ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ FRSH ಹೆಸರಿನ ವೈಯಕ್ತಿಕ ಸೌಂದರ್ಯ ಬ್ರಾಂಡ್ ಬಿಡುಗಡೆ ಮಾಡಿದ್ದಾರೆ. ವೈಯಕ್ತಿಕ ಉಡುಪು, ದೇಹದಾರ್ಡ್ಯ ಸಲಕರಣೆ, ಜಿಮ್ ಮತ್ತು ಈ-ಸೈಕಲ್ ಬಿಡುಗಡೆಯ ನಂತರ ಇದೀಗ ಹೊಸ ಬ್ರಾಂಡ್ ಪರಿಚಯಿಸಿದ್ದಾರೆ. ಸೆಲೆಬ್ರಿಟಿಗಳ ಸೌಂದರ್ಯ ವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಈ ಬ್ರಾಂಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ತಮ್ಮ ಬ್ರಾಂಡ್ ಗಳನ್ನು ಯೋಜಿತ ಮಾರುಕಟ್ಟೆಗೆ ಪರಿಚಯಿಸುವ ಕೆಲಸವನ್ನು ಸಲ್ಮಾನ್ ಖಾನ್ ಕೆಲವು ದಿನಗಳಿಂದ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಆರೋಗ್ಯಕರ ಜೀವನಶೈಲಿಯ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಇದಕ್ಕೂ ಮುನ್ನ ಅವರು ಯಶಸ್ವಿ ಉದ್ಯಮಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಇದೀಗ FRSH ಅಡಿಯಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಮೊಟ್ಟಮೊದಲ ಉತ್ಪನ್ನವಾಗಿ ಬಿಡುಗಡೆ ಮಾಡಿದ್ದಾರೆ. ಇದು ಸದ್ಯಕ್ಕೆ ದೈನಂದಿನ ಅಗತ್ಯ ವಸ್ತುವಾಗಿ ಬದಲಾಗಿದೆ.  

FRSH ಬ್ರಾಂಡ್ ಅನ್ನು ಕಳೆದ ಕೆಲವು ವರ್ಷಗಳಿಂದ ಪರಿಣತರ ತಂಡ ರೂಪಿಸಿದೆ. ಇದೀಗ ಎಲ್ಲ ಪ್ರಯೋಗಗಳ ನಂತರ ಕೆಲವು ತಿಂಗಳುಗಳ ಅಂತರದಲ್ಲಿ ಮಾರುಕಟ್ಟೆಗೆ ಈ ಬ್ರಾಂಡ್ ಗಳು ಬಿಡುಗಡೆಯಾಗಲು ವೇದಿಕೆ ಸಿದ್ಧವಾಗಿದೆ. ಇವು ಸೌಂದರ್ಯ ವರ್ಧಕಗಳಾಗಿದ್ದು, ಕೆಲವೇ ದಿನಗಳಲ್ಲಿ ಜನರ ಕೈ ಸೇರಲಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಜನರಿಗೆ ನೀಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಇದರ ಭಾಗವಾಗಿ FRSH ಕಾರ್ಯರೂಪಕ್ಕೆ ಬರುತ್ತಿದೆ. ಇದರ ಅಡಿಯಲ್ಲಿ ಮೊದಲ ಉತ್ಪನ್ನವಾಗಿ ಸ್ಯಾನಿಟೈಜರ್ಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನಷ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊಪ್ಪಳದಲ್ಲೂ ಕೊರೋನಾ ಸಪ್ಪಳ: ಮೂರು ಪಾಸಿಟಿವ್ ದೃಢ

ಕೊಪ್ಪಳ: ಈವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದೇ ಕೊಪ್ಪಳ ಜಿಲ್ಲೆ ಗ್ರೀನ್ ಝೋನ್ ನಲ್ಲಿತ್ತು. ಆದರೆ ಇದೀಗ…

ಸತ್ತಲ್ಲಿ 20 ಜನರಿರಬೇಕು…ಮದ್ಯಕ್ಕೆ ಮಾತ್ರ ಸಾವಿರ ಜನರಿದ್ದರೂ ಸೈ!!

ಅಂತ್ಯ ಸಂಸ್ಕಾರಕ್ಕೆ 20 ಜನರ ಸೇರುವಂತಿಲ್ಲ. ಆದರೆ, ಮದ್ಯದಂಗಡಿಯ ಮುಂದೆ 1 ಸಾವಿರ ಜನರು ನಿಲ್ಲಬಹುದೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಟೀಕೆ ಮಾಡಿದೆ.

ಬಿಜೆಪಿಯಿಂದ ಎಂಎಲ್ಸಿ ಆಗಬೇಕಂತಾರಾ ವಾಟಾಳ್ ನಾಗರಾಜ್..?

ನ್ನಡಪರ ಹೋರಾಟಗಾರ, ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಬಿಜೆಪಿ ಸೇರ್ತಾರಾ..? ಹೀಗೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ.

ಈ ನಟಿಗೆ ಸಹಾಯ ಮಾಡಿದ ಮೇಕಪ್ ಮ್ಯಾನ್!

ಕಿರುತೆರೆ ನಟಿಯೊಬ್ಬರು ಆರ್ಥಿಕ ಕಷ್ಟಕ್ಕೆ ಸಿಲುಕಿದ್ದಾಗ ಮೇಕಪ್ ಮ್ಯಾನ್ ಸಹಾಯ ಮಾಡುವುದಾಗಿ ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.