ಸಾಗರ್ ಮೇವುಂಡಿ

ಮುಂಡರಗಿ: ಜಾನುವಾರುಗಳಿಗೆ ಚಿಕಿತ್ಸೆ ನೀಡುವುದಕ್ಕೆ ಪಶು ಆಸ್ಪತ್ರೆ ಇದ್ದರೂ ಕೂಡ ಜಾನುವಾರುಗಳಿಗೆ ಚಿಕಿತ್ಸೆ ಸಿಗದೇ ಜಾನುವಾರಗಳು ನರಳಾಡುವಂತಹ ಪರಸ್ಥಿತಿ ಎದುರಾಗಿದೆ.

      ತಾಲ್ಲೂಕಿನ ಡಂಬಳ ಹೋಬಳಿಯಲ್ಲಿ ಪಶು ಆಸ್ಪತ್ರೆ ಇದ್ದರೂ, ಅಲ್ಲಿ ವೈದ್ಯರ ಕೊರತೆಯಿಂದ ರೈತರು ಪ್ರತಿ ದಿನ ಜಾನುವಾರ ದೊಂದಿಗೆ ಪಶು ಆಸ್ಪತ್ರೆಗೆ ಬಳಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳಿಗೆ ವೈದ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ಹಲವಾರು ಬಾರಿ ಪತ್ರ ಬರೆಯಲಾಗಿದೆ. ಆದರೆ, ಇದುವರೆಗೂ ವೈದ್ಯರ ನೇಮಕ ಮಾಡಿಲ್ಲ ಈಗಿರುವ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.

–     ಡಾ.ಎಸ್.ವಿ.ತಿಗರಿಮಠ, ತಾಲೂಕು ಪಶು ವೈದ್ಯಾಧಿಕಾರಿ.

     ಪಶು ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಅನಾರೋಗ್ಯಕ್ಕೆ ತುತ್ತಾದ ದನಕರುಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯದೆ ಪಶುಗಳ ಪರಿತಪಿಸುತ್ತಿವೆ. ವಾರದಲ್ಲಿ 2 ಬಾರಿ ಮತ್ರ ಪಶು ಆಸ್ಪತ್ರೆಗೆ ವೈದ್ಯರು ಬರುವುದರಿಂದ ಅನಾರೋಗ್ಯಕ್ಕೆ ತುತ್ತಾದ ಜಾನುವಾರಗಳಿಗೆ ಸರಿಯಾದ ಚಿಕಿತ್ಸೆ ಸಿಗದಂತಾಗಿದೆ. ಪಶು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದರಿಂದ ಹಿರಿಯ ಪಶುವೈದ್ಯಕೀಯ ಪರೀಕ್ಷಕರು ಮತ್ತು ಪಶು ವೈದ್ಯಕೀಯ ಸಹಾಯಕ ಸಿಬ್ಬಂದಿ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

      ಸಿಬ್ಬಂದಿ ಕೊರತೆಯಿಂದ ಜಾನುವಾರಗಳಿಗೆ ಪಶು ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆಗೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣವೇ ಇಲ್ಲಿನ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿಗಳನ್ನು ನೇಮಿಸಬೇಕು ಎಂದು ಗ್ರಾಮಸ್ಥರಾದ ಸೋಮಣ್ಣ ಹೈತಾಪೂರ, ಮುತ್ತು ಜಕ್ಕಣ್ಣವರ್, ಕೋಟೇಶ್ ನೋಟಗಾರ ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೋನಾ ಪಾಸಿಟಿವ್ ಹಿನ್ನೆಲೆ ಸವಣೂರು ಸಂಪೂರ್ಣ ಲಾಕ್ ಡೌನ್

ಸವಣೂರು ಪಟ್ಟಣವನ್ನಿಂದು ಸಂಪೂರ್ಣ ಸೀಲ್ ಡೌನ್ ಮಾಡಲಾಯಿತು. ಪಟ್ಟಣದ ಎಲ್ಲ ಗಡಿಗಳನ್ನ ಬಂದ್ ಮಾಡಿ ಯಾರೂ ಹೊರ ಹೊಗದಂತೆ ಮತ್ತು ಒಳ ಬರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸೀಲ್ ಡೌನ್ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

22ನೆ ಸ್ಥಾನದಲ್ಲಿ ಗದಗ ಜಿಲ್ಲೆ : ಕಲಾ ವಿಭಾಗದಲ್ಲಿ ಕಳಪೆ, ಪಿಯುಸಿ-2 ಫಲಿತಾಂಶ ವಿವರ

ಕಳೆದ ಬಾರಿ ಶೇ. 57ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ ಈ ಬಾರಿ ಶೇ.63 ಸಾಧನೆ ಮಾಡಿದೆ. ಒಟ್ಟಾರೆ ಜಿಲ್ಲಾವಾರು ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ್ದು, 22 ನೆ ಸ್ಥಾನದಲ್ಲಿದೆ.

ಯಡಿಯೂರಪ್ಪ ದಮ್ ನಿಂದಲೇ ಸಿದ್ದು ವಿಪಕ್ಷ ನಾಯಕ: ಬಿ.ಸಿ.ಪಾಟೀಲ್

ಹಾವೇರಿ: ಯಡಿಯೂರಪ್ಪ ದಮ್ ನಿಂದಲೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗಿರೋದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್…

ಎಚ್.ಎಸ್.ವೆಂಕಟಾಪೂರದ ನೀರಿನ ಬವಣೆ ನೀಗುವುದು ಯಾವಾಗ..?

ಅದು ಆ ತಾಲೂಕಿನ ಕಟ್ಟಕಡೆಯ ಗ್ರಾಮ. ಆ ತಾಲೂಕಿನಲ್ಲಿ ಆ ಗ್ರಾಮ ಇದ್ರೂ ವಿಧಾನ ಸಭಾ ಕ್ಷೇತ್ರ ಮಾತ್ರ ಬೇರೆಯದೆ. ಎಲ್ಲಿಯ ತಾಲೂಕು, ಎಲ್ಲಿಯ ವಿಧಾನಸಭಾ ಕ್ಷೇತ್ರ, ಎಲ್ಲಿಯ ಆ ಗ್ರಾಮ ಎನ್ನುವಂತಾಗಿದೆ.