ಕೋರೊನಾ ಬಿಕ್ಕಟ್ಟಿನ ಕಾರಣಕ್ಕೆ ಕ್ರಿಕೆಟ್ ಮಲಗಿದೆ. ತಿಂಗಳುಗಳ ನಂತರ ಇಂದು ಬಿಸಿಸಿಐ ಮಹತ್ವದ ಸಭೆ ನಡೆಸುತ್ತಿದ್ದು, ದೇಶದಲ್ಲಿ ಮತ್ತೆ ಕ್ರಿಕೆಟ್ ಜ್ವರ ಶುರುವಾಗಬಹುದೇ ಎಂದು ಕಾಯಲಾಗುತ್ತಿದೆ.

ಮುಂಬೈ: ಇಂದು ಶುಕ್ರವಾರ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸಭೆ ನಡೆಸುತ್ತಿದ್ದು ಕ್ರಿಕೆಟ್ ಮರು ಆರಂಭ ಸೇರಿದಂತೆ 11 ವಿಷಯಗಳ ಮೇಲೆ ಚರ್ಚೆ ನಡೆಯಲಿದ್ದು, ಬಹು ನಿರೀಕ್ಷಿತ ಐಪಿಎಲ್ ಮತ್ತೆ ಜೀವ ಪಡೆಯಬಹುದೇ ಎಂದು ಕ್ರಿಕೆಟ್ ಪ್ರಿಯರು ಕಾಯುತ್ತಿದ್ದಾರೆ.

ಬೋರ್ಡ್ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಇತರ 7 ಅಧಿಕಾರಿಗಳಿರುವ ಇರುವ ಅಪೆಕ್ಸ್ ಕೌನ್ಸಿಲ್ ಇಂದು ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದೆ.

ಇಂದಿನ ಸಭೆಯ ಅಜೆಂಡಾ ಹೀಗಿದೆ:

· 2020ರ ಐಪಿಎಲ್ ಲೀಗ್

· ರಣಜಿ ಮುಂತಾದ ದೇಶೀಯ ಕ್ರಿಕೆಟ್ ಆಯೋಜನೆ

· ಭಾರತ ತಂಡದ ಇಂಗ್ಲೆಂಡ್ ಪ್ರವಾಸ

· ಟಿ-20 ವಿಶ್ವಕಪ್ ಟೂರ್ನಾಮೆಂಟಿಗೆ ಸರ್ಕಾರದಿಂದ ತೆರಿಗೆ ವಿನಾಯಿತಿ.

ಸದ್ಯಕ್ಕೆ ಕ್ರಿಕೆಟ್ ಪ್ರಿಯರ ಚಿತ್ತ ಮಾತ್ರ ಐಪಿಎಲ್ ಲೀಗ್ ಕಡೆ ಇರುವುದರಿಂದ ಈ ಸಭೆಗೆ ಮಹತ್ವ ಬಂದಿದೆ. ಈಗ ಇಂಗ್ಲೆಂಡಿನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಕೋರೋನಾ ನಿಯಮಗಳನ್ನು ಪಾಲಿಸಿ ಮೊದಲ ಟೆಸ್ಟ ಅನ್ನು ಯಶಸ್ವಿಯಾಗಿ ಮುಗಿಸಿದ್ದು, 2ನೆ ಟೆಸ್ಟ್ ಕೂಡ ಆರಂಭವಾಗಿದೆ. ಹೀಗಾಗಿ ದೇಶದಲ್ಲೂ ಕೋರೊನಾ ನಿಯಂತ್ರಣ ನಿಯಮ ಪಾಲಿಸಿ ಕ್ರಿಕೆಟ್ ಮರು ಆರಂಭ ಮಾಡಬಹುದು ಎನ್ನುವ ಮಾತುಗಳಿವೆ.

Leave a Reply

Your email address will not be published. Required fields are marked *

You May Also Like

10 ರಂದು ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಉತ್ತರಪ್ರಭ ಸುದ್ದಿಆಲಮಟ್ಟಿ: ಆಲಮಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಎಲ್ಲ ವಯೋಮಾನದ ಗ್ರಾಮೀಣ ಕ್ರೀಡಾಸಕ್ತರಿಗಾಗಿ ದಿ,10 ರಂದು…

ಅನಿಲ್ ಕುಂಬ್ಳೆಗೆ ಶುಭಾಶಯ ಕೋರಿ ಸಾಧನೆ ಕೊಂಡಾಡಿದ ಸುದೀಪ್!

ಬೆಂಗಳೂರು : ಕಿಚ್ಚ ಸುದೀಪ್ ಅವರು ಮಾಜಿ ಕ್ರಿಕೆಟ್ ಅನಿಲ್ ಕುಂಬ್ಳೆ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ, ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಐಸಿಸಿಯು ಟೆಸ್ಟ್ ನೂತನ ಪಟ್ಟಿ ಪ್ರಕಟ: ಪಾರಮ್ಯ ಮೆರೆದ ಆಸ್ಟ್ರೇಲಿಯಾ

ಐಸಿಸಿಯು ಟೆಸ್ಟ್ ರ್ಯಾಂಕಿಂಗ್ ನೂತನ ಪಟ್ಟಿ ಪ್ರಕಟಿಸಿದ್ದು, ಆಸ್ಟ್ರೇಲಿಯಾ ತನ್ನ ಪಾರಮ್ಯ ಮೆರೆದಿದೆ. ಬ್ಯಾಟಿಂಗ್ ರ್ಯಾಂಡಕಿಂಗ್‌ನಲ್ಲಿ ಇಬ್ಬರು ಹೆಚ್ಚುವರಿ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲಿದ್ದ ಅದೇ 2ನೇ ಸ್ಥಾನದಲ್ಲಿದ್ದರೆ, ಬೌಲಿಂಗ್ ರ್ಯಾಂೊಕಿಂಗ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಉದ್ಘಾಟನೆ

ಉತ್ತರಪ್ರಭ ಸುದ್ದಿ ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ.…