ನವದೆಹಲಿ : ಟಿಕ್ಟಾಲಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಡುತ್ತಿದೆ. ಟಿಕ್ಟಾಲಕ್ ಮೂಲಕ ಚಿರಪರಿಚತಳಾಗಿದ್ದ ಸಿಯಾ ಚಿಕ್ಕ ವಯಸ್ಸಿನಲ್ಲಿಯೇ ಅತ್ಮಹತ್ಯೆ ಮಾಡಿಕೊಂಡು ಕುಟುಂಬಸ್ಥರಿಗೂ ಹಾಗೂ ಅಭಿಮಾನಿಗಳು ದೊಡ್ಡ ಶಾಕ್ ನೀಡಿದ್ದಳು. ಕಳೆದ ಎರಡು ದಿನಗಳ ಜೂ. 25ರಂದು ಸಿಯಾ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ನಿರ್ಧಾರಕ್ಕೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ.

ದೆಹಲಿಯ ನಿವಾಸಿಯಾಗಿದ್ದ ಸಿಯಾ ತಮ್ಮ ಟಿಕ್ಟಾುಕ್, ಡ್ಯಾನ್ಸ್, ಫೋಟೋ ಶೂಟ್, ಡಬ್ಬಿಂಗ್ ಮೂಲಕ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಳು. ಇಷ್ಟೊಂದು ಹೆಸರು ಮಾಡಿದ್ದ ಸಿಯಾ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಯಾ ಮೃತದೇಹ ಆಕೆಯ ಕೋಣೆಯಲ್ಲಿ ಪತ್ತೆಯಾಗಿತ್ತು. ಬುಧವಾರ ಇನ್ಸ್ಟಾರಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದ ಸಿಯಾಳ ಈ ನಿರ್ಧಾರಕ್ಕೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಸಿಯಾ, ಮ್ಯಾನೇಜರ್ ಅರ್ಜುನ್ ಸಿರಿನ್ ಹಾಗೂ ಕುಟುಂಬಸ್ಥರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸಿಯಾಳಿಗೆ ಕೆಲವು ಬೆದರಿಕೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ. ಈ ಕುರಿತು ಸ್ಥಳೀಯ ಪತ್ರಿಕೆಗಳಲ್ಲಿಯೂ ಸುದ್ದಿ ಪ್ರಕಟವಾಗಿದೆ. ಅಪರಿಚಿತರ ಫೋನ್ ಕಾಲ್ ಗಳಿಂದ ಬೇಸತ್ತು ಸಿಯಾ ನೇಣಿಗೆ ಶರಣಾಗಿರಬಹುದೆಂದು ಎಂಬ ಅನುಮಾನಗಳು ದಟ್ಟವಾಗಿವೆ. ಈ ಅನುಮಾನಗಳ ಕುರಿತು ಪೊಲೀಸರು ಇದುವರೆಗೂ ಯಾವುದೇ ಸ್ಪಷ್ಟನೆಯನ್ನ ಸಹ ನೀಡಿಲ್ಲ.

1 comment
  1. ಯಾಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕ್ಬರದು sir..

Leave a Reply

Your email address will not be published. Required fields are marked *

You May Also Like

ಕೋವಿಡ್-19 ನಿಯಂತ್ರಣ: ಲಾಕ್ಡೌನ್‍ನಿಂದ ಕೆಲವು ಚಟುವಟಿಕೆಗಳಿಗೆ ವಿನಾಯ್ತಿ

ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿರುವ ಗದಗ ತಾಲೂಕು ಹೊರತುಪಡಿಸಿ ಜಿಲ್ಲೆಯ ರೋಣ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ನರಗುಂದ ತಾಲೂಕುಗಳಲ್ಲಿ ಕೈಗಾರಿಕೆ, ವ್ಯಾಪಾರ ಪ್ರಾರಂಭಿಸಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ.

ಗದಗ ಜಿಲ್ಲೆಯಲ್ಲಿ ಕೊರೊನಾ ಭಯ!: ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆಯಾ ಜಿಮ್ಸ್..!

ಗದಗ: ನಿನ್ನೆ ರಾತ್ರಿಯಿಂದಲೇ ಕೊರೊನಾ ಪಾಸಿಟಿವ್ ಎಂದು 30 ಸೊಂಕಿತರ ಲೀಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ…

ದಿಗ್ವಿಜಯ್ ಸಿಂಗ್ ನಕಲಿ ಟ್ವೀಟರ್ ರಚನೆ: ದೂರು ನೀಡಿದ ಕೈ ನಾಯಕ

ಭೋಪಾಲ್: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ದಿಗ್ವಿಜಯ್ ಸಿಂಗ್ ಹೆಸರಿನಲ್ಲಿ ನಕಲಿ ಟ್ವೀಟರ್…