ದುಬೈ : ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬೇಕಾದ ಪಂದ್ಯವನ್ನು ಹೈದ್ರಾಬಾದ್ ಕೈ ಚೆಲ್ಲಿದೆ. ಹೀಗಾಗಿ ಟೀಕೆಗಳು ವ್ಯಕ್ತವಾಗುತ್ತಿವೆ.

ಹೈದರಾಬಾದ್ ತಂಡವು ಪಂಜಾಬ್ ವಿರುದ್ಧ 12 ರನ್‌ ಗಳ ಸೋಲನುಭವಿಸಿ ಮುಖಭಂಗ ಅನುಭವಿಸಿದೆ. ಹೀಗಾಗಿ ಈ ಕುರಿತು ಮಾತನಾಡಿದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ಈ ಸೋಲು ನಮಗೆ ತುಂಬಾ ನೋವುಂಟು ಮಾಡಿದೆ.  ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಅಂದುಕೊಂಡಿದ್ದೇವು. ಆದರೆ, ಕೈ ಚೆಲ್ಲಿದೇವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ, 20 ಓವರ್‌ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 7 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತ್ತು. ಆದರೆ, ಈ ಸುಲಭದ ಮೊತ್ತ ಬೆನ್ನಟ್ಟಿದ ಹೈದರಾಬಾದ್, ಡೇವಿಡ್ ವಾರ್ನರ್ 35, ಜಾನಿ ಬೇರ್ಸ್ಟೋವ್ 19, ಮಿನೀಶ್ ಪಾಂಡೆ 15, ವಿಜಯ್ ಶಂಕರ್ 26 ರನ್‌ ನೊಂದಿಗೆ 19.5 ಓವರ್‌ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 114 ರನ್ ಗಳಿಸಲು ಮಾತ್ರ ಯಶಸ್ವಿಯಾಯಿತು. 

ಉತ್ತಮ ಬೌಲಿಂಗ್ ದಾಳಿ ಮಾಡಿದ ಮೊಹಮ್ಮದ್ ಶಮಿ 1, ಅರ್ಷ್‌ದೀಪ್ ಸಿಂಗ್ 23ಕ್ಕೆ 3, ಮುರುಗನ್ ಅಶ್ವಿನ್ 1, ರವಿ ಬಿಷ್ಣೋಯ್ 1, ಕ್ರಿಸ್ ಜೋರ್ಡನ್ 13ಕ್ಕೆ 3 ವಿಕೆಟ್ ನ ಮಾರಕ ಬೌಲಿಂಗ್ ಗೆ ಹೈದರಾಬಾದ್ ಸೋಲೋಪ್ಪಿಕೊಂಡಿತು. 

Leave a Reply

Your email address will not be published. Required fields are marked *

You May Also Like

ಇಂದು ಬಿಸಿಸಿಐ ಸಭೆ: ಐಪಿಎಲ್ ಮತ್ತೆ ಮೈದಾನಕ್ಕೆ?

ಕೋರೊನಾ ಬಿಕ್ಕಟ್ಟಿನ ಕಾರಣಕ್ಕೆ ಕ್ರಿಕೆಟ್ ಮಲಗಿದೆ. ತಿಂಗಳುಗಳ ನಂತರ ಇಂದು ಬಿಸಿಸಿಐ ಮಹತ್ವದ ಸಭೆ ನಡೆಸುತ್ತಿದ್ದು,…

ಐಪಿಎಲ್ ನಲ್ಲಿ ಮತ್ತೊಂದು ದಾಖಲೆಗೆ ಸಾಕ್ಷಿಯಾದ ಕನ್ನಡಿಗ!

ದುಬೈ : ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡದ ನಾಯಕ ಕೆ.ಎಲ್‌. ರಾಹುಲ್‌ ಅವರು ಭಾರತದ ಪರ ಮತ್ತೊಂದು ದಾಖಲೆ ಬರೆದಿದ್ದಾರೆ.

ಚೆನ್ನೈ ತಂಡದ ಕೆಲವರು ಸರ್ಕಾರಿ ನೌಕರಿ ಸಿಕ್ಕಂತೆ ಮಾಡುತ್ತಿದ್ದಾರೆ – ಸೆಹ್ವಾಗ್!

ಮುಂಬಯಿ : ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭರ್ಜರಿ ಫಾರ್ಮ್ ಗೆ ಮರಳಿದ ತಂಡದ ಸ್ಟಾರ್ ಆಟಗಾರರಿಗೆ ಗಿಫ್ಟ್ ನೀಡಿದ ಪ್ರೀತಿ ಜಿಂಟಾ!

ದುಬೈ : ಪ್ರಾರಂಭದಲ್ಲಿ ಸೋಲಿನಿಂದ ಕಂಗೆಟ್ಟಿದ್ದ ಪಂಜಾಬ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ಗೆ ಮರಳಿದೆ. ಅಲ್ಲದೇ, ಕಳೆದ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಹೀಗಾಗಿ ತಂಡದ ಮಾಲಕರಾದ ಪ್ರೀತಿ ಜಿಂಟಾ ಅವರು ತಂಡದ ನಾಯಕ ಹಾಗೂ ಗೇಲ್ ಗೆ ಉಡುಗೊರೆ ನೀಡಿದ್ದಾರೆ.