ಬೆಂಗಳೂರು : ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅಡ್ವಾನ್ಸ್ ವಿಶ್ ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ಕ್ಕೆ ಇದೆ. ಆದರೆ, ಈ ದಿನಾಂಕವನ್ನು ಗೊಂದಲ ಮಾಡಿಕೊಂಡ ಕಿಚ್ಚ ಎರಡು ದಿನ ಮುಂಚಿತವಾಗಿಯೇ ತಮ್ಮ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. ನಂತರ ಗಣಿ ಹುಟ್ಟು ಹಬ್ಬ ಜುಲೈ 2ಕ್ಕೆ ಎಂದು ತಿಳಿದು, ಈ ವಿಶ್ ಅನ್ನು ಅಡ್ವಾನ್ಸ್ ಆಗಿ ಪರಿಗಣಿಸಿ ಎಂದು ಮತ್ತೆ ರಿಟ್ವೀಟ್ ಮಾಡಿದ್ದಾರೆ.

ದಿನಾಂಕವನ್ನು ತಪ್ಪಾಗಿ ಗ್ರಹಿಸಿ ವಿಶ್ ಮಾಡಿರುವ ಸುದೀಪ್, ಹುಟ್ಟುಹಬ್ಬದ ಶುಭಾಶಯಗಳು ಗೆಳೆಯ, ದೇವರು ನಿನಗೆ ಆರೋಗ್ಯ ಮತ್ತು ಐಶ್ವರ್ಯ ಕೊಟ್ಟು ಕಾಪಾಡಲಿ. ಕ್ವಾರಂಟೈನ್ ಸಮಯದಲ್ಲಿ ಗಡ್ಡ ಹೊಸ ಸಿಕ್ಸ್ ಪ್ಯಾಕ್ ಆಗಲಿ. ನಿನಗೆ ದೇವರು ಹೆಚ್ಚಿನ ಶಕ್ತಿ ಮತ್ತು ಯಶಸ್ಸನ್ನು ಕೊಟ್ಟು ಆಶೀರ್ವದಿಸಲಿ. ಮಚ್ ಲವ್ ಯೂ ಚೀಯರ್ಸ್ ಎಂದು ಬರೆದು ಎರಡು ದಿನ ಮುಂಚಿತವಾಗಿಯೇ ವಿಶ್ ಮಾಡಿದ್ದಾರೆ.

ಸುದೀಪ್ ವಿಶ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಗಣೇಶ್ ಅವರ ಹುಟ್ಟುಹಬ್ಬ ಜುಲೈ 2ಕ್ಕೆ ಇರುವುದು ಎಂದು ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಇದರಿಂದ ತಕ್ಷಣ ಎಚ್ಚೆತ್ತ ಕಿಚ್ಚ, ಈ ಟ್ವೀಟ್ ಮಾಡಿದ ಒಂದು ಗಂಟೆಯ ನಂತರ ಇನ್ನೊಂದು ಟ್ವೀಟ್ ಮಾಡಿದ್ದು, ನಾನು ತಪ್ಪು ದಿನಾಂಕವನ್ನು ಪಡೆದು ವಿಶ್ ಮಾಡಿದೆ. ಇದನ್ನು ಅಡ್ವಾನ್ಸ್ ವಿಶ್ ಎಂದು ಪರಿಗಣಿಸಿ. ಸರಳವಾಗಿ ಹುಟ್ಟುಹಬ್ಬ ಆಚರಿಸಲು ತೀರ್ಮಾನ ಮಾಡಿರುವುದು ಒಳ್ಳೆಯ ನಿರ್ಧಾರ ಎಂದು ರಿಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ದೆಹಲಿಯಿಂದ ಬಂದ ವಲಸಿಗರು – ಬೆಂಗಳೂರಿಗರಿಗೆ ಆತಂಕ!

ಬೆಂಗಳೂರು: ದೆಹಲಿ ಯಿಂದ ಗುರುವಾರ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ವಿಶೇಷ ರೈಲು ಬಂದಿದ್ದು, ಇಂದು ಮತ್ತೊಂದು…

ಗದಗನಲ್ಲಿ ಇಂದು ನಾಲ್ಕು ಪಾಸಿಟಿವ್: ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ!

ಜಿಲ್ಲೆಯಲ್ಲಿ ಇಂದು 4 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಉಪವಾಸದ ಹಿಂದಿನ ಅಸಲಿ ಸತ್ಯ ಗೊತ್ತಾ?

ಹಿರಿಯರು ದೇವರ ಹೆಸರಿನಲ್ಲಿ ಉಪವಾಸ ಎಂಬ ಪದ್ಧತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಆದರೆ, ಅದರ ಹಿಂದೆ ವೈಜ್ಞಾನಿಕ ಸತ್ಯವೂ ಇದೆ.

ಲಕ್ಕುಂಡಿ ಗ್ರಾಮ ಪಂಚಾಯತಿಗೆ ಆಡಳಿತಾಧಿಕಾರಿ ಯಾರು..?

ಗದಗ: ಅವಧಿ ಮುಗಿದ್ರು ಚೇರಿನ ವ್ಯಾಮೋಹ ಮುಗಿಲ್ಲವೇ..? ಆಡಳಿತಾಧಿಕಾರಿ ನೇಮಕವಾದ್ರು, ಅಧ್ಯಕ್ಷ ಪದವಿಯ ಅವಧಿ ಮುಗಿದಿರೋದು…