಂಗೆ ಸಲಹೆ ಕೊಟ್ಟಿದ್ದಾರೆ. ಆ ಸಲಹೆಗಳ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಚರ್ಚೆ ನಡೆಸಲಾಗುವುದು. ಆ ನಂತರ ಸಂವಿಧಾನದ ಚೌಕಟ್ಟಿನೊಳಗೆ ತೀರ್ಮಾನ ಮಾಡುವುದಾಗಿ ಹೇಳಿದರು.

Leave a Reply

Your email address will not be published. Required fields are marked *

You May Also Like

ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ರಾಮಣ್ಣ

ಲಕ್ಷ್ಮೇಶ್ವರ: ಸರಕಾರದ ಮೂಲಕ ಅನುದಾನ ತಂದು ಎಲ್ಲಾ ನಾಗರಿಕರಿಗೂ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ…

ಮತಾಂತರ ನಿಷೇಧ ಕಾಯ್ದೆ ವಿಧೆಯಕ ಮಂಡನೆ

ಬೆಳಗಾವಿ: ಬೆಳಗಾವಿಯ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ…

Все возможности мобильного беттинга через MostBet mobile

Все возможности мобильного беттинга через MostBet mobile Где получить промокод на Мостбет…

ಕಳೆಗಟ್ಟಿದ ಚಂದ್ರಗಿರಿ ಜಾತ್ರೆ- ಎಲ್ಲೆಲ್ಲೂ ಜನ ಸಾಗರ ಚಂದ್ರಮ್ಮನ ಸನ್ನಿಧಿಯಲ್ಲಿ ಉರುಳು ಸೇವೆ ಜೋರು

ಗುಲಾಬಚಂದ ಜಾಧವಆಲಮಟ್ಟಿ : ಹಿಂದೆಂದೂ ಕಂಡರಿಯದಂತೆ ಎತ್ತ ನೋಡಿದರು ಜನರೋ ಜನ. ಭಕ್ತಿಭಾವದ ಲೀಲೆಯಲ್ಲಿ ಹರಿದು…