ಯುಎಇಯಿಂದ 30 ಕೆಜಿ ಚಿನ್ನ ಸಾಗಿಸಿದ ಆರೋಪ ಎದುರಿಸುತ್ತಿರುವ ಸ್ವಪ್ನ ಟೀಮ್ ಇದೇ ಮಾದರಿಯಲ್ಲಿ ಒಟ್ಟು 180 ಕೆಜಿ ಚಿನ್ನ ಸಾಗಿಸಿದೆ ಎನ್ನಲಾಗಿದೆ.

ತಿರುವನಂತಪುರ: ಯುಎಇಯಿಂದ ಕೇರಳಕ್ಕೆ 30 ಕೆಜಿ ಚಿನ್ನವನ್ನು ರಾಯಭಾರ ಕಚೇರಿಯ ಛಾಯೆಯಲ್ಲಿ ಸಾಗಿಸಿರುವ ಸ್ವಪ್ನ ಸುರೇಶ್ ಮತ್ತು ಸರಿತ್ ಅವರನ್ನು ತಿರುವನಂತಪುರದ ವಿವಿಧ ಸ್ಥಳಗಳಿಗೆ ಶನಿವಾರ ಕರೆದೊಯ್ದು ಸಾಕ್ಷ್ಯ ಸಂಗ್ರಹಿಸಿದ ಎನ್ಐಎ ಅಧಿಕಾರಿಗಳು ಭಾನುವಾರವೂ ಈ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.

ಇನ್ನಿಬ್ಬರು ಆರೋಪಿಗಳಾದ ಸಂದೀಪ್ ನಾಯರ್ ಮತ್ತು ರಮೀಜ್ ಸಾಕಷ್ಟು ಮಾಹಿತಿ ನೀಡಿದ್ದು, 30 ಕೆಜಿ ಚಿನ್ನ ಸಾಗಿಸಿದ ಮಾದರಿಯಲ್ಲೇ 12-13 ಸಲ ಸಾಗಾಣಿಕೆ ನಡೆಸಿದ್ದು 180 ಕೆಜಿಗೂ ಅಧಿಕ ಚಿನ್ನ ಸಾಗಿಸಿದ್ದಾರೆ ಎಂದು ಎನ್ಐಎ ತನಿಖಾಧಿಕಾರಿ ಎನ್ಡಿಟಿವಿಗೆ ತಿಳಿಸಿದ್ದಾರೆ.

ತಿರುವನಂತಪುರದ ಯುಎಇ ರಾಯಭಾರ ಕಚೇರಿಯ ಅಧಿಕಾರಿ ಈಗ ವಾಪಾಸ್ ಹೋಗಿದ್ದು, ಅವರ ವಿಚಾರಣೆಯ ನಂತರ ಮಹತ್ವದ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಧಿಕಾರಿಯ ಹೆಸರಿಗೇ ಚಿನ್ನದ ಬ್ಯಾಗ್ ಬರುತ್ತಿದ್ದವು ಎಂದೂ ಅವರು ತಿಳಿಸಿದ್ದಾರೆ.

ಈ ನಡುವೆ ಕೊನ್ಸುಲ್ ಜನರಲ್ ಕಚೇರಿಗೆ ಸಂಬಂಧಿಸಿದ ಕೇರಳ ಪೊಲೀಸ್ ಅಧಿಕಾರಿಯೊಬ್ಬರಿಗೆ ಜೀವ ಬೆದರಿಕೆ ಕರೆ ಬಂದಿದ್ದವು. ಈಗ ಅವರ ಮೊಣಕೈಗಳಿಗೆ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಹೇಳಿಕೆ ಪಡೆಯಲಾಗಿದೆ.

ಈ ಚಿನ್ನ ಅಕ್ರಮ ಸಾಗಾಟದ ಪ್ರಕರಣದಲ್ಲಿ ಕೇರಳ ಸಿಎಂ ಕಚೇರಿಯ ಅಧಿಕಾರಿಯನ್ನು ಈಗಾಗಲೇ ವಜಾ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಡಂಬಳ : ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ

ಜಾನುವಾರುಗಳಿಗೆ ಚಿಕಿತ್ಸೆ ನೀಡುವುದಕ್ಕೆ ಪಶು ಆಸ್ಪತ್ರೆ ಇದ್ದರೂ ಕೂಡ ಜಾನುವಾರುಗಳಿಗೆ ಚಿಕಿತ್ಸೆ ಸಿಗದೇ ಜಾನುವಾರಗಳು ನರಳಾಡುವಂತಹ ಪರಸ್ಥಿತಿ ಎದುರಾಗಿದೆ.

ಲಕ್ಷ್ಮೆಶ್ವರದಲ್ಲಿ ಮಣ್ಣು ಮುಕ್ಕುತ್ತಿದ್ದರೂ ಅಧಿಕಾರಿಗಳು ಮೌನ!

ಅನ್ನ ಭಾಗ್ಯ ಯೋಜನೆಯ ಅಕ್ಕಿ, ಮರಳು ಲೂಟಿ ಮಾಡುವುದು ಆಗಾಗ ಸಾಮಾನ್ಯವಾಗಿದೆ. ಆದರೆ, ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಮಣ್ಣು ಕೂಡ ಸದ್ದಿಲ್ಲದೇ ಲೂಟಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ: ಗದಗ ಜಿಲ್ಲೆಯ ಕೃಷಿ ಪರಿಕರ ಮಾರಾಟ ಮಳಿಗೆಗಳ ಪರವಾನಿಗೆ ಅಮಾನತು

ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗಿ ಹೆಚ್ಚಿನ ದರಕ್ಕೆ ಯೂರಿಯಾ ರಸಗೊಬ್ಬರ ಮಾರಾಟ ಮಾಡಿರುವುದು ದೃಢಪಟ್ಟಿರುತ್ತದೆ.

ಭೀಕರ ದುರಂತದಲ್ಲಿ ಮೃತಪಟ್ಟವರೆಲ್ಲ ನಿಡಗುಂದಿ ಭಾಗದವರು- ಕಾಶಿಗೆ ಹೋಗಿಬಂದವರೇ ಈಗ ರಾಮೇಶ್ವರಕ್ಕೆ ಹೊರಟಿದ್ದರು

ಆಲಮಟ್ಟಿ : ಅವರೆಲ್ಲರೂ ಕಾಶಿಗೆ ಹೋಗಿ ಬಂದಿದ್ದರು. ಕಾಶಿ ದರ್ಶನ ಬಳಿಕ ರಾಮೇಶ್ವರ ದರುಶನಕ್ಕೆ ಶೃದ್ಧಾಭಕ್ತಿ…