ಬೆಂಗಳೂರು : ಚಿರಂಜೀವಿ ಸರ್ಜಾಗೆ ಗಂಡು ಮಗು ಜನಿಸಿದ್ದಕ್ಕೆ ಹಿರಿಯ ನಟಿ ತಾರಾ ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಅಂದೇ ಹೇಳಿದ್ದೆ. ಚಿರು ಮತ್ತೆ ಹುಟ್ಟಿ ಬರುತ್ತಾನೆ ಎಂದು. ಮೇಘನಾಗೆ ಗಂಡು ಮಗು ಹುಟ್ಟಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನಾನು ಚಿರು ಸಾವಿನ ದಿನವೇ ಚಿರು ಮತ್ತೆ ಬರುತ್ತಾನೆ ಎಂದು ಹೇಳಿದ್ದೆ. ಇಂದು ನಾನು ಹೇಳಿದ್ದ ಮಾತು ನಿಜವಾಗಿದೆ. ನನ್ನ ಈ ಖುಷಿಗೆ ಪಾರವೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಮೇಘನಾ ಧೈರ್ಯವಂತೆ, ಚಿರು ಇಲ್ಲದ ಕಷ್ಟದ ದಿನಗಳನ್ನು ಆಕೆ ಧೈರ್ಯದಿಂದ ಎದುರಿಸಿದ್ದಾಳೆ. ಈಗ ಮತ್ತೆ ಚಿರು ಬಂದಿದ್ದಾನೆ. ಮತ್ತೆ ಮೇಘನಾಳ ಕುಟುಂಬದಲ್ಲಿ ನಗೆ ಬೀಸಿದೆ ಎಂದು ಹೇಳಿದ್ದಾರೆ.

ಚಿರು ಸ್ನೇಹಿತ ಪನ್ನಗಾಭರಣ ಈ ಕುರಿತು ಸಂತಸ ಹಂಚಿಕೊಂಡಿದ್ದು, ಚಿರಂಜೀವಿ ಮತ್ತೆ ಹುಟ್ಟಿ ಬರುತ್ತಾನೆ ಎಂಬ ನಿರೀಕ್ಷೆ ಇತ್ತು. ವಿಶೇಷ ಎಂದರೆ ಚಿರಂಜೀವಿ ಹಾಗೂ ಮೇಘನಾ ನಿಶ್ಚಿತಾರ್ಥದ ದಿನವೇ ಮಗು ಹುಟ್ಟಿರುವುದು ತುಂಬಾ ಸಂತಸ ತಂದಿದೆ. ಚಿರು ಮತ್ತೆ ಸಿಕ್ಕ ಖುಷಿಯಾಗುತ್ತಿದೆ. ಈ ತಿಂಗಳಲ್ಲಿಯೇ ಚಿರು ಸಹ ಹುಟ್ಟಿದ್ದು, ಅವನು ಅಂದುಕೊಂಡತೆಯೇ ಎಲ್ಲ ನೆರವೇರಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಕತ್ತಲ ಕೋಣೆ ಕನ್ನಡ ಸಿನಿಮಾಕ್ಕೆ ಭೋಜಪುರಿ ನಿರ್ಮಾಪಕನ ಕಣ್ಣು!

ಕತ್ತಲ ಕೋಣೆ ಕನ್ನಡ ಸಿನಿಮಾ ಮೇಲೆ ಇದೀಗ ಭೋಜಪುರಿ ನಿರ್ಮಾಪಕರು ಕಣ್ಣು ಬಿದ್ದಿದೆ. ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಸಿನಿಮಾ ಇದಾಗಿದ್ದು 1998ರ ಸತ್ಯ ಘಟನೆ ಆಧಾರಿತ ಚಿತ್ಯರ. ಉಡುಪಿಯ ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿತ್ತು. ಚಿತ್ರದ ನಾಯಕ ನಟ ಕೂಡ ಸಂದೇಶ ಅವರೆ. ಅಂದುಕೊಂಡಂತಾದರೆ ಕನ್ನಡದ ಕತ್ತಲ ಕೋಣೆ ಮರಾಠಿಯಲ್ಲೂ ಸದ್ದು ಮಾಡಲಿದೆ.

ನಟಿ ಗೆಹನಾ ಅರೆಸ್ಟ್! ವಿಷಯ ಕೇಳಿದರೆ ಶಾಕ್ ಆಗುತ್ತೆ!!

ಮುಂಬಯಿ : ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ನಟಿ ಗೆಹನಾ ವಸಿಷ್ಠ ಅವರನ್ನು ಬಂಧಿಸಿದ್ದಾರೆ.

ವೈಯಕ್ತಿಕ ಸೌಂದರ್ಯ ವರ್ಧಕಕ್ಕೆ ಹೊಸ ಬ್ರ್ಯಾಂಡ್ ಬಿಡುಗಡೆ ಮಾಡಿದ ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ FRSH ಹೆಸರಿನ ವೈಯಕ್ತಿಕ ಸೌಂದರ್ಯ ಬ್ರಾಂಡ್ ಬಿಡುಗಡೆ ಮಾಡಿದ್ದಾರೆ. ವೈಯಕ್ತಿಕ ಉಡುಪು, ದೇಹದಾರ್ಡ್ಯ ಸಲಕರಣೆ, ಜಿಮ್ ಮತ್ತು ಈ-ಸೈಕಲ್ ಬಿಡುಗಡೆಯ ನಂತರ ಇದೀಗ ಹೊಸ ಬ್ರಾಂಡ್ ಪರಿಚಯಿಸಿದ್ದಾರೆ.

ಬಿಗ್ ಬಿ ಮನೆಯಲ್ಲಿ ಕೌನ್ ಬನೇಗಾ ಕರೋಡಪತಿ ಪ್ರೋಮೊ ಶೂಟ್

ಬಾಲಿವುಡ್ ಖ್ಯಾತ ನಟ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮನೆಯಿಂದಲೇ ಪ್ರೊಮೊ ವಿಡಿಯೊವನ್ನು ಚಿತ್ರೀಕರಿಸಲಾಗಿದ್ದು ಅದನ್ನು ಡಿಜಿಟಲ್ ಮೂಲಕ ದಂಗಲ್ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಚಿತ್ರೀಕರಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇದ್ಯಾವ ಚಿತ್ರಕರಣ ಅಂತ ಕುತೂಹಲಾನಾ?