ದೆಹಲಿ: ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಸಚಿವ ಶ್ರೀಪಾದ್ ಯಶೊ ನಾಯಕ್  ಅವರಿಗೆ ತಮಿಳು ನಾಡಿನ ಲೋಕಸಭಾ ಸದಸ್ಯ ಕನಿಮೋಜಿ ಕರುಣಾನಿಧಿ ಪತ್ರ ಬರೆದಿದ್ದಾರೆ.

ಆಯುಷ್ ಇಲಾಖೆಯ ವೆಬಿನಾರ್ ಮತ್ತು ಸೆಮಿನಾರ್ ಗಳು ಹಿಂದಿ ಭಾಷೆಯಲ್ಲಿ ಮಾಡುತ್ತಿದ್ದು ಇದರಿಂದ ನೇರವಾಗಿ ನಮ್ಮ ಮೇಲೆ ಹಿಂದಿ ಭಾಷೆಯ ಹೇರಿಕೆ ಮಾಡಿದಂತಾಗುತ್ತಿದೆ.

ವೆಬಿನಾರ್ ಮತ್ತು ಸೆಮಿನಾರ್ ಗಳಲ್ಲಿ ಹಿಂದಿ ಭಾಷೆಯ ಹೇರಿಕೆ ಮಾಡಿದ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಈ ಬಗ್ಗೆ ತನಿಖೆಗೆ ಒಂದು ತಂಡ ರಚಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕೊರೊನಾ ಹಿನ್ನೆಲೆ ಆನ್ ಲೈನ್ ನಲ್ಲಿ ಆಯುಷ್ ಇಲಾಖೆ ಅಡಿಯಲ್ಲಿ ಬರುವ ಸಂಸ್ಥೆಗಳಲ್ಲಿ ವೆಬಿನಾರ್ ಮತ್ತು ಸೆಮಿನಾರ್ ಗಳು ನಡೆಯುತ್ತಿವೆ. ಈ ಬಗ್ಗೆ ಹಿಂದಿ ಬಾರದೇ ಇರುವವರು ಮೀಟಿಂಗ್ ನಿಂದ ಹೊರಹೋಗುವಂತೆ ಆಯುಷ್ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ ಎಂದು ಈ ಬಗ್ಗೆ ಮಾದ್ಯದಲ್ಲಿ ವರದಿಯಾಗಿದೆ.

ಇದರಿಂದ ಗ್ಲಿಷ್ ಮತ್ತು ಹಿಂದಿ ಎರಡು ಸಂವಿಧಾನದ ಭಾಷೆಯಾಗಿದ್ದರಿಂದ ಹಿಂದಿಯನ್ನೆ ಮಾತನಾಡಬೇಕು ಎಂದು ಹೇಳುವ ಮೂಲಕ ಸಾಂವಿಧಾನಿಕ ನಿಯಮಗಳನ್ನೆ ಉಲ್ಲಂಘಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಆಗಸ್ಟ್ 7, 1959ರಲ್ಲಿ ಲೋಕಸಭೆಯಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಹಿಂದಿ ಭಾಷೆ ಬಾರದವರು ಇಂಗ್ಲೀಷ್ ಬಳಕೆ ಮಾಡುವ ಬಗ್ಗೆ ಸಹಭಾಷೆಯಾಗಿ ಬಳಸಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ.

ಹೀಗಾಗಿ ಆಯುಷ್ ಇಲಾಖೆ ಅಧಿಕಾರಿಯ ಈ ವರ್ತನೆ ಸಂವಿಧಾನದ ನಿಯಮ ಉಲ್ಲಂಘನೆ ಮಾಡಿದಂತಾಗಿದೆ ಎಂದು ತಿಳಿಸಿದ್ದಾರೆ.  

Leave a Reply

Your email address will not be published. Required fields are marked *

You May Also Like

ಕೊರೊನಾ ಸಂಕಷ್ಟ ಪರಿಹಾರಕ್ಕೆ ಸಿರಿವಂತರ ಮೇಲೆ ತೆರಿಗೆ ವಿಧಿಸಿ

ಬೆಂಗಳೂರು: ಸಾಹಿತಿ, ಕಲಾವಿದರು, ಜನಪರ ಹೋರಾಟಗಾರರು ಕೊರೊನಾ ಸಂಕಷ್ಟ ಪರಿಹಾರಕ್ಕಾಗಿ ಸಿರಿವಂತರ ಮೇಲೆ ಹೆಚ್ಚಿನ ತೆರಿಗೆ…

ರಜೌರಿ ; ಜಿಲ್ಲೆಯ ಹೆದ್ದಾರಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆ

ಕೇಂದ್ರಾಡಳಿತ ಪ್ರದೇಶ ಕಾಶ್ಮೀರಕ್ಕೆ ವಿದೇಶಿ ಪ್ರತಿನಿಧಿಗಳ ನಿಯೋಗದ ಭೇಟಿಯ ಬೆನ್ನಲ್ಲೆ ಕಣಿವೆಯಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಆತಂಕ ಹುಟ್ಟಿಸಿದೆ.

ಕೋರಾನಾ: ಭಾರತೀಯ ಔಷಧಿಗೆ ತಡೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ!

ಜಿನೆವಾ: ಕೊರೊನಾ ವೈರಸ್ ಗೆ ಪರಿಣಾಮಕಾರಿ ಮದ್ದು ಎನ್ನಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ…

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಸಿಕ್ಕ ಭರ್ಜರಿ ಗಿಫ್ಟ್!

ನವದೆಹಲಿ : ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಮತ್ತೊಂದು ಜವಾಬ್ದಾರಿ ನೀಡಿದೆ.