ಅಗಸ್ಟ್ 5ಕ್ಕೆ ಜಮ್ಮ-ಕಾಶ್ಮೀರದ 370 ವಿಧಿ ರದ್ದು ಮಾಡಿದ ಪ್ರಕ್ರಿಯೆಗೆ ಒಂದು ವರ್ಷ ತುಂಬುತ್ತಿರುವುದು ಕೇವಲ ಕಾಕತಾಳೀಯವೆ?

ಲಕ್ನೋ: ‘ಅಗಸ್ಟ್ 3 ಅಥವಾ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಾಗಿಸುವುದು. ಪ್ರಧಾನಮಂತ್ರಿಯೇ ಇದನ್ನು ಮಾಡಬೇಕೆಂದು ಟ್ರಸ್ಟ್ ಅಭಿಲಾಷೆಯಾಗಿದ್ದು, ಅವರಿಗೆ ಆಹ್ವಾನ ನೀಡಿದ್ದೇವೆ ಎಂದು ನಿರ್ಮಾಣದ ಜವಾಬ್ದಾರಿ ಪಡೆದಿರುವ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ಶನಿವಾರ ಅಯೋಧ್ಯೆಯಲ್ಲಿ ಟ್ಟಸ್ಟ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಸ್ಟ್ ಸದಸ್ಯ ಕಾಮೇಶ್ವರ್ ಚೌಪಾಲ್ ಈ ಮಾಹಿತಿ ನೀಡಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪಾ ರಾಜ್ ಮಾತನಾಡಿ, ಎಲ್ & ಟಿ ಕಂಪನಿಗೆ ನಿರ್ಮಾಣ ಕಾರ್ಯದ ಗುತ್ತಿಗೆ ನೀಡಲಾಗಿದೆ ಎಂದರು.

ಅಗಸ್ಟ್ 5ಕ್ಕೆ ಜಮ್ಮು-ಕಾಶ್ಮೀರದಲ್ಲಿ 370ನೆ ವಿಧಿ ರದ್ದು ಮಾಡಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿ ಒಂದು ವರ್ಷ ತುಂಬಲಿದೆ. ರಾಮ ಮಂದಿರ ನಿರ್ಮಾಣ ಮತ್ತು 370ನೆ ವಿಧಿ ರದ್ದು ಬಿಜೆಪಿಯ ಎರಡು ಪ್ರಮುಖ ಅಜೆಂಡಾ ಆಗಿದ್ದವು. ಕಳೆದ ವರ್ಷ ಆಗಸ್ಟ್ ನಲ್ಲಿ 370ನೆ ವಿಧಿ ರದ್ದಾಗಿತು. ನವೆಂಬರಿನಲ್ಲಿ ಸುಪ್ರೀಂಕೋರ್ಟ್ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತು.

Leave a Reply

Your email address will not be published. Required fields are marked *

You May Also Like

ಕೊರೊನಾ ಪರೀಕ್ಷೆ: ದೇಶಾದ್ಯಂತ ಸಮಂಜಸ ದರ ನಿಗದಿಗೆ ಸುಪ್ರೀಂ ಸೂಚನೆ

ದೆಹಲಿ: ಕೊರೊನಾ ಪರೀಕ್ಷೆಗೆ ಸಮಂಜಸ ದರ ನಿಗದಿಮಾಡಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಭೂಷಣ್ ಹೇಳಿದ್ದಾರೆ.…

ಉದ್ಧವ್ ಠಾಕ್ರೆ ಮನದಲ್ಲಿ ಮೂಡಿದ ನಿರಾಳ!

ಕೇಂದ್ರ ಚುನಾವಣಾ ಆಯೋಗವು ಮೇ. 27ರ ಒಳಗೆ ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಅನುಮತಿ ನೀಡಿದ್ದು, ಸಿಎಂ ಉದ್ದವ್ ಠಾಕ್ರೆಗೆ ಸಂತಸ ತಂದಿದೆ.

ರಾಜ್ಯಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾರು ಆಯ್ಕೆ..?

ಆಂಧ್ರವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ,…

ಮಹಾಮಾರಿಗೆ ಬೆಚ್ಚಿ ಬಿದ್ದ ಮಹಾರಾಷ್ಟ್ರ!

ಮುಂಬಯಿ: ಕೊರೊನಾ ಮಹಾಮಾರಿಗೆ ಇಡೀ ಮಹಾರಾಷ್ಟ್ರವೇ ಕಂಗಾಲಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 41 ಸಾವಿರ ಗಡಿ…