ಮುಂಬಯಿ: ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟು ಹಬ್ಬವಿಂದು. ಹೀಗಾಗಿ ಸೆಲೆಬ್ರಿಟಿಗಳು ಹಾಗೂ ನಾಯಕರು, ಅಭಿಮಾನಿಗಳು ಖುಷಿಯಿಂದ ಶುಭಾಶಯ ತಿಳಿಸುತ್ತಿದ್ದಾರೆ.
ಅವರ ಹುಟ್ಟು ಹಬ್ಬದ ಅಂಗವಾಗಿ ಚಿರು ಅವರು ಕಾಮನ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಟೀಸರ್ ಶೇರ್ ಮಾಡಿರುವ ಕನ್ನಡ ನಟ ಕಿಚ್ಚ ಸುದೀಪ್ ಮತ್ತು ಸಂಸದೆ ಸುಮಲತಾ ಅವರು ತೆಲುಗು ಚಿರಂಜೀವಿಗೆ ವಿಶ್ ಮಾಡಿದ್ದಾರೆ.
ಅದ್ಭುತ ಪ್ರದರ್ಶನಕಾರ, ಮೆಗಾ ಸ್ಟಾರ್ಡಮ್, ಸರಳ ವ್ಯಕ್ತಿತ್ವ, ಉತ್ತಮ ಕುಟುಂಬ ವ್ಯಕ್ತಿ ಮತ್ತು ಅದ್ಭುತ ಸ್ನೇಹಿತ ಮತ್ತು ಸಹೋದ್ಯೋಗಿ, ನೀವೊಬ್ಬ ಸಂಪೂರ್ಣ ವ್ಯಕ್ತಿ….ನೀವು ಸದಾ ಆರೋಗ್ಯದಿಂದ ಹಾಗೂ ಸಂತೋಷದಿಂದ ಇರಲಿ ಎಂದು ಬಯಸುತ್ತೇನೆ ಎಂದು ಸಂಸದೆ ಸುಮಲತಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಚಿರಂಜೀವಿ ಹುಟ್ಟುಹಬ್ಬಕ್ಕೆ ನಟ ಕಿಚ್ಚ ಸುದೀಪ್ ಸಹ ವಿಶ್ ಮಾಡಿದ್ದಾರೆ. ಮೆಗಾಸ್ಟಾರ್ ಬರ್ತಡೇ ವಿಶೇಷವಾಗಿ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಹಂಚಿಕೊಂಡಿರುವ ಸುದೀಪ್, ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹಾರೈಸಿದ್ದಾರೆ.