ಎದೆ ತುಂಬಿ ಹಾಡುವ ಮೂಲಕ ಜನರ ಮನಗೆದ್ದು ಲಕ್ಷಾಂತರ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಎಸ್ಪಿಬಿ ಹಾಡು ಯಾರಿಗೆ ಇಷ್ಟವಿಲ್ಲ ಹೇಳಿ. ಆ ಹೆಸರಲ್ಲಿಯೇ ಒಂದು ಕಂಠವಿದೆ, ರೋಮಾಂಚನವಿದೆ. ಆಕರ್ಶಣೆ ಇದೆ. ಆದರೆ ಇಂದು ತೀವ್ರ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎನ್ನುವುದು ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. 

ದಕ್ಷಿಣ ಭಾರತದ ಒಂದು ಪುಟ್ಟ ಗ್ರಾಮದಲ್ಲಿ ಹುಟ್ಟಿ ಭಾರತದ ಶ್ರೇಷ್ಠ ಗಾಯಕರ ಸ್ಥಾನಕ್ಕೇರಿದವರು ಎಸ್.ಪಿ.ಬಾಲಸುಬ್ರಮಣ್ಯಂ. ನಾಲ್ಕು ದಶಕ್ಕೂ ಹೆಚ್ಚು ಕಾಲದಿಂದ ಐದು ಭಾಷೆಗಳಲಿ 30 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಹೆಗ್ಗಳಿಕೆ ಈ ಮಹಾನ್ ಗಾಯಕರದ್ದು.

ಮೂಲ ಆಂಧ್ರದವರಾದರೂ ಕನ್ನಡ ಕರಗತ

ಆಂಧ್ರಪ್ರದೇಶದ ನೆಲ್ಲೂರ್ ಸಮೀಪದ ಕೋನೆತಮ್ಮಪೇಟ ಎಸ್ಪಿಬಿ ಹುಟ್ಟೂರು. 1946ರ ಜೂನ್ 4ರಂದು ಹುಟ್ಟಿದ ದಿನ. ಚಿಕ್ಕಂದಿನಿಂದಲೇ ಸಂಗೀತ ಕಡೆಗೆ ಆಸಕ್ತರಾದರು. ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು, ಚಿತ್ರಗೀತೆಗಳನ್ನು ಹಾಡುವುದು ಎಸ್ಪಿಬಿ ನೆಚ್ಚಿನ ಕೆಲಸವಾಯಿತು.

ತಂದೆ ಆಸೆಯಂತೆ ಜೆಎನ್‍ಟಿಯು ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಲು ಪ್ರವೇಶ ಪಡೆದರು. ಆದರೆ ಅನಾರೋಗ್ಯದ ಕಾರಣ ಪರೀಕ್ಷೆಗೆ ಹಾಜರಾಗಲು ಆಗಲಿಲ್ಲ. ನಂತರ ಇನ್‍ಸ್ಟಿಟ್ಯೂಷನ್ ಆಪ್ ಎಂಜಿನಿಯರ್ಸ್ ಸಂಸ್ಥೆಗೆ ಸೇರಿ ಎಎಂಐಇ ಕೋರ್ಸ್ ಮುಗಿಸಿದರು.  ಈ ಬೆಳವಣಿಗೆ ಎಸ್ಪಿಬಿ ಸಂಗೀತದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶ ಒದಗಿಸಿತು.

ತಮ್ಮ ಹವ್ಯಾಸವನ್ನು ಕೈಬಿಡದೆ ನಿರಂತರವಾಗಿ ಹಾಡುತ್ತಿದ್ದರು. ಅಷ್ಟೇ ಅಲ್ಲ, ಕೊಳಲು, ಹಾರ್ಮೋನಿಯಂ ನುಡಿಸುವುದನ್ನೂ ಕಲಿತರು.  1964ರಲ್ಲಿ ಚೆನ್ನೈನಲ್ಲಿ ತೆಲುಗು ಸಾಂಸ್ಕೃತಿಕ ಸಂಘಟನೆಯೊಂದು ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೊದಲ ಬಹುಮಾನ ಪಡೆದರು.

ಆಗ ಬಾಲು ಅವರಿಗೆ 18 ವರ್ಷ.  ಔಪಚಾರಿಕವಾಗಿ ಸಂಗೀತವನ್ನು ಕಲಿಯದೆ, ಶಾಸ್ತ್ರೀಯ ಸಂಗೀತದ ಜ್ಞಾನವಿಲ್ಲದೆಯೇ ಹಾಡಿದ್ದರೂ ಕೇಳುಗರ ಮನವನ್ನೂ, ಸ್ಪರ್ಧೆಯ ತೀರ್ಪುಗಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಕೋದಂಡಪಾಣಿ ಕಣ್ಣಿಗೆ ಬಿದ್ದ ಬಾಲು

ಈ ಕಾರ್ಯಕ್ರಮದಲ್ಲಿ ಇವರನ್ನು ನೋಡಿದ ಸಂಗೀತ ನಿರ್ದೇಶಕ ಎಸ್.ಪಿ.ಕೋದಂಡಪಾಣಿ 1966ರಲ್ಲಿ ತಾವು ಸಂಗೀತ ನೀಡಿದ ಚಿತ್ರದಲ್ಲಿ ಹಾಡುವ ಅವಕಾಶ ನೀಡಿದರು. “ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ” ಚಿತ್ರದ ಮೂಲಕ ಎಸ್.ಪಿ.ಬಾಲಸುಬ್ರಮಣ್ಯಂ ಹಿನ್ನೆಲೆ ಗಾಯಕರಾದರು. ಹೇಮಾಮ್‍ಬರಧರ ರಾವ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಎಸ್ಪಿಬಿ ಎರಡು ಗೀತೆಗಳನ್ನು ಹಾಡಿದರು.  ಮರುವರ್ಷ  ಎಂ.ಜಿ.ಆರ್ ನಟಿಸಿದ `ಆದಿಮೈ ಪೆಣ್’ ಚಿತ್ರದಲ್ಲಿ ಹಾಡಿದರು. ಇದು ಬ್ರೇಕ್ ಕೊಟ್ಟಿತು.

ಇಲ್ಲಿಂದ ಆರಂಭವಾದ ಈ ಗೀತಯಾತ್ರೆ ನಾಲ್ಕು ದಶಕಗಳ ಕಾಲ ನಿಲ್ಲದೆ ಸಾಗಿತು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ನೂರಾರು ಚಿತ್ರಗಳಲ್ಲಿ ಎಸ್ಪಿಬಿ ಹಾಡಿದರು. ಹೀಗೆ ಅವರು ಹಾಡಿದ ಚಿತ್ರಗೀತೆಗಳ ಸಂಖ್ಯೆ 30ಸಾವಿರಕ್ಕೂ ಅ„ಕ. ಶಾಸೀಯ ಸಂಗೀತದ ಹಿನ್ನೆಲೆ ಇಲ್ಲದೆಯೇ ಹಿನ್ನೆಲೆಗಾಯನದಲ್ಲಿ ಎಸ್ಪಿಬಿ ಮಾಡಿದ ಸಾಧನೆ ನೋಡಿ ಇಡೀ ಚಿತ್ರರಂಗವೇ ಬೆರಗಾಯಿತು.

ತಮಿಳಿನಲ್ಲಿ ಎಂ.ಎಸ್.ವಿಶ್ವನಾಥನ್, ಕನ್ನಡದಲ್ಲಿ ಜಿ.ಕೆ.ವೆಂಕಟೇಶ್ ಎಸ್ಪಿಬಿ ಸಾಮಥ್ರ್ಯವನ್ನರಿತು ಬೆನ್ನು ತಟ್ಟಿದರು. ಮಲಯಾಳಂ ಖ್ಯಾತ ಹಿನ್ನೆಲೆ ಗಾಯಕ ಜೇಸುದಾಸ್, `ನಿನಗೆ ಶಾಸೀಯ ಸಂಗೀತ ಗೊತ್ತಿಲ್ಲದಿದ್ದರೇನಂತೆ, ಸಂಗೀತಕ್ಕೆ ನೀನ್ಯಾರೆಂದು ಗೊತ್ತು. ನೀನು ಹಾಡುತ್ತಿರು’ ಎಂದು ಧೈರ್ಯ ತುಂಬಿದ್ದರು.  ಎಸ್ಪಿಬಿ ಹಿರಿಯರ ಮಾತು, ತಮ್ಮ ಪರಿಶ್ರಮವನ್ನು ನಂಬಿ ಎಸ್ಪಿಬಿ ಹಿನ್ನೆಲೆಗಾಯನದ ರಾಜ್ (ಪ್ಲೇಬ್ಯಾಕ್ ಕಿಂಗ್) ಪಟ್ಟಕ್ಕೇರಿದರು. ದಶಕಗಳ ಕಾಲ ಈ ಸ್ಥಾನವನ್ನು ಉಳಿಸಿಕೊಂಡರು.

ಬೇಡಿಕೆಯ ಗಾಯಕ..

ತೆಲುಗು ಚಿತ್ರಪ್ರೇಮಿಗಳಿಗೆ ಇವರ ಪರಿಚಯವಾಗುವ ಹೊತ್ತಿಗೆ ಇತರೆ ಭಾಷೆಗಳಿಂದಲೂ ಆಹ್ವಾನ ಬಂದವು. ಕನ್ನಡದಲ್ಲಿ ಬಾಲು ಹಲವು ಚಿತ್ರಗಳಲ್ಲಿ ಹಾಡಿದರು. ನಟಿಸಿದರೂ ಕೂಡ. ತಿರುಗುಬಾಣ, ಬಾಳೊಂದು ಚದುರಂಗ ಸೇರಿದಂತೆ ಹತ್ತು ಹಲವು ಚಿತ್ರಗಳಿಗೆ ಹಾಡಿದರು. ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದಲ್ಲಿ ಇವರು ಹಾಡಿದ  `ಉಮಂಡು, ಘುಮಂಡು..’ ಶಾಸೀಯಹಿನ್ನೆಲೆಯ ಗೀತೆಗೆ ರಾಷ್ಟ್ರಪ್ರಶಸ್ತಿಯೂ ಬಂತು. ಇದೇ ರೀತಿಯಲ್ಲಿ ಎಸ್ಪಿಬಿ ಹಿಂದಿ ಚಿತ್ರರಂಗದಲ್ಲೂ ತಮ್ಮ ಗಾಯನ ಪ್ರತಿಭೆ ಪ್ರದರ್ಶಿಸುವ ಅವಕಾಶ ಲಭಿಸಿತು. 1981ರಲ್ಲಿ ತೆರೆ ಕಂಡ ಕೆ.ಬಾಲಚಂದರ್ ನಿರ್ದೇಶನದ  `ಏಕ್ ದುಜೆ ಕೇ ಲಿಯೆ’ ಚಿತ್ರದಲ್ಲಿ ಐದು ಹಾಡುಗಳನ್ನು ಹಾಡಿದರು. `ತೇರೆ ಮೇರೆ ಬೀಚ್ ಮೆ..’, `ಹಮ್ ತುಮ್ ದೋನೋ..’, `ಮೇರೆ ಜೀವನ್ ಸಾಥಿ,…’, `ಹಮ್ ಬನೆ ತುಮ್ ಬನೆ..’ ಗೀತೆಗಳನ್ನು ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್ ಜತೆ ಹಾಡಿದರು. ಈ ಚಿತ್ರವು ಎಸ್ಪಿಬಿಗೆ ಹಿಂದಿ ಚಿತ್ರರಂಗದಲ್ಲೂ ಬೇಡಿಕೆ ಹುಟ್ಟಿಸಿತು. ಅದೇ ವರ್ಷ  ಏಕ್ ಹೀ ಭೂಲ್ ಚಿತ್ರದಲ್ಲಿ ಹಾಡಿದರು. ಮರುವರ್ಷ ಯೆ ಥೊ ಕಮಾಲ್ ಹೋ ಗಯಾ ಚಿತ್ರದಲ್ಲಿ ಹಾಡುವ ಅವಕಾಶವೂ ದೊರೆಯಿತು. ನಂತರ ಒಂದು ದಶಕದ ಅವ„ಯಲ್ಲಿ  ಸಪ್ನೆ, ಹಮ್ ಆಪ್ ಕೆ ಹೈ ಕೌನ್, ಮೈನೇ ಪ್ಯಾರ್ ಕಿಯಾ, ರೋಜಾ ಚಿತ್ರಗಳಲ್ಲಿ ಹಾಡಿ ಎಸ್ಪಿಬಿ ಹಿಂದಿ ಚಿತ್ರಪ್ರೇಮಿಗಳ ಹೃದಯ ಗೆದ್ದರು.

ಕಿರುತೆರೆಯಲ್ಲಿ ಗುರು

ಚಿತ್ರಗಳಲ್ಲಿ ಹಾಡಿ, ಸಂಗೀತ, ನಟನೆ ಮಾಡಿದ ಎಸ್ಪಿಬಿ ಕಿರುತೆರೆ ಕಾಲಿಟ್ಟರು. ಇಲ್ಲವರು ಹಾಡಿನ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಂಗೀತದ ಒಳಹೊರಗನ್ನು ಸ್ಪರ್ಗಳಿಗೆ ತಿಳಿಸುವ ಹೊಣೆ ಹೊತ್ತರು. ಈ ಟೀವಿ ಕನ್ನಡದ ` ಎದೆ ತುಂಬಿ ಹಾಡುವೆನು..’, ಈ ಟೀವಿ ತೆಲುಗಿನ ` ಪಾಡುತಾ ತೀಯಗಾ..’, ಮಾ ಟೀವಿಯ `ಪಾಡಲಾನಿ ಉಂದಿ’, ಜಯ ಟೀವಿಯ , `ಎನ್ನೊಡು ಪಾಟ್ಟು ಪಾಡುಂಗಳ್’, ಕಲೈನಾರ್ ಟೀವಿಯ ` ವಾನಂ ಪಾಡಿ’ ಶೋಗಳಲ್ಲಿ ಎಸ್ಪಿಬಿ ಕಾರ್ಯಕ್ರಮ ನಿರೂಪಕರಾಗಿ, ತೀರ್ಪುಗಾರರಾಗಿ ಕಾಣಿಸಿಕೊಂಡರು. ಈ ಶೋಗಳಲ್ಲಿ ಎಸ್ಪಿಬಿ ತಮ್ಮ ವೃತ್ತಿ ಜೀವನದ ಹಲವು ಅನುಭವಗಳನ್ನು, ಸಂಗೀತ ಜ್ಞಾನವನ್ನು ಸ್ಪರ್„ಗಳೊಂದಿಗೆ ಹಂಚಿಕೊಂಡರು. ಈ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದವು.

ಎಸ್ಪಿಬಿ ಅವರ ಟಾಪ್ ಕನ್ನಡ ಹಾಡುಗಳನ್ನು ನೀವು ಕೇಳಿ..

ಎಸ್ಪಿಬಿ ಅವರ ಟಾಪ್ ಹಿಂದಿ ಹಾಡುಗಳನ್ನು ನೀವು ಕೇಳಿ..

ಎಸ್ಪಿಬಿ ಅವರ ಟಾಪ್ ತೆಲಗು ಹಾಡುಗಳನ್ನು ನೀವು ಕೇಳಿ..

ಎಸ್ಪಿಬಿ ಅವರ ಟಾಪ್ ತಮಿಳು ಹಾಡುಗಳನ್ನು ನೀವು ಕೇಳಿ..

https://www.youtube.com/watch?v=p3R5QsncNKA
Leave a Reply

Your email address will not be published. Required fields are marked *

You May Also Like

ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಮತ್ತು ಶಿವರಾಜ ಕುಮಾರ ಕೆಲವೇ ಕ್ಷಣಗಳಲ್ಲಿ ಜಂಟಿ ಸುದ್ದಿ ಗೋಷ್ಠಿ

ಬೆಂಗಳೂರಿನ ವಿಕ್ರಮ್ ಆಸ್ಪತ್ರೆ ಅವರ ಅಭಿಮಾನಿಗಳು ದೌಡು ಹೆಚ್ಚಿನ ಪೊಲೀಸ್ ಬೀಗಿ ಬಂದೋಬಸ್ತ ಮಾಡಲಾಗಿದ್ದು .ರಾಜ್ಯಾದ್ಯಂತ ಅವರ ಅಭಿಮಾನಿಗಳು ಬೇಗ ಗುಣಮುಖರಾಗಿ ಅಪ್ಪು ಬರಲಿ ಎಂದು ಪ್ರಾರ್ಥನೆ ಮಾಡುತ್ತಿರುವ ಬೆನ್ನಲ್ಲೆ ಕೆಲವೇ ಕ್ಷಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಸಿಎಂ ಮಾತನಾಡಲಿದ್ದಾರೆ. ಅಸ್ಪತ್ರೆಯತ್ತ ಚಿತ್ರರಂಗದ ಗಣ್ಯರು ,ರಾಜಕೀಯ ಮುಖಂಡರು ಚಿತ್ರರಂಗದ ಚಟುವಟಿಕೆಗಳನ್ನು ಬದಿಗೊತ್ತಿ ಎಲ್ಲರೂ ವಿಕ್ರಮ್ ಆಸ್ಪತ್ರೆಯತ್ತ ಬರುತ್ತಿದ್ದು ಕ್ಷಣಕ್ಷಣಕ್ಕೂ ಪುನೀತ್ ರಾಜಕುಮಾರ ಅವರ ಆರೋಗ್ಯ

ವಿರಾಟ್ ಕೊಹ್ಲಿ ಅನುಷ್ಕಾಗೆ ವಿಚ್ಛೇದನ ಕೊಡಬೇಕು ಎಂದವರಾರು? ಏಕೆ?

ಮುಂಬಯಿ: ಬಾಲಿವುಡ್ ಮತ್ತು ಕ್ರಿಕೆಟ್ ನಂಟು ತೀರಾ ಹಳೆಯದು. ಅದಕ್ಕೆ ಇತ್ತೀಚೆಗೆ ಮತ್ತೊಂದು ಕೊಂಡಿ ಬೆಸೆದವರು…

ಶೂಟಿಂಗ್ ಮುಗಿಸಿ ಬರುತ್ತಿದ್ದ ವೇಳೆ ಅಲ್ಲು ಅರ್ಜುನ್ ಕಾರ್ ಗೆ ಅಪಘಾತ!

ಮುಂಬಯಿ : ಶೂಟಿಂಗ್ ಮುಗಿಸಿ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್ ಅವರ ಕ್ಯಾರವಾನ್ ಗೆ ಹಿಂದಿನಿಂದ ಲಾರಿ ಗುದ್ದಿದ ಘಟನೆ ನಡೆದಿದೆ.

ವೈಯಕ್ತಿಕ ಸೌಂದರ್ಯ ವರ್ಧಕಕ್ಕೆ ಹೊಸ ಬ್ರ್ಯಾಂಡ್ ಬಿಡುಗಡೆ ಮಾಡಿದ ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ FRSH ಹೆಸರಿನ ವೈಯಕ್ತಿಕ ಸೌಂದರ್ಯ ಬ್ರಾಂಡ್ ಬಿಡುಗಡೆ ಮಾಡಿದ್ದಾರೆ. ವೈಯಕ್ತಿಕ ಉಡುಪು, ದೇಹದಾರ್ಡ್ಯ ಸಲಕರಣೆ, ಜಿಮ್ ಮತ್ತು ಈ-ಸೈಕಲ್ ಬಿಡುಗಡೆಯ ನಂತರ ಇದೀಗ ಹೊಸ ಬ್ರಾಂಡ್ ಪರಿಚಯಿಸಿದ್ದಾರೆ.