ಗದಗ: ಸರ್ಕಾರ ನಿಗದಿಪಡಿಸಿದ ಮಾರಾಟ ಬೆಲೆಗಿಂತ ಹೆಚ್ಚಿನ ದರದಲ್ಲಿ ಯೂರಿಯಾ ರಸಗೊಬ್ಬರವನ್ನು ವಿತರಿಸುತ್ತಿರುವ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಸಹಾಯಕ ನಿರ್ದೇಶಕರ ಜಾರಿ ದಳ ತಂಡವು ಜಿಲ್ಲೆಯಲ್ಲಿನ ಕೆಳಕಂಡ ಕೃಷಿ ಪರಿಕರಗಳ ಮಾರಾಟ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗಿ ಹೆಚ್ಚಿನ ದರಕ್ಕೆ ಯೂರಿಯಾ ರಸಗೊಬ್ಬರ ಮಾರಾಟ ಮಾಡಿರುವುದು ದೃಢಪಟ್ಟಿರುತ್ತದೆ.
ಜಿಲ್ಲೆಯ ಗದಗನ ಶ್ರೀ ಮಂಜುನಾಥ ಟ್ರೇಡರ್ಸ, ರೇಣುಕಾ ಅಗ್ರೋ ಕೇಂದ್ರ, ಶ್ರೀ ಚನ್ನವೀರೇಶ್ವರ ಅಗ್ರೋ ಕೇಂದ್ರ, ಎಸ್.ವಿ.ಹಲವಾಗಲಿ & ಸನ್ಸ್, ಮಹಾಂತೇಶ ಅಗ್ರೋ ಏಜೆನ್ಸಿ, ಅಂತೂರು-ಬೆಂತೂರಿನ ಶ್ರೀ ಅಗ್ರೋ ಕೇಂದ್ರ, ಗಜೇಂದ್ರಗಡ ತಾಲೂಕಿನ ಮಹಾಂತೇಶ ಅಗ್ರೋ ಕೇಂದ್ರ, ರೋಣ ತಾಲೂಕಿನ ಮಹಾವೀರ ಟ್ರೇಡರ್ಸ ಹಾಗೂ ಶಿರಹಟ್ಟಿ ತಾಲೂಕಿನ ಹೊಳೆಇಟಗಿಯ ಸುರೇಶ ಟ್ರೇಡರ್ಸ ಈ ಕೃಷಿ ಮಾರಾಟ ಮಳಿಗೆಗಳ ರಸಗೊಬ್ಬರ ಮಾರಾಟ ಪರವಾನಿಗೆಯನ್ನು 15 ದಿನಗಳ ಕಾಲ ಅಮಾನತ್ತಿನಲ್ಲಿರಿಸಲಾಗಿದೆ.
ಇಲಾಖೆಯ ಜಾರಿ ದಳ ತಂಡದಿಂದ ಜಿಲ್ಲೆಯಲ್ಲಿನ 60ಕ್ಕೂ ಹೆಚ್ಚಿನ ಕೃಷಿ ಪರಿಕರ ಮಾರಾಟ ಮಳಿಗೆಯ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿ ನೋಟೀಸ್ ನೀಡಲಾಗಿದೆ.
ಸರ್ಕಾರ ನಿಗದಿಪಡಿಸಿದ ಮಾರಾಟ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರಲ್ಲಿ ರೈತರು ಇಲಾಖೆಯ ಜಾರಿದಳ ತಂಡದ ಮುಖ್ಯಸ್ಥ ಸಂತೋಷ ಪಟ್ಟದಕಲ್ಲ, ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಗದಗ ಮೊಬೈಲ್ ಸಂಖ್ಯೆ 8618742613 ಸಂಪರ್ಕಿಸಲು ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.