ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬಹುದಾದ ತಂಡ ಕೈಬಿಟ್ಟಿದ್ದಕ್ಕೆ ನಾಯಕ ಹೇಳಿದ್ದೇನು?

ದುಬೈ : ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬೇಕಾದ ಪಂದ್ಯವನ್ನು ಹೈದ್ರಾಬಾದ್ ಕೈ ಚೆಲ್ಲಿದೆ. ಹೀಗಾಗಿ ಟೀಕೆಗಳು ವ್ಯಕ್ತವಾಗುತ್ತಿವೆ.

ಹೈದರಾಬಾದ್ ತಂಡವು ಪಂಜಾಬ್ ವಿರುದ್ಧ 12 ರನ್‌ ಗಳ ಸೋಲನುಭವಿಸಿ ಮುಖಭಂಗ ಅನುಭವಿಸಿದೆ. ಹೀಗಾಗಿ ಈ ಕುರಿತು ಮಾತನಾಡಿದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ಈ ಸೋಲು ನಮಗೆ ತುಂಬಾ ನೋವುಂಟು ಮಾಡಿದೆ.  ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಅಂದುಕೊಂಡಿದ್ದೇವು. ಆದರೆ, ಕೈ ಚೆಲ್ಲಿದೇವು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ, 20 ಓವರ್‌ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 7 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತ್ತು. ಆದರೆ, ಈ ಸುಲಭದ ಮೊತ್ತ ಬೆನ್ನಟ್ಟಿದ ಹೈದರಾಬಾದ್, ಡೇವಿಡ್ ವಾರ್ನರ್ 35, ಜಾನಿ ಬೇರ್ಸ್ಟೋವ್ 19, ಮಿನೀಶ್ ಪಾಂಡೆ 15, ವಿಜಯ್ ಶಂಕರ್ 26 ರನ್‌ ನೊಂದಿಗೆ 19.5 ಓವರ್‌ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 114 ರನ್ ಗಳಿಸಲು ಮಾತ್ರ ಯಶಸ್ವಿಯಾಯಿತು. 

ಉತ್ತಮ ಬೌಲಿಂಗ್ ದಾಳಿ ಮಾಡಿದ ಮೊಹಮ್ಮದ್ ಶಮಿ 1, ಅರ್ಷ್‌ದೀಪ್ ಸಿಂಗ್ 23ಕ್ಕೆ 3, ಮುರುಗನ್ ಅಶ್ವಿನ್ 1, ರವಿ ಬಿಷ್ಣೋಯ್ 1, ಕ್ರಿಸ್ ಜೋರ್ಡನ್ 13ಕ್ಕೆ 3 ವಿಕೆಟ್ ನ ಮಾರಕ ಬೌಲಿಂಗ್ ಗೆ ಹೈದರಾಬಾದ್ ಸೋಲೋಪ್ಪಿಕೊಂಡಿತು. 

Exit mobile version