ಲಕ್ಷ್ಮೇಶ್ವರ: ಅನ್ನ ಭಾಗ್ಯ ಯೋಜನೆಯ ಅಕ್ಕಿ, ಮರಳು ಲೂಟಿ ಮಾಡುವುದು ಆಗಾಗ ಸಾಮಾನ್ಯವಾಗಿದೆ. ಆದರೆ, ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಮಣ್ಣು ಕೂಡ ಸದ್ದಿಲ್ಲದೇ ಲೂಟಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

ತಾಲೂಕಿನ ಗೊಜನೂರ ಹಾಗೂ ಅಕ್ಕಿಗುಂದ ಗ್ರಾಮದ ಮಧ್ಯದಲ್ಲಿ ಇರುವ ರೈತರ ಜಮೀನಿನಲ್ಲಿ ಮಣ್ಣನ್ನು ಪರವಾನಗಿ ರಹಿತವಾಗಿ ಖಾಸಗಿ ಲೇಔಟ್‌ಗಳಿಗೆ ಮಣ್ಣು ಮಾರಾಟ ಮಾಡಲಾಗುತ್ತಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಇದಕ್ಕೆ ಪರೋಕ್ಷ ಸಾಥ್ ನೀಡುತ್ತಿದ್ದಾರೆ ಎನ್ನುವ ಅಂಶ ಈಗ ಚರ್ಚೆಗೆ ಗ್ರಾಸವಾಗಿದೆ.

ರಸ್ತೆ ನಿರ್ಮಾಣಕ್ಕಾಗಿ ಅಗೆತ

ತಾಲೂಕಿನ ಗೊಜನೂರ ಹಾಗೂ ಅಕ್ಕಿಗುಂದ ಗ್ರಾಮದ ಮಧ್ಯದಲ್ಲಿ ಇರುವ ರೈತರ ಜಮೀನಿನಲ್ಲಿ ಮಣ್ಣು ಅಗೆದು ಹೆದ್ದಾರಿ ಕಾಮಗಾರಿಗೆ ಗುತ್ತಿಗೆದಾರ ಪರವಾನಿಗೆ ಪಡೆಯದೆ ರೈತರ ಜಮೀನನ್ನು ಅಗೆದು ಮಣ್ಣನ್ನು ಬಳಸಿಕೊಳ್ಳುತ್ತಿದ್ದಾನೆ. ಇದರಿಂದ ಸರಕಾರದ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಈಗಾಗಲೇ ದೊಡ್ಡೂರು ಸುವರ್ಣಗಿರಿ ತಾಂಡಾಗಳ ರೈತರ ಜಮೀನುಗಳನ್ನು ಪರವಾನಿಗೆ ಇಲ್ಲದೇ ಅಗೆಯುತ್ತಿರುವಾಗ ಉತ್ತರಪ್ರಭ ಸುದ್ದಿ ಮಾಡಿತು. ಇದರಿಂದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅದನ್ನು ನಿಲ್ಲಿಸಿದರು.

ರೈತರ ಜಮೀನಿನಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಣ್ಣನ್ನು ಸಾಗಿಸಲಾಗುತಿತ್ತ್ತು. ಮಾಹಿತಿ ಪ್ರಕಾರ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಸಂಬಧಿಸಿದವರಿಗೆ ಸೂಚನೆ ನೀಡಿದ್ದೇನೆ.

-ಬಸವರಾಜ ಕಾತರಾಳ(ಕಂದಾಯ ನಿರೀಕ್ಷಕ)

ಇಷ್ಟಾದಾಗ್ಯೂ ಈ ಭಾಗದಲ್ಲಿ ಮಾತ್ರ ಅಕ್ರಮ ದಂಧೆ ಇನ್ನು ಜೀವಂತವಾಗಿದೆ. ಗುತ್ತಿಗೆದಾರ ಇನ್ನು ಪರವಾನಿಗೆ ಪಡೆಯದೆ ಮಣ್ಣು ಅಗೆಯುತ್ತಿದ್ದಾರೆ. ಇಷ್ಟೆಲ್ಲಾ ಇದ್ದರು, ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಕೈಕಟ್ಟಿ ಕೊಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇಲ್ಲಿ ತೆಗೆದ ಮಣ್ಣನ್ನು ಗುತ್ತಿಗೆದಾರರು ಸರಕಾರಕ್ಕೆ ಯಾವುದೇ ತೆರಿಗೆ ಕಟ್ಟದೆ ಹಾಗೂ ಅನುಮತಿ ಇಲ್ಲದೆ ಅಗೆದು ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತಿದ್ದಾರೆ.

ರಸ್ತೆ ಕಾಮಗಾರಿ ಹೆಸರಲ್ಲಿ ನಿತ್ಯ ಟಿಪ್ಪರ್‌ಗಳಲ್ಲಿ ಮಣ್ಣ ಅಗೆದು ರಸ್ತೆ ಕಾಮಗಾರಿಗೆ ಹಾಕುತ್ತಿದ್ದಾರೆ. ವಿವಿಧೆಡೆ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಒಂದು ತಿಂಗಳಿದ ಭೂತಾಯಿಯ ಒಡಲಿಗೆ ಕನ್ನ ಹಾಕುತಿದ್ದಾರೆ. ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಳಿತಿದ್ದಾರೆ.

Leave a Reply

Your email address will not be published. Required fields are marked *

You May Also Like

ಪೋಲಿಸ್ ಸಬ್‌ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸ್ಥಳೀಯ ಮತ್ತು ಇನ್ನೂಳಿದ ವೃಂದಗಳ ಪೊಲೀಸ್ ಸಬ್‌ಇನ್ಸ್ಪೆಕ್ಟರ್ (ಸಿವಿಲ್) (ಪುರುಷ, ಮಹಿಳೆ ಮತ್ತು ಸೇವೆಯಲ್ಲಿರುವವರು) ಒಟ್ಟು 545 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಾರಾಯಿ ಅಂಗಡಿ ಆರಂಭದಿಂದ ಶಿಸ್ತು ಮಾಯವಾಗಿದೆ: ಶಾಸಕ ಎಚ್.ಕೆ.ಪಾಟೀಲ್

ಲಾಕ್ ಡೌನ್ ಹಿನ್ನೆಲೆ ಕಳೆದ 45 ದಿನಗಳಿಂದ ಸಾರಾಯಿ ಅಂಗಡಿ ಬಂದ ಇರುವುದರಿಂದ ಜನರಲ್ಲಿ ಶಿಸ್ತು ಇತ್ತು. ಆದರೆ ಕಳೆದ ಎರಡು ದಿನಗಳಿಂದ ಮತ್ತೆ ಸಾರಾಯಿ ಅಂಗಡಿ ಆರಂಭವಾಗಿದ್ದರಿಂದ ಜನರಲ್ಲಿ ಶಿಸ್ತು ಮಾಯವಾಗಿದೆ.

ನೆಲೋಗಿ ಠಾಣೆ ಪೊಲೀಸರ ಭರ್ಜರಿ ಬೇಟೆ 41.8 ಕೆಜಿ ಗಾಂಜಾ ಜಪ್ತಿ

ಉತ್ತರಪ್ರಭ ನೆಲೋಗಿ: ರಾಷ್ಟೀಯ ಹೆದ್ದಾರಿ 50ರ ಕಲಬುರ್ಗಿಯಿಂದ ವಿಜಯಪುರಕ್ಕೆ ಮಾರ್ಗಮಧ್ಯದಲ್ಲಿ  ನೆಲೋಗಿ ಕಮಾನ್ ಬಸ್ ನಿಲ್ದಾಣದ…

ಕೂತುಹಲ ಕೆರಳಿಸಿದ ಸಿದ್ದರಾಮಯ್ಯ ದೆಹಲಿ ಬೇಟಿ

ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಿಢೀರ್‌ ದೆಹಲಿ ಭೇಟಿಗೆ ಮುಂದಾಗಿದ್ದಾರೆ.