ಉತ್ತರಪ್ರಭ ಸುದ್ದಿ
ನಿಡಗುಂದಿ: ಯುವಜನ ಸಬಲೀಕರಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಮಣಗೂರ ಆಶ್ರಯದಲ್ಲಿ ನಿಡಗುಂದಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ದಿ.12 ರಂದು ಸೋಮವಾರ ನಡೆಯಲಿದೆ. ಪಟ್ಟಣದ ಹೊರವಲಯದ ಮಣಗೂರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಈ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಶಾಸಕ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಾಸಕ ಸೋಮನಗೌಡ ಪಾಟೀಲ ಉದ್ಘಾಟಿಸಲ್ಲಿದ್ದು ಕ್ರೀಡಾ ಜ್ಯೋತಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಸ್ವೀಕರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಾನಾ ಜನಪ್ರತಿನಿಧಿಗಳು ಸೇರಿದಂತೆ ಬಿಇಓ ಎಸ್.ಬಿ. ಬಳಬಟ್ಟಿ, ತಹಶೀಲ್ದಾರ್ ಅನಿಲಕುಮಾರ ಢವಳಗಿ, ಇಓ ವಿ.ಎಸ್. ಹಿರೇಮಠ, ಚಂದ್ರಶೇಖರ ನುಗ್ಗಲಿ, ಬಿ.ಟಿ.ಗೌಡರ, ಶಿವಾನಂದ ಮಂಗಾನವರ, ಆರ್.ಎ. ನದಾಫ್, ಎಂ.ಎಸ್. ಮುಕಾರ್ತಿಹಾಳ ಇನ್ನೀತರರು ಆಗಮಿಸಲಿದ್ದಾರೆ ಎಂದು ಬಸವನಬಾಗೇವಾಡಿ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಎಸ್.ಎಸ್. ಅವಟಿ ತಿಳಿಸಿದ್ದಾರೆ.