ಚೆನ್ನೈ : ವಿಶ್ವ ಬ್ಯಾಟಿಂಗ್ ದಿಗ್ಗಜರ ನಿದ್ದೆಗೆಡಿಸಿದ್ದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ ನಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಹಲವು ಆಟಗಾರರ ಬಯೋಪಿಕ್ ಗಳು ಜನರ ಮುಂದೆ ಬಂದಿವೆ. ಅಲ್ಲದೇ, ಸಿನಿಮಾಗಳು ಕೂಡ ತಯಾರು ಆಗಿವೆ. ಸದ್ಯ ಇದೇ ಮಾದರಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ ಜ ವನ ಆಧರಿಸಿ ಸಿನಿಮಾ ಸಿದ್ಧವಾಗುತ್ತಿದೆ.

ಎಂ.ಎಸ್. ಶ್ರೀಪತಿ ನಿರ್ದೇಶನ ಮಾಡುತ್ತಿದ್ದಾರೆ. ಈ ಬಯೋಪಿಕ್ ಸಿನಿಮಾಗೆ ‘800’ ಎಂಬ ಟೈಟಲ್ ಕೂಡ ನೀಡಿದ್ದಾರೆ. ಆದರೆ, ಈ ಕುರಿತು ಅಧಿಕೃತ ಮಾಹಿತಿ ಮಾತ್ರ ಹೊರ ಬಿಳ್ಳುವುದು ಮಾತ್ರ ಬಾಕಿ ಇದೆ.
ಮುರಳೀಧರನ್ ಅವರ ಬೌಲಿಂಗ್ ಶೈಲಿ ತರಬೇತಿಯನ್ನು ಸೇತುಪತಿ ಕಲಿಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ವಿಶಿಷ್ಟ ಪಾತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿರುವ ವಿಜಯ್ ಸೇತುಪತಿ, ಮುರಳೀಧರನ್ ಪಾತ್ರದಲ್ಲಿ ಹೇಗೆ ಕಾಣಿಸಲಿದ್ದಾರೆ ಎಂಬುವುದು ಅಭಿಮಾನಿಗಳ ಕುತೂಹಲವಾಗಿದೆ.

ವಿಜಯ್ ಸೇತುಪತಿ ನಟಿಸಿರುವ ಹೊಸ ಸಿನಿಮಾ ‘ಕಾ ಪೇ ರಣಸಿಂಗಂ’ ಸಿನಿಮಾ ಅಕ್ಟೋಬರ್ 2ರಂದು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿತ್ತು. ಅಲ್ಲಿ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಅಲ್ಲದೇ, ಇದೇ ಸಿನಿಮಾ ಅ. 16 ರಂದು ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಮುತ್ತಯ್ಯ ಮುರಳೀಧರನ್ ಅವರು, ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದರು. ಏಕದಿನ ಕ್ರಿಕೆಟ್‍ ನಲ್ಲಿ 534 ವಿಕೆಟ್ ಪಡೆದಿದ್ದ ಅವರು, 2011ರಲ್ಲಿ ವಿಶ್ವಕಪ್ ಫೈನಲ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆು ವಿದಾಯ ಹೇಳಿದ್ದರು.

Leave a Reply

Your email address will not be published. Required fields are marked *

You May Also Like

ಕರಣ್ ಜೋಹರ್ ಗೆ ನೀಡಿದ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯಲು ನಟಿ ಕಂಗನಾ ಹೇಳಿದ್ದೇಕೆ?

ಇತ್ತಿಚೆಗಷ್ಟೆ ಪದ್ಮಶ್ರೀ ಪ್ರಶಸ್ತಿ ಪಡೆದ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ನಟಿ ಕಂಗನಾ ರಾಣಾವತ್ ಹಲವು ಆರೋಪ ಮಾಡಿದ್ದಾರೆ. ಹೀಗಾಗಿ ಕರಣ್ ಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನು ಬರೆದುಕೊಡ್ತಿದ್ದೆ ಅಂತ ನಟ ಶಿವಣ್ಣ ಹೇಳಿದ್ದು ಯಾಕೆ?

ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡುವಾಗೆಲ್ಲಾ ಹೊಟ್ಟೆ ಉರಿಯುತ್ತೆ. ನಮ್ಮ ಸಮಸ್ಯೆಗಳನ್ನೇ ನಾವು ಪರಿಹಾರ ಪಡಿಸಿಕೊಳ್ಳೋಕೆ ಆಗುತ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ. ರೈತರಿಗೆ ನಮ್ಮ ಬೆಂಬಲ ಖಂಡಿತಾ ಇದ್ದೇ ಇರುತ್ತೆ. ಆದರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನನ್ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡುತ್ತಿದ್ದೆ. ಆದ್ರೆ ಅಧಿಕಾರ ನನ್ನ ಕೈಯಲ್ಲಿ ಇಲ್ವಲ್ಲಾ ಎಂದು ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಬೇಸರ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳಲ್ಲಿ ಗೋಲ್ಡನ್ ಸ್ಟಾರ್ ಮನವಿ ಮಾಡಿದ್ದೇನು?

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಜು. 2ರಂದು ಗೋಲ್ಡನ್…

ಪ್ರೇಮಕಥೆಯ ಸಲಿಗೆ ಸಿಂಗಲ್ ಸಾಂಗ್ ಚಂದನ್ ಶೆಟ್ಟಿ ಡ್ಯಾನ್ಸ್

ಬೆಂಗಳೂರು: ಪ್ರೇಮಿಯೊಬ್ಬ ಪ್ರೀತಿಯಿಂದ ಆಗ ಬದಲಾವಣೆಯನ್ನು ಚಂದನ್ ಶೆಟ್ಟಿ ಲವ್ ಸಾಂಗ್ ಒಂದರಲ್ಲಿ ಬಿಂಬಿಸಿದ್ದಾರೆ. ಈ ಮೂಲಕ ಆಲ್ಬಂ ಸಾಂಗ್ ನಲ್ಲಿ ಚಂದನ್ ಶೆಟ್ಟಿ ಹೊಸ ಪ್ರಯೋಗ ಮಾಡಿದ್ದಾರೆ. ಸಲಿಗೆ ಹೆಸರಿನ ಸಿಂಗಲ್ ಆಲ್ಬಂ ಅನ್ನು ಚಂದನ್ ಶೆಟ್ಟಿ ಮೇ 28 ರಂದು ಬಿಡುಗಡೆ ಮಾಡಿದ್ದಾರೆ. ಕೆನಡಾದಲ್ಲಿ ಚಿತ್ರೀಕರಿಸಿದ ಹಾಡನ್ನು ತಾವೇ ಶೂಟ್ ಮಾಡಿದ್ದಲ್ಲದೇ ಚೆನ್ನಾಗಿ ನೃತ್ಯ ಮಾಡಿದ್ದಾರೆ ಚಂದನ್ ಶೆಟ್ಟಿ.