ದುಬೈ : ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡದ ನಾಯಕ ಕೆ.ಎಲ್‌. ರಾಹುಲ್‌ ಅವರು ಭಾರತದ ಪರ ಮತ್ತೊಂದು ದಾಖಲೆ ಬರೆದಿದ್ದಾರೆ.

ಸದ್ಯ ನಡೆಯುತ್ತಿರುವ ಐಪಿಎಲ್ ನಲ್ಲಿ ರಾಹುಲ್ ಅವರು ಹೆಚ್ಚು ರನ್ ಗಳನ್ನು ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸದ್ಯ 9 ಪಂದ್ಯಗಳನ್ನು ಆಡಿರುವ ರಾಹುಲ್, 525 ರನ್ ಗಳನ್ನು ಗಳಿಸಿದ್ದಾರೆ. ಈ ಮೂಲಕ ರನ್ ಗಳ ಪಟ್ಟಿ ಸತತ ಮೂರು ಐಪಿಎಲ್‌ ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ.

ಅವರ ಹಿಂದಿನ ಸ್ಥಾನವನ್ನು ಅದೇ ತಂಡದ ಮಯಾಂಕ್‌ ಅಗರ್ವಾಲ್ ಪಡೆದಿದ್ದಾರೆ. 393 ರನ್‌ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

2018ರಲ್ಲಿ ರಾಹುಲ್‌ 14 ಪಂದ್ಯಗಳನ್ನು ಆಡುವ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಹೈದರಾಬಾದ್‌ ಆಟಗಾರ ಕೇನ್‌ ವಿಲಿಯಮ್ಸನ್‌ 17 ಪಂದ್ಯಗಳನ್ನಾಡಿ 735 ರನ್‌ ಬಾರಿಸುವ ಮೂಲಕ ಮೊದಲ ಸ್ಥಾನ ಪಡೆದಿದ್ದರು. 14 ಪಂದ್ಯಗಳನ್ನಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ರಿಷಭ್‌ ಪಂತ್‌ 684 ರನ್‌ ರನ್‌ ಹೊಡೆಯುವ ಮೂಲಕ ಎರಡನೇ ಸ್ಥಾನ ಪಡೆದಿದ್ದರು.

2019ರ ಐಪಿಎಲ್ ನಲ್ಲಿ ಕೆ.ಎಲ್. ರಾಹುಲ್ 14 ಪಂದ್ಯಗಳಿಂದ 593 ರನ್‌ ಗಳಿಸುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಕಳೆದ ವರ್ಷ ಡೇವಿಡ್‌ ವಾರ್ನರ್‌ 12 ಪಂದ್ಯಗಳಿಂದ 692 ರನ್‌ ಗಳಿಸಿ ಮೊದಲ ಸ್ಥಾನ ಗಳಿಸಿದ್ದರು.

Leave a Reply

Your email address will not be published. Required fields are marked *

You May Also Like

ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಚಟುವಟಿಕೆ ಉದ್ಘಾಟನೆ

ಉತ್ತರಪ್ರಭ ಸುದ್ದಿ ಲಕ್ಷ್ಮೇಶ್ವರ: ಪಟ್ಟಣದ ಶ್ರೀಮತಿ ಕಮಲಾ ಮತ್ತು ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಕಾಲೇಜಿನ…

ಚಿಕ್ಕ ವಯಸ್ಸಿನಲ್ಲಿಯೇ ಐಪಿಎಲ್ ನಲ್ಲಿ ಅಬ್ಬರಿಸಿದ ವೀರರು ಇವರು!

ದುಬೈ : ಐಪಿಎಲ್ ನ 6ನೇ ಪಂದ್ಯದ ಸಮಯದಲ್ಲಿ ಭಾರತದ ಯುವ ಆಟಗಾರ ಪೃಥ್ವಿ ಶಾ…

ಆರಂಭಿಕ ಪಂದ್ಯಗಳಲ್ಲಿ ಕೊಹ್ಲಿ ವಿಫಲವಾಗಿದ್ದೇಕೆ?

ದುಬೈ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ ವೈಫಲ್ಯ ಅನುಭವಿಸಿರುವ ಹಿಂದಿನ ಕಾರಣವನ್ನು ಕಿಂಗ್ ಕೊಹ್ಲಿ ಬಿಚ್ಚಿಟ್ಟಿದ್ದಾರೆ.