ನವದೆಹಲಿ: ಐಸಿಸಿಯು ಟೆಸ್ಟ್ ರ್ಯಾಂಕಿಂಗ್ ನೂತನ ಪಟ್ಟಿ ಪ್ರಕಟಿಸಿದ್ದು, ಆಸ್ಟ್ರೇಲಿಯಾ ತನ್ನ ಪಾರಮ್ಯ ಮೆರೆದಿದೆ.  

ಬ್ಯಾಟಿಂಗ್ ರ್ಯಾಂಡಕಿಂಗ್‌ನಲ್ಲಿ ಇಬ್ಬರು ಹೆಚ್ಚುವರಿ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲಿದ್ದ ಅದೇ 2ನೇ ಸ್ಥಾನದಲ್ಲಿದ್ದರೆ, ಬೌಲಿಂಗ್ ರ್ಯಾಂೊಕಿಂಗ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಚೇತೇಶ್ವರ್ ಪೂಜಾರ (8ನೇ ರ್ಯಾಂಕ್) ಮತ್ತು ಅಜಿಂಕ್ಯ ರಹಾನೆ (10ನೇ ರ್ಯಾಂಕ್) ಪಡೆದು ಟಾಪ್ ಟೆನ್ ಪಟ್ಟಿಯಲ್ಲಿದ್ದಾರೆ. ಆಲ್ ರೌಂಡರ್‌ಗಳ ಸಾಲಿನಲ್ಲಿನಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 5ನೇ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕ್ರಮವಾಗಿ ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ, 911 ರೇಟಿಂಗ್ ಪಾಯಿಂಟ್), ವಿರಾಟ್ ಕೊಹ್ಲಿ (ಭಾರತ, 886), ಮಾರ್ನಸ್ ಲ್ಯಬುಶೇನ್ (ಆಸ್ಟ್ರೇಲಿಯಾ, 827), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಬಾಬರ್ ಅಝಾಮ್ (ಪಾಕಿಸ್ತಾನ), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಚೇತೇಶ್ವರ್ ಪೂಜಾರ (ಭಾರತ), ಜೋ ರೂಟ್ (ಇಂಗ್ಲೆಂಡ್), ಅಜಿಂಕ್ಯ ರಹಾನೆ (ಭಾರತ) ಸ್ಥಾನ ಪಡೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಕ್ರಮವಾಗಿ ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ, 904 ರೇಟಿಂಗ್ ಪಾಯಿಂಟ್), ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್, 846), ನೀಲ್ ವ್ಯಾಗ್ನರ್, (ನ್ಯೂಜಿಲೆಂಡ್, 843), ಟಿಮ್ ಸೌಥೀ (ನ್ಯೂಜಿಲೆಂಡ್), ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್), ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಮೊಹಮ್ಮದ್ ಅಬ್ಬಾಸ್ (ಪಾಕಿಸ್ತಾನ), ಜಸ್‌ಪ್ರೀತ್ ಬೂಮ್ರಾ (ಭಾರತ), ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) ಸ್ಥಾನ ಪಡೆದಿದ್ದಾರೆ.

ಆಲ್ ರೌಂಡರ್ ವಿಭಾಗದಲ್ಲಿ ಬೆನ್ ಸ್ಕೋಕ್ಸ್ (ಇಂಗ್ಲೆಂಡ್, 454 ರೇಟಿಂಗ್ ಪಾಯಿಂಟ್), ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್, 447), ರವೀಂದ್ರ ಜಡೇಜಾ (ಭಾರತ, 397), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಆರ್ ಅಶ್ವಿನ್ (ಭಾರತ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (ನ್ಯೂಜಿಲೆಂಡ್), ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ), ಕ್ರಿಸ್ ವೋಕ್ಸ್ (ಇಂಗ್ಲೆಂಡ್), ರೋಸ್ಟನ್ ಚೇಸ್ (ವೆಸ್ಟ್ ಇಂಡೀಸ್), ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) ಸ್ಥಾನ ಪಡೆದಿದ್ದಾರೆ. 

ಇನ್ನೂ ಟೆಸ್ಟ್ ಪಟ್ಟಿಯಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ (116 ರೇಟಿಂಗ್ ಪಾಯಿಂಟ್), ನ್ಯೂಜಿಲೆಂಡ್ (115), ಭಾರತ (114), ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಜಿಂಬಾಬ್ವೆ ಸ್ಥಾನಗಳನ್ನು ಪಡೆದಿವೆ.

Leave a Reply

Your email address will not be published. Required fields are marked *

You May Also Like

ಇoದು ನಿಡಗುಂದಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಉತ್ತರಪ್ರಭ ಸುದ್ದಿನಿಡಗುಂದಿ: ಯುವಜನ ಸಬಲೀಕರಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಮಣಗೂರ ಆಶ್ರಯದಲ್ಲಿ ನಿಡಗುಂದಿ ತಾಲ್ಲೂಕು…

ಕೆ. ಎಚ್. ಪಾಟೀಲ ಫುಟಬಾಲ್ ಲೀಗ್-2022 ಉದ್ಘಾಟನೆ

ಉತ್ತರಪ್ರಭ ಸುದ್ದಿ ಗದಗ: ಕರ್ನಾಟಕ ಸ್ಫೋರ್ಟ್ಸ್ ಆ್ಯಂಡ್ ಎಜ್ಯುಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಕೆ.…

ಸಿನಿಮಾದಲ್ಲಿ ಮೂಡಿ ಬರಲಿದೆ ಮುರಳೀಧರನ್ ಜೀವನ!

ವಿಶ್ವ ಬ್ಯಾಟಿಂಗ್ ದಿಗ್ಗಜರ ನಿದ್ದೆಗೆಡಿಸಿದ್ದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಹಾರ್ದಿಕ್ ಪಾಂಡ್ಯಗೆ ಗೆಳತಿಯ ಸಂದೇಶ!

ಮುಂಬಯಿ : ನೀವು ನನ್ನ ಪೂರ್ಣಗೊಳಿಸಿದ್ದೀರಿ ಎಂದು ಭಾರತ ಕ್ರಿಕೆಟ್ ತಂಡದ ಆಲ್ರೌಂವಡರ್ ಹಾರ್ದಿಕ್ ಪಾಂಡ್ಯ ಅವರ ಗೆಳತಿ ನತಾಶಾ ಸ್ಟಾಂಕೋವಿಕ್ ಹೇಳಿದ್ದಾರೆ.