ಆಲಮಟ್ಟಿ : ಅವರೆಲ್ಲರೂ ಕಾಶಿಗೆ ಹೋಗಿ ಬಂದಿದ್ದರು. ಕಾಶಿ ದರ್ಶನ ಬಳಿಕ ರಾಮೇಶ್ವರ ದರುಶನಕ್ಕೆ ಶೃದ್ಧಾಭಕ್ತಿ ಭಾವದಿಂದ ಇಲ್ಲಿಂದ ಮಂಗಳವಾರ ರಾತ್ರಿ ಹೊರಟಿದ್ದರು. ಆದರೆ ವಿಧಿ ನಡುರಸ್ತೆಯಲ್ಲೇ ಅಟ್ಟಹಾಸ ಮೆರೆದಿತ್ತು.ಪರಿಣಾಮ ನಡುರಾತ್ರಿ ಐವರು ಯಮನ ಪಾದ ಸೇರಿದ ದುರ್ಘಟನೆಯೊಂದು ಮಂಗಳವಾರ ತಡರಾತ್ರಿ ಹೊಸಪೇಟೆ ಬಳಿಯ ಬಣವಿಕಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸಂಭವಿಸಿದೆ. ಈ ಮಹಾ ದುರಂತದಲ್ಲಿ ಸಾವಿಗೀಡಾದವರೆಲ್ಲ ನಿಡಗುಂದಿ ತಾಲೂಕಿನವರಾಗಿದ್ದಾರೆ.
ಇಂಥದೊಂದು ವಿಲಕ್ಷಣ ದುರಂತ ಕೇಳಿ ಇಲ್ಲಿನ ಜನ ಮಮ್ಮಲ ಮರಗಿ ಅಯ್ಯೋ ದೇವರೆ ಎಂಥಾ ದುರ್ಗತಿ ತಂದೊಡ್ಡಿದೆಯಲ್ಲಾ ಎಂದು ರೋಧಿಸುತ್ತಿದ್ದಾರೆ.ಈ ಹೃದಯ ವಿದ್ರಾವಕ ಘಟನೆ ನೆನೆದು ಮಡಿದ ಮನೆಯಲ್ಲಿಗ ಸೂತಕದ ಛಾಯೇ ಅವರಿಸಿದೆ.ಮನೆ ಸದಸ್ಯರು, ಸಂಬಂಧಿಕರು ದಿಕ್ಕು ತೋಚದೆ ಕಣ್ಣೀರು ಸುರಿಸುತ್ತಿದ್ದಾರೆ.‌ ಅಕ್ಕಪಕ್ಕದವರೆಲ್ಲ ಕಂಬನಿ ಮಿಡಿಯುತ್ತಿದ್ದಾರೆ.
ಹಿನ್ನೆಲೆ : ವಂದಾಲದ ಟ್ರ್ಯಾಕ್ಸ್ ಜೀಪೊಂದನ್ನು ಬಾಡಿಗೆ ಮಾಡಿಕೊಂಡು ಸುಮಾರು ಹನ್ನೊಂದು ಹನ್ನೆರಡು ಜನ ಮಹಿಳೆಯರು ಸೇರಿ ನಿನ್ನೆ ಮಂಗಳವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ನಿಡಗುಂದಿಯಿಂದ ತಮಿಳುನಾಡಿನ ರಾಮೇಶ್ವರ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಲಾಂಗ್ ರೂಟ್ ಇರುವದರಿಂದ ಇಬ್ಬರು ಜೀಪ್ ಚಲಾಯಿಸುವ ಡ್ರೈವರ್ ದೊಂದಿಗೆ ಅವರೆಲ್ಲರೂ ಸಾಗಿದ್ದಾರೆ. ಹೊರಟ ಮೂರ್ನಾಲ್ಕು ಗಂಟೆಯಲ್ಲೇ ನಾಲ್ಕು ಜನ ಮಹಿಳೆಯರು ಸೇರಿ ಓರ್ವನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದಕ್ಕೆ ಕಾರಣ ಜೀಪಿನ ಎಕ್ಸೆಲ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿದೆ. ಕ್ಷಣಾರ್ಥದಲ್ಲೇ ಟ್ರ್ಯಾಕ್ಸ್ ರಸ್ತೆ ಮೇಲೆ ಪಲ್ಟಿ ಮೇಲೆ ಪಲ್ಟಿ ಹೊಡೆಯುತ್ತಾ ಉರುಳಿ ಬಿದ್ದಿದೆ. ಚಾಲಕನ ಅತಿ ವೇಗ ಚಾಲನೆ ಮತ್ತು ಅಜಾಗರೂಕತೆ ಎನ್ನಲಾಗುತ್ತಿದೆ. ಈ ದುರ್ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಅಸುನೀಗಿದ್ದರೆ ಅಪಘಾತ ನಡೆದ ಸ್ಥಳದಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೂವರು ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಇನ್ನುಳಿದವರನ್ನು ಚಿಕಿತ್ಸೆಗಾಗಿ ಕೂಡ್ಲಿಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ದೊರೆತಿದೆ. ಈ ಅಪಘಾತದ ದುರಂತದಲ್ಲಿ ನಿಡಗುಂದಿ ತಾಲೂಕಿನ ವಂದಾಲ ಗ್ರಾಮದ ಸಿದ್ದಯ್ಯ ಕಾಳಗಿ (42), ನಿಡಗುಂದಿಯ ಕಲ್ಲವ್ವ( 69) ಲಕ್ಷ್ಮೀಬಾಯಿ((60) ಕಿರನಾದ ಕುಂತವ್ವ(50),ಆಲಮಟ್ಟಿಯ ನೀಲಮ್ಮ ದೇಸಾಯಿ (54) ಸಾವಿಗೀಡಾದ ನತದೃಷ್ಟ ದುದೈ೯ವಿಗಳೆಂದು ಹೇಳಲಾಗುತ್ತಿದೆ. ಮೃತಪಟ್ಟವರಲ್ಲಿ ನೀಲಮ್ಮ ದೇಸಾಯಿ ಆಲಮಟ್ಟಿಯ ಸ್ಟೇಷನ್ ಗ್ರಾಮದಲ್ಲಿ ಹಲವಾರು ವರ್ಷ ದಿಂದ ಹೋಟೆಲ್ ನಡೆಸುತ್ತಿದ್ದರು. ಭಜ್ಜಿ,ಚೂಡಾಗೆ ಅದು ಹೆಸರಾಗಿತ್ತು. ದೇಸಾಯಿ ಹೋಟೆಲ್ ಎಂದೇ ಜನ ಪ್ರೀತಿಯಿಂದ ಕರೆಯುತ್ತಿದ್ದರು.
ಎರಡು ವರ್ಷದ ಹಿಂದೆಯೂ ಕಾಶಿಗೆ ಹೋಗಿ ನಂತರ ರಾಮೇಶ್ವರನ ದರುಶನ ಪಡೆದುಕೊಂಡು ಇವರೆಲ್ಲರೂ ಬಂದಿದ್ದರು. ಕರೋನಾ ಹಾವಳಿ ಆರಂಭಗೊಂಡಾಗಿನಿಂದ ಪುಣ್ಯ ಕ್ಷೇತ್ರಗಳ ದರ್ಶನದ ಪರ್ಯಟನ ಕೈಗೊಂಡಿರಲಿಲ್ಲ. ಈಗ ಕೋವಿಡ್ ಪ್ರಕರಣಗಳು ಸ್ವಲ್ಪ ಮಟ್ಟಿಗೆ ತಗ್ಗಿದ್ದರಿಂದ ಪುನಃ ಸುಕ್ಷೇತ್ರದ ದರ್ಶನ ಒಲವು ಮಹಿಳೆಯರಲ್ಲಿ ಮೂಡಿದೆ. ಜೀಪಿನಲ್ಲಿ ಹೊರಟಿದ್ದವರೆಲ್ಲರೂ ಈಗಷ್ಟೇ ಕಾಶಿ, ಶ್ರೀಶೈಲ ಕ್ಷೇತ್ರ ದರ್ಶನಕ್ಕೆ ಹೋಗಿ ಬಂದಿದ್ದರು. ಅಲ್ಲಿಗೆ ಅಂದ್ರೆ ಕಾಶಿಗೆ ಹೋಗಿಬಂದ ಬಳಿಕ ರಾಮೇಶ್ವರಕ್ಕೆ ಹೋಗಬೇಕ್ಕೆನ್ನುವ ಪ್ರತೀತಿ. ಆ ಹಿನ್ನೆಲೆಯಲ್ಲಿ ಕಾಶಿಗೆ ಹೋಗಿ ಬಂದವರೇ ಹನ್ನೊಂದು ಜನ ಮಹಿಳೆಯರು ರಾಮೇಶ್ವರ ದರ್ಶನ ಭಾಗ್ಯಕ್ಕೆ ತೆರಳಿದ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು ವಿಪಯಾ೯ಸ.

Leave a Reply

Your email address will not be published. Required fields are marked *

You May Also Like

ಕೋವಿಡ್ 19 ನಿಯಮ ಉಲ್ಲಂಘನೆ: ಪಿ.ಟಿ. ಪರಮೇಶ್ವರ ನಾಯ್ಕ್ ವಿರುದ್ಧ ದೂರು ದಾಖಲು

ಹರಪನಹಳ್ಳಿ: ನಿನ್ನೆಯಷ್ಟೆ ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಪುತ್ರನ ವಿವಾಹ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ…

ಕೊರೊನಾ ಸಂಕಷ್ಟದ ಕುರಿತು ತುರ್ತು ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಹೇಳಿದ್ದೇನು..?

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ತುರ್ತು ಸಭೆ ನಡೆಸಿದರು.

ವಚನ ಸಾಹಿತ್ಯಕ್ಕೆ ಅಂಟಿದ ರಾಜಾಶ್ರಯ ಕಿತ್ತೆಸೆದ ಶರಣರು

ನಿಡಗುಂದಿ: ವಚನ ಸಾಹಿತ್ಯ ಸೃಷ್ಟಿಸುವಾಗ ಯಾರಿಗೂ ಮಣಿಯದೇ, ಯಾರ ಹಂಗಿನಲ್ಲಿರದೇ, ಅಂಜಿಕೆಯ ಭೀತಿ ಇಲ್ಲದೇ ರಾಜಾಶ್ರಯವನ್ನು…

ಮುಂದಿನ ವರ್ಷದಿಂದ ಅರ್ಜಿ ಪಡೆದು ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ…!

ಬೆಂಗಳೂರು: ಮುಂದಿನ  ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಅದರ ಜತೆ ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.