ಜಗತ್ತು ಇಂದು ಸ್ಥಬ್ದವಾಗಿದೆ. ಕೊರೋನಾ ಅಥವಾ ಕೊವಿಡ 19 (ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೋನಾ ವೈರಸ್ 2019) ಈ ಹಿಂದೆಂದು ಕೇಳರಿಯದ ಆರ್ಥಿಕ ಸಂಕಷ್ಟಕ್ಕೊಳಗಾಗಿಸಿದೆ. ಹಾಗೆ ನೋಡಿದರೆ ಜಗತ್ತಿಗೆ ಸಾಂಕ್ರಾಮಿಕ ರೋಗಗಳು ಹೊಸದವೇನಲ್ಲ.

ಈ ಮೊದಲು ಹಲವಾರು ಸಾಂಕ್ರಾಮಿಕ ರೋಗಗಳು ಬಂದಿದ್ದರೂ ಸಹಿತ ಈ ರೀತಿಯಾದ ಜಾಗತಿಕ ಲಾಕ್‌ಡೌನ ಹೇರಿರಲಿಲ್ಲ. ಅವುಗಳು ಒಂದು ಪ್ರದೇಶಕ್ಕೊ ಅಥವಾ ಒಂದು ರಾಜ್ಯ ಅಥವಾ ಒಂದು ದೇಶಕ್ಕೊ ಸೀಮಿತವಾಗಿರುತ್ತಿದ್ದವು. ಅಲ್ಲದೆ ಅವುಗಳನ್ನು ಅಲ್ಲಿಂದಲ್ಲಿಯೆ ನಿಯಂತ್ರಿಸಿ ಜಾಗತಿಕ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರದ ಹಾಗೆ ನೋಡಿಕೊಳ್ಳಲಾಗುತ್ತಿತ್ತು.

ಆದರೆ ಈಗ ಬಂದ ಚೈನಾದಲ್ಲಿ ಹುಟ್ಟಿದ (ಅಮೇರಿಕೆಯ ಅಧ್ಯಕ್ಷ ಡೊನಾಲ್ಡ ಟ್ರಂಪ್‌ರವರ ಪ್ರಕಾರ ಚೈನಾ ಕೊರೋನ) ಕೊರೋನಾ ವಿಶ್ವವ್ಯಾಪಿಯಾಗಿ ಹರಡಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಈಗಾಗಲೆ ಜಗತ್ತಿನಾದ್ಯಂತ ಸುಮಾರು 2.16 ಕೋಟಿ ಜನರು ಈ ರೋಗಪೀಡಿತರಾಗಿದ್ದಾರೆ ಮತ್ತು ಸುಮಾರು 7.74 ಲಕ್ಷ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಭಾರತದಲ್ಲಿ ಈಗಾಗಲೇ 26,90,101 ಜನರು ಈ ರೋಗಕ್ಕೆ ತುತ್ತಾಗಿದ್ದಾರೆ ಹಾಗೂ ಸುಮಾರು 51,783 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದರಲ್ಲಿಯೂ 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು, ಹತ್ತು ವರ್ಷಗಳಿಗಿಂತ ಕಡಿಮೆ ಪ್ರಾಯದ ಮಕ್ಕಳು, ರೋಗನಿರೋಧಕ ಶಕ್ತಿ ಕಡಿಮೆಯುಳ್ಳವರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ದೀರ್ಘಕಾಲದ ಕಾಯಿಲೆಗಳಾದ ಸಕ್ಕರೆ, ರಕ್ತದೊತ್ತಡ, ಕ್ಯಾನ್ಸರ್, ಕಿಡ್ನಿ, ಶ್ವಾಸಕೋಶ, ಹೃದಯ, ಎಚ್.ಐ.ವಿ, ಏಡ್ಸ್ ಸಂಬಂದಿ ಇನ್ನಿತರ ಕಾಯಲೆಯುಳ್ಳವರು ಸುಲಭವಾಗಿ ಈ ರೋಗದಿಂದ ಮರಣ ಹೊಂದುತ್ತಿದ್ದಾರೆ.

ಜಾಗತಿಕವಾಗಿ ಸಾಂಕ್ರಾಮಿಕ ರೋಗಗಳು ಮತ್ತು ಕಾರಣ ಪರಿಣಾಮಗಳು

1, ಪ್ಲೇಗ್ ಆಫ್ ಜಸ್ಟಿನಿಯನ್ ರೋಗವು 541-542 ರಲ್ಲಿ ಇಲಿಗಳು ಮತ್ತು ನೊಣಗಳಿಂದ ಹರಡಿತ್ತು.   ಯುರೋಪ, ಪಶ್ಚಿಮ ಏಷ್ಯಾ 30-50ಲಕ್ಷ ಜನರು ಈ ರೋಗಕ್ಕೆ ತುತ್ತಾಗಿದ್ದರು.

2, ಕಪ್ಪು ಸಾವು(ಬ್ಲ್ಯಾಕ್ ಡೆತ್) ರೋಗವು 1347-1351 ಇಲಿಗಳು ಮತ್ತು ನೊಣಗಳಿಂದ ಯುರೋಪ, ಏಷ್ಯಾ ಮತ್ತು ಉತ್ತರ ಆಪ್ರೀಕಾ ದೇಶದಲ್ಲಿ ಕಂಡು ಬಂದಿತು. ಈ ರೋಗದಿಂದ 20 ಕೋಟಿ (10-60 ಶೇ. ಯುರೋಪದ ಜನಸಂಖ್ಯೆ) ಜನರು ಸಾವನ್ನಪ್ಪಿದ್ದರು.

3, ಗ್ರೇಟ್ ಪ್ಲೇಗ್ ಆಫ್ ಲಂಡನ್ ಎಂಬ ಕಾಯಿಲೆಯೂ 1665 ಇಲಿಗಳು ಮತ್ತು ನೊಣಗಳಿಂದ ಲಂಡನ್ ನಲ್ಲಿ ಹರಡಿತ್ತು. ಇದರಿಂದ 1 ಲಕ್ಷ ಜನರು ಸಾವನ್ನಪ್ಪಿದ್ದರು.

4, ಕಾಲರಾ ಎನ್ನುವ ರೋಗವು(1-6) ರೋಗವು 1817-1923 ಇಲಿಗಳು ಮತ್ತು ನೊಣಗಳಿಂದ ಏಷ್ಯಾ, ಯುರೋಪ್, ಉತ್ತರ ಅಮೇರಿಕಾ, ರಷ್ಯಾದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪುವಂತೆ ಮಾಡಿತ್ತು.

5, ಮೂರನೆಯ ಪ್ಲೇಗ್ ಎನ್ನುವ ಕಾಯಿಲೆ 1855-1960 ಕಂಡು ಬಂದಿತ್ತು. ಇದು ಕೂಡ ಇಲಿಗಳು ಮತ್ತು ನೊಣಗಳಿಂದ ಹರಡಿದ್ದು, ಜಾಗತಿಕವಾಗಿ ಈ ರೋಗ ಹರಡಿತ್ತು. 1.20 ಕೋಟಿ ಜನರು ಈ ರೋಗದಿಂದ ಭಾರತ ಹಾಗೂ ಚೈನಾದಲ್ಲಿ ಮಾತ್ರ ಸಾವನ್ನಪ್ಪಿದ್ದರು.

6, ಸ್ಪಾನಿಷ್ ಫ್ಲೂವ್ (ಸ್ಪಾನಿಷ್ ಜ್ವರ)ವೂ 1918-1919 ಹಂದಿಗಳಿಂದ ಜಾಗತಿಕವಾಗಿ ಹಬ್ಬಿತ್ತು. ಇದರಿಂದಾಗಿ 4-5 ಕೋಟಿ ಜನರು ಸಾವನ್ನಪ್ಪುವಂತಾಯಿತು.

7, ಎಚ್.ಐ.ವಿ/ ಏಡ್ಸ ರೋಗವು 1981 ರಿಂದ ಇಲ್ಲಿಯವರೆಗೆ ಇದೆ. ಚಿಂಪಾಂಜಿಯಿಂದ ಈ ರೋಗ ಹರಡಿತು. ಜಾಗತಿಕವಾಗಿ ಈ ರೋಗ ಹರಡಿದ್ದು ಅಂದಾಜು 3 ಕೋಟಿಯಷ್ಟು ಜನರು ಈ ರೋಗಕ್ಕೆ ಬಲಿಯಾಗಿದ್ದಾರೆ.

8, ಹಂದಿ ಜ್ವರವೂ 2009-2010ರಲ್ಲಿ ಹಂದಿಗಳಿಂದಲೇ ಹರಡಿತ್ತು. ಜಾಗತಿಕವಾಗಿ 2 ಲಕ್ಷ ಜನರು ಇದರಿಂದ ಸಾವನ್ನಪ್ಪಿದರು.

9, ಎಬೋಲಾ ರೋಗವು 2014-15 ರಲ್ಲಿ ಕಂಡು ಬಂದಿತು. ಕಾಡು ಪ್ರಾಣಿಗಳಿಂದ ರೋಗ ಹರಡಿದ್ದು, ಜಾಗತಿಕವಾಗಿ 11,000 ಜನರು ಇದರಿಂದ ಸಾವನ್ನಪ್ಪಬೇಕಾಯಿತು.

10, ಕೊವಿಡ್ 19 2019 ರಿಂದ ಇಲ್ಲಿಯವರೆಗೆ ನಿಖರವಾದ ಮಾಹಿತಿ ಇಲ್ಲ (ರೋಗ ಹರಡಲು ಪೆಂಗೋಲಿಯನ್ ಎಂದು ಹೇಳಲಾಗುತ್ತದೆ.) ಜಾಗತಿಕವಾಗಿ ಈಗಾಗಲೇ 7.74 ಲಕ್ಷ (17-08-2020ರ ವರೆಗೆ) ಸಾವನ್ನಪ್ಪಿದ್ದಾರೆ. ಆಧಾರ: ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಜಾಗತಿಕ ಆರ್ಥಿಕ ಸಮೂಹ

ಭಾರತದ ಆರ್ಥಿಕತೆಯ ಮೇಲೆ ಪರಿಣಾಮ:

ತೀವ್ರತರನಾದ ಲಾಕ್ ಡೌನ್‌ನಿಂದಾಗಿ ಜಾಗತಿಕ ಆರ್ಥಿಕತೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ. ನಮ್ಮ ದೇಶದ ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿ.ಡಿ.ಪಿ) ಗಣನೀಯವಾಗಿ ಅಂದರೆ ಶೇ.5 ರಷ್ಟು ಇಳಿಕೆಯಾಗಿದೆ ಎಂದು ಜಾಗತಿಕ ರೇಟಿಂಗ್ ಏಜೆನ್ಸಿ ಅಂದಾಜಿಸಿದೆ.

ಹಾಗೆಯೇ ಶೇ. 53 ರಷ್ಟು ವ್ಯವಹಾರಗಳು ಸ್ಥಗಿತಗೊಂಡಿವೆ ಎಂದು ತನ್ನ ಸಮೀಕ್ಷೆಯಲ್ಲಿ ಹೇಳಿದೆ. ನಮ್ಮ ದೇಶದಲ್ಲಿ 14 ಕೋಟಿ ಜನರು ತಮ್ಮ ದಿನನಿತ್ಯ ದುಡಿಯುವ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಹಲವಾರು ಉದ್ಯಮ ಸಂಸ್ಥೆಗಳಾದ ಹೋಟೆಲ್‌ಗಳು, ವಿಮಾನಯಾನ ಸಂಸ್ಥೆಗಳು, ಪ್ರವಾಸೋದ್ಯಮ, ಓಲಾ ಕ್ಯಾಬ್ಸ್ ಇತ್ಯಾದಿ ಕಂಪನಿಗಳ ಆದಾಯವು ಸುಮಾರು ಶೇ.95 ರಷ್ಟು ಕಡಿಮೆಯಾಗಿದೆ.

ಸ್ಟಾರ್ಟಪ್‌ಗಳಲ್ಲಿಯ ಸಹಾಸೋದ್ಯಮ ಬಂಡವಾಳವು 2019 ಮೊದನೆಯ ತ್ರೈಮಾಸಿಕದಿಂದ ನಾಲ್ಕನೆಯ ತ್ರೈಮಾಸಿಕದಲ್ಲಿ ಶೇ. 50 ರಷ್ಟು ಇಳಿಕೆಯಾಗಿರುವುದನ್ನು ಕಾಣಬಹುದು. ಲಾಕ್‌ಡೌನ್‌ನಿಂದ ಸರಕಾರಕ್ಕೆ ಪ್ರತಿನಿತ್ಯ ಸುಮಾರು 32,000 ಕೋಟಿ ರುಪಾಯಿಗಳ ಆದಾಯ ನಷ್ಟವಾಗಿದೆ ಎಂದು ಆರ್‌ಬಿಐ ಅಂದಾಜಿಸಿದೆ. ದೇಶದ ಒಟ್ಟು ಮೌಲ್ಯವರ್ಧನೆಯಲ್ಲಿ ಹಲವಾರು ವಲಯಗಳಿಂದ ನಿರೀಕ್ಷೀಸಬಹುದಾದ ವರಮಾನವು ಋಣಾತ್ಮಕವಾಗಿದೆ.

ಇದರ ಪರಿಣಾಮದಿಂದ ಸರಕಾರಕ್ಕೆ ಬರುವ ತೆರಿಗೆಯ ಆದಾಯದ ಹರಿವು ಕಡಿಮೆಯಾಗಿ ಆದಾಯ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಇದರಿಂದ ಸರಕಾರವು ತನ್ನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲೇಬೇಕಾಗಿದೆ. ಇದಕ್ಕಾಗಿಯೇ ಭಾರತದ ಮಾಜಿ ಆರ್.ಬಿ.ಐ ಗವರ್ನರ್ ಆದ ರಘುರಾಮ್ ರಾಜನ್ ಅವರು ಕರೋನಾ ಸಾಂಕ್ರಾಮಿಕವು “ಸ್ವಾತಂತ್ರ್ಯದ ನಂತರದ ಅತ್ಯಂತ ದೊಡ್ಡ ತುರ್ತುಸ್ಥಿತಿ” ಆಗಿರಬಹುದು ಎಂದು ಹೇಳಿದರು.

ಈ ಮಾಹಾಮಾರಿಯಿಂದ ಆಗುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಕನಿಷ್ಟ ಭಾರತಕ್ಕೆ 10 ಟ್ರಿಲಿಯನ್ (ಯುಎಸ್.  140 ಬಿಲಿಯನ್) ಉದ್ದೀಪನ ಬೇಕಾಗುತ್ತದೆ ಎಂದು ಮಾಜಿ ಸಿಇಎ ಅರವಿಂದ ಸುಬ್ರಮಣಿಯನ್ ಹೇಳಿದ್ದಾರೆ.

ಎಪ್ರಿಲ್-ಜೂನ್ 2020ರ ಅವಧಿಯಲ್ಲಿ ಕೊರೋನದಿಂದ ಭಾರತದ ಹಲವಾರು ವಲಯಗಳ ಮೇಲೆ ಆಗುವ       ಪರಿಣಾಮಗಳು

ವಲಯವಾರು ವರಮಾನ                      ಒಟ್ಟು ಮೌಲ್ಯ ವರ್ದನೆ (ಉಗಿಂ) (ಶೇಕಡಾವಾರುಗಳಲ್ಲಿ)

ಹಣಕಾಸು, ವೃತ್ತಿಪರ ಸೇವೆಗಳು                                            -17.3

ಗಣಿಗಾರಿಕೆ ಮತ್ತು ಕಲ್ಲುಕೊರೆತ                                              -14.7

ವಿದ್ಯುತ್, ಅನಿಲ, ನೀರು ಸರಬರಾಜು ಹಾಗೂ ಇತರ ಉಪಯೋಗಿ ಸೇವೆಗಳು         -13.9

ಕಟ್ಟಡ                                                                 -13.3

ವ್ಯಾಪಾರ, ಹೋಟೆಲ್, ಸಾರಿಗೆ ಮತ್ತು ಸಂಹನ                                 -9.7

ಒಟ್ಟಾರೆ ಮೌಲ್ಯ ವರ್ದನೆ                                                  -9.3

ತಯಾರಿಕಾ ವಲಯ                                                     -6.3

ಕೃಷಿ, ಅರಣ್ಯ ಮತ್ತು ಮೀನುಗಾರಿಕೆ                                          -1.3

ಸಾರ್ವಜನಿಕ ಆಡಾಳಿತ ಮತ್ತು ಇತರ ಸೇವೆಗಳು                                -0.4

ಭಾರತದಲ್ಲಿ ಕೊರೋನವು ಹಲವಾರು ವಲಯಗಳಲ್ಲಿ ತೀವ್ರತರವಾದ ಪರಿಣಾಮ ಬೀರಿದೆ. ಅವುಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದು.

ಒಟ್ಟು ದೇಶೀಯ ಉತ್ಪನ್ನದಲ್ಲಿ ಇಳಿಕೆ: ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಎಲ್ಲ ಸರಕು ಸೇವೆಗಳ ಮೌಲ್ಯ ಗಣನೀಯವಾಗಿ ಇಳಿಕೆಯಾಗುವ ನಿರೀಕ್ಷೆ ಇದೆ. ಹಲವಾರು ಸಂಘ ಸಂಸ್ಥೆಗಳು ಜಿಡಿಪಿಯಲ್ಲಿ ಇಳಿಕೆಯಾಗುತ್ತದೆ ಎನ್ನುತ್ತಿವೆ.

2021ರಲ್ಲಿ ನಮ್ಮ ಜಿಡಿಪಿ ಎಷ್ಟರ ಮಟ್ಟಿಗೆ ಇಳಿಯಹುದೆಂದು ಮುನ್ನಾಂದಾಜು ಮಾಡಿವೆ. ಅದನ್ನು ಈ ಕೆಳಗಿನ ಕಾಣಬಹುದು.

ಭಾರತದಲ್ಲಿ 2021ರಲ್ಲಿ ಹಲವಾರು ಎಜೆನ್ಸಿಗಳಿಂದ ಒಟ್ಟು ದೇಶೀಯ ಉತ್ಪನ್ನದ ಮುನ್ನಾಂದಾಜು

ಕ್ರ.ಸಂಖ್ಯೆ                           ಎಜೆನ್ಸಿ                                    ಅಂದಾಜು

1                           ಬರ್ನ್ ಸ್ಪೈನ್                               -7%

2                           ಇಕ್ರಾ                                     -5%

3                           ಗೋಲ್ಡ್ ಮನ್ ಸ್ಯಾಚ್ಸ್                        -5%

4                           ನೋಮುರಾ                                -5%

5                           ಫಿಚ್                                      -5%

6                           ಎಸ್‌ಬಿಐ                                   -4.7%

7                           ಕೇರ್ ರೇಟಿಂಗ್                              -1.5% -1.6%

ಕೃಷಿ: ಇತ್ತೀಚಿನ ಬೆಳವಣಿಗೆಯಲ್ಲಿ ಕೃಷಿ ವಲಯದ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಕಳೆದ ತಿಂಗಳಿನ ವರದಿಯಂತೆ ಶೇ. 10 ರಷ್ಟು ರೈತರು ತಮ್ಮ ಬೆಳೆ ಕೊಯ್ಲನ್ನು ಮಾಡಲಾಗಲಿಲ್ಲ. ಶೇ. 60 ರಷ್ಟು ರೈತರು ತಮ್ಮ ಕೃಷಿ ಉತ್ಪಾದನೆಯಲ್ಲಿ ಇಳುವರಿ ಕಡಿಮೆಯಾಗಿರುವುದನ್ನು ದಾಖಲಿಸಿದ್ದಾರೆ.

ಶಕ್ತಿ: ಹಲವಾರು ಮೆಟ್ರೋ ಪಟ್ಟಣಗಳಲ್ಲಿ ರಾತ್ರಿ ದೀಪಗಳ ಕಾಂತಿ ಕಡಿಮೆಯಾಗಿರುವುದೆಂದರೆ ವಿದ್ಯುತ್ ಶಕ್ತಿಯ ಬಳಕೆ ಕಡಿಮೆಯಾಗಿದೆ ಎಂದು ಅರ್ಥ. ವಿಧ್ಯುತ್‌ ಶಕ್ತಿಯ ಬಳಕೆಯು 1-31ರ ಮಾರ್ಚ 2019ಕ್ಕೆ ಹೋಲಿಸಿದಾಗ ಬೆಂಗಳೂರಿನಲ್ಲಿ ಶೇ.32 ರಷ್ಟು, ದೆಹಲಿಯಲ್ಲಿ ಶೆ.37.2, ಮುಂಬೈಯಲ್ಲಿ÷ಶೇ.29 ರಷ್ಟು ಕಡಿಮೆಯಾಗಿದೆ. ಇಂಧನ ಬಳಕೆಯು ಶೇ.46 ರಷ್ಟು ಕಡಿತಗೊಂಡು, ಡಿಝೇಲ್ ಬೇಡಿಕೆ ಶೇ. 5.6 ಇಳಿಕೆಯಾಗಿರುವುದನ್ನು ಕಾಣಬಹುದು.

ಉತ್ಪಾದನಾ ವಲಯ: ಹಲವಾರು ಪ್ರಮುಖ ಕಂಪನಿಗಳು ತಮ್ಮ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ದೇಶದ ಕೈಗಾರಿಕಾ ಕೇಂದ್ರ ಬಿಂದುವಾದ ಮಾಹಾರಾಷ್ಟ್ರವು ಸಂಪೂರ್ಣವಾಗಿ ಸ್ಥಬ್ದವಾಗಿದೆ. ದೇಶದಲ್ಲಿಯೇ ಅತ್ಯಂತ ಹೆಚ್ಚು ಕೊರೋನಾ ರೋಗಪಿಡಿತರು ಮುಂಬೈಯಲ್ಲಿದ್ದಾರೆ. ಹಾಗಾಗಿ ಎಲ್ಲ ಉತ್ಪಾದನ ಘಟಕಗಳನ್ನು ಮುಚ್ಚಲಾಗಿದೆ. ಮತ್ತು ತಮ್ಮ ಕಂಪನಿಯಲ್ಲಿ ಕೆಲಸ ಮಡುವ ಕಾರ್ಮಿಕರಿಗೆ ಅವರವರ ಸ್ವಂತ ಊರುಗಳಿಗೆ ತೆರಳಲು ತಿಳಿಸಲಾಗಿದೆ.

ಷೇರು ಮಾರುಕಟ್ಟೆ: ಕೊರೋನ ಅನಾವರಣದಿಂದ ಷೇರು ಮಾರುಕಟ್ಟೆಯು ಅತ್ಯಂತ ಕೆಟ್ಟ ಪರಿಣಾಮವನ್ನು ಅನುಭವಿಸುವಂತಾಯಿತು. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯ (ನಿಫ್ಟಿ 50) ದಾಖಲೆಯ ಮಟ್ಟದಲ್ಲಿ ನಷ್ಟ ಅನುಭವಿಸಿತು. 1 ಜನವರಿ 2020 ರಿಂದ 28 ಮೇ. 2020ರ ಅವಧಿಯಲ್ಲಿ ಸೆನ್ಸೆಕ್ಸ್ ಸುಮಾರು 4000 (13.15%) ಅಂಕಗಳನ್ನು ಕಳೆದುಕೊಂಡಿತು. ಅದರಂತೆಯೆ ಎನ್‌ಎಸ್‌ಇ ನಿಫ್ಟಿ 1150 (12.98%) ನಷ್ಟ ಹೊಂದಿತು.

ಆನ್ ಲೈನ್ ಮಾರುಕಟ್ಟೆ: ಕೊರೋನ ಸಾಂಕ್ರಾಮಿಕದಿಂದ ಭಾರತದಲ್ಲಿ÷ಉಚ್ರಾಯ ಸ್ಥಿತಿಯಲ್ಲಿದ್ದ ಅಮೇಜಾನ್, ಪ್ಲಿಪ್‌ಕಾರ್ಟ್, ವಾಲ್ಮಾರ್ಟ್, ಸ್ನಾಪ್‌ಡಿಲ್‌ನಂತಹ ಹಲವಾರು ಇ-ಕಾಮರ್ಸ್ ಉದ್ಯಮಗಳು ನೆಲಕಚ್ಚಿದವು. ಬಿಗ್ ಬಜಾರ್, ರಿಲೈಯನ್ಸ್, ಮೋರ್, ಇತ್ಯಾದಿ ವಿಶಾಲವಾದ ಮಾಲ್‌ಗಳು ಮುಚ್ಚಿರುವುದರಿಂದ ಬೇಡಿಕೆಯ ಇಳಿತವಾಗಿರುವುದನ್ನು ಕಾಣುತ್ತೇವೆ.

ವಲಸೆ ಕಾರ್ಮಿಕರು: ಎಲ್ಲ ಕೈಗಾರಿಕೆಗಳು ತಮ್ಮ ಉತ್ಪಾದನೆಯನ್ನು ನಿಲ್ಲಿಸಿದ್ದರಿಂದ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಸಿದ್ಧರಾಗಿದ್ದಾರೆ. ಒಂದು ಕಡೆ ಲಾಕ್‌ಡೌನ್ ಇನ್ನೊಂದು ಕಡೆ ತೀವ್ರವಾದ ಆಹಾರ ಮತ್ತು ಆರೋಗ್ಯದ ಸಮಸ್ಯೆ ತಲೆದೋರಿದೆ. ಸುಮಾರು ಲಕ್ಷ ಜನ ನೂರಾರು ಕಿಲೋ ಮಿಟರಗಳಿಂದ ನಡೆದುಕೊಂಡೆ ಬರುತ್ತಿದ್ದಾರೆ. ವಾಹನ ಸಂಪರ್ಕ ಸಮರ್ಪಕವಾಗಿಲ್ಲದಿರುವುದರಿಂದ ಈ ಸಮಸ್ಯೆ ಉದ್ಭವವಾಗಿದೆ.

ಸರಕಾರದ ಕ್ರಮಗಳು: ಈ ಕೊರೋನದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ನಿಯಂತ್ರಿಸಲು ಸರಕಾರವು ಹಲವಾರು ಕ್ರಮಗಳನ್ನು ನಮ್ಮ ದೇಶದ ಪ್ರಧಾನ ಮಂತ್ರಿ ಹಾಗೂ ಹಣಕಾಸಿನ ಮಂತ್ರಿಯವರು ಐದು ಹಂತದ ಆರ್ಥಿಕ ಪ್ಯಾಕೇಜನ್ನು ಘೋಷಿಸಿದ್ದಾರೆ. ಇದರ ಒಟ್ಟಾರೆ ಪ್ಯಾಕೇಜ 20,97,053 ಕೋಟಿ ರೂಪಾಯಿಗಳದ್ದಾಗಿದೆ. ಇದನ್ನು ಈ ಕೆಳಗಿನ ಕೋಷ್ಟಕ 4 ರಲ್ಲಿ ತಿಳಿದುಕೊಳ್ಳಬಹುದು.

ಆತ್ಮನಿರ್ಭರತಿಯ ಭಾರತದ ಅಡಿಯಲ್ಲಿ ಆರ್ಥಿಕ ಪ್ರಗತಿಗಾಗಿ ಬಿಡುಗಡೆ ಮಾಡಲಾದ ಹಣಕಾಸು

ಕ್ರ.ಸಂ                               ಬಾಬ್ತುಗಳು            ಬಿಡುಗಡೆ ಮಾಡಲಾಗುವ ಅನುದಾನ

1                    ಮೊದಲ ಹಂತ                5,94,550

2                    ಎರಡನೆಯ ಹಂತ              3,10,000

3                    ಮೂರನೆಯ ಹಂತ             1,50,000

4                    ನಾಲ್ಕು & ಐದನೆಯ ಹಂತ       48,000

                            ಕಿರು ಮೊತ್ತ                  11,02,650

5                    ಈ ಮೊದಲಿನ ಕ್ರಮಗಳು        1,92,800

6                    ಈಗಿನ ಕ್ರಮಗಳು              8,01,603

                                   ಕಿರು ಮೊತ್ತ            9,94,403

                                   ಓಟ್ಟು ಮೊತ್ತ           20,97,053

ಮೂಲ: ಆತ್ಮನಿರ್ಭರ ಭಾರತ ಭಾಗ 5, ಸರ್ಕಾರಿ ಸುಧಾರಣೆಗಳು ಮತ್ತು ಶಕ್ತರು.

ಇದಲ್ಲದೆ ಇನ್ನಿತರ ಸಣ್ಣ, ಮಧ್ಯಮ ಮತ್ತು ಮೈಕ್ರೋ ಎಂಟರ್‌ ಪ್ರೈಸಸ್ ಗಳಿಗೆ ಸಾಲದ ಖಾತರಿಗಳಲ್ಲಿ ಭಾರಿ ಏರಿಕೆಯನ್ನು ಮಾಡಲಾಗಿದೆ. ಆರೋಗ್ಯದ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ. ಉದಾಹರಣೆಗೆ ಆರೋಗ್ಯ ಸೇತು ಆಪ್, ಕೊರಂಟೈನ್ ವಾಚ್, ಆಪ್ತಮಿತ್ರ ಯ್ಯಾಪ್ ಇತ್ಯಾದಿಗಳು.

ಅಲ್ಲದೆ ಗಂಟಲು ಹಾಗೂ ಮೂಗಿನ ದ್ರವದ ತಪಾಸಣೆಯನ್ನು ಹೆಚ್ಚು ಮಾಡಿದ್ದಾರೆ. ಕೊವಿಡ್ ಯೋಧರಿಗೆ ವಿಮಾ ಮೊತ್ತವನ್ನು ಘೋಷಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಬಸ್ಸು ಮತ್ತು ರೈಲುಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಸಹಿತ ಈ ರೋಗದ ತೀವ್ರತೆ ಮತ್ತು ಅದರ ಹರಡುವಿಕೆಯು ಚಿಂತೆಗೆ ಕಾರಣವಾಗುತ್ತಿದೆ.

ಒಂದು ಕಡೆ ನಿಯಂತ್ರಣಕ್ಕೆ ಬಾರದ ರೋಗ ಮತ್ತೊಂದು ಕಡೆ ಜನರ ನಿರ್ಲಕ್ಷವು ಸಹಿತ ನೀತಿ ನಿರೂಪಕರಿಗೆ ತಲೆ ಬಿಸಿಯಾಗಿದೆ. ಅನಕ್ಷರಸ್ತ ಹಾಗೂ ನಿರ್ಲಕ್ಷದ ಕಾರಣದಿಂದ ನಮ್ಮಲ್ಲಿ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಅಲ್ಲದೆ ಜೂನ 1 ರಿಂದ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಮಾಡುತ್ತಿದ್ದಾರೆ. ಇನ್ನು ಮುಂದೆ ಸಾರ್ವಜನಿಕರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕಾಗಿದೆ. ಮಾಸ್ಕ್ ಧರಿಸುವುದು, ಸಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕೆಮ್ಮು ನೆಗಡಿ ಜ್ವರ ಬಂದಾಗ ತಾವೆ ಹೋಗಿ ಆಸ್ಪತ್ರೆಯಲ್ಲಿ ಗಂಟಲು ಮತ್ತು ಮೂಗಿನ ದ್ರವವನ್ನು ತಪಾಸಣೆ ಮಾಡಿಸಿಕೊಳ್ಳಬೇಕು.

ಡಾ. ಶೌಕತ್ ಅಲಿ ಎಂ ಮೇಗಲಮನಿ
ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ,
ಧಾರವಾಡ.
ಮೋ: 9448529867

ದಾರಿಯಲ್ಲಿ ಉಗಳದೆ ಧೂಮ್ರಪಾನ ಮತ್ತು ತಂಬಾಕು ಸೇವನೆಯನ್ನು ನಿಯಂತ್ರಿಸುವುದು, ತಮ್ಮ ಹಾಗೂ ತಮ್ಮ ಸುತ್ತಮುತ್ತ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಬಿಸಿ ನೀರನ್ನು ಸೇವಿಸುವುದು, ಆಗಾಗ ಮನೆಯಲ್ಲಿಯೆ ಮಾಡಿದ ಕಷಾಯ ಸೇವಿಸುವ ಮುಖಾಂತರ ಈ ಮಹಾಮಾರಿಯನ್ನು ತಕ್ಕ÷ಮಟ್ಟಿಗೆ ನಿಯಂತ್ರಿಸಬಹುದು. ಮನೆಯಲ್ಲಿಯ 60 ವರ್ಷ ಮೇಲ್ಪಟ್ಟ ವೃದ್ಧರಿಗೂ ಹಾಗೂ 10 ವರ್ಷ ಕೆಳಗಿನ ಮಕ್ಕಳಿಗೂ ಮತ್ತು ಹಲವಾರು ರೋಗಳಿಂದ ಬಳಲುತ್ತಿರುವವರಿಗೂ ವಿಶೇಷ ಕಾಳಜಿ ಮಾಡಿಕೊಳ್ಳಬೇಕಾಗಿದೆ. ಹೀಗೆ ಮಾಡಿದಾಗ ನಾವು ಈ ಕೊರೋನ ಮತ್ತು ಅದರಿಂದ ಆಗುತ್ತಿರುವ ದುಷ್ಪರಿಣಾಮವನ್ನು ನಿಯಂತ್ರಿಸಬಹುದು.

1 comment
  1. One of the best article on Impact of Covid 19 on Indian Economy. Good analysis on the topic. Thanks for publishing this type of article .

Leave a Reply

Your email address will not be published. Required fields are marked *

You May Also Like

ಕೊರೊನಾಕ್ಕೆ ಬೆಚ್ಚಿಬಿದ್ದ ಕರುನಾಡು: ಸೋಂಕಿತರ ಸಂಖ್ಯೆ 1267, ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 1267 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 13190…

ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿತರ ವಿಶೇಷ ಚಿಕಿತ್ಸೆಗಾಗಿ ಐಸಿಯು ವಾರ್ಡನಲ್ಲಿ…

24 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಯಾವ ಶಾಸಕರಿಗೆ ಯಾವ ನಿಗಮ?

ರಾಜ್ಯ ಬಿಜೆಪಿ ಸರ್ಕಾರಕ್ಕೆ ಈಗ ಒಂದು ವರ್ಷ. ವರ್ಷ ತುಂಬಿದ ಈ ಸಂದರ್ಭದಲ್ಲಿ ಸರ್ಕಾರ ವಿವಿಧ 24 ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿ ಆದೇಶಿಸಿದೆ.