ನವದೆಹಲಿ : ದೇಶದಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಗುಣಮುಖರಾದವರ ಸಂಖ್ಯೆ ಏರಿಕೆಯಾಗುತ್ತಿದೆ. ದೇಶದಲ್ಲಿ ಸದ್ಯ ಸೋಂಕಿತರ ಸಂಖ್ಯೆ 69 ಲಕ್ಷದ ಗಡಿ ದಾಟಿದೆ.

69,06,152ರ ಪೈಕಿ ಸದ್ಯ 8,93,592 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 59,06,070 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಿಡುಗಡೆ ಹೊಂದಿದ್ದಾರೆ. 964 ಜನ ಒಂದೇ ದಿನದಲ್ಲಿ ಸಾವನ್ನಪ್ಪುವ ಮೂಲಕ ಇದುವರೆಗೂ 1,06,490 ಜನ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಸೋಂಕಿತರ ಸಂಖ್ಯೆ ಸದ್ಯ 69 ಲಕ್ಷ ಇದ್ದರೆ, ಚೇತರಿಸಿಕೊಂಡವರ ಸಂಖ್ಯೆ 59 ಲಕ್ಷಕ್ಕೆ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 70,496 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 69,06,152ಕ್ಕೆ ಏರಿಕೆ ಕಂಡಿದೆ. ಅಲ್ಲದೇ, ಒಂದೇ ದಿನ ದೇಶದಲ್ಲಿ 964 ಜನ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

Leave a Reply

Your email address will not be published. Required fields are marked *

You May Also Like

ಹರ್ನಾಜ್ ಕೌರ್ ಸಂಧು 2021ರ ನೂತನ ವಿಶ್ವ ಸುಂದರಿ!

ಉತ್ತರಪ್ರಭ ದೆಹಲಿ: 2021ರ 70ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು…

ವಾರಂಟಿಯೇ ಇಲ್ಲದ ಮೇಲೆ ಗ್ಯಾರಂಟಿ ಹೇಗೆ ?
ಕಾಂಗೈ ಕಾಡ್೯ ಠುಸ್ಸು ಪರಸ್ಥಿತಿ ಈಗ ಬಲು ದುಸ್ಥಿತಿ ಸಿ.ಟಿ.ರವಿ ವ್ಯಂಗ್ಯ

ಆಲಮಟ್ಟಿ: ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಭರಪೂರ ಸುಳ್ಳು ಭರವಸೆ ನೀಡುತ್ತಿದ್ದು, ಆ ಪಕ್ಷದ ವಾರಂಟಿಯೇ…

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: 32 ಆರೋಪಿಗಳು ಖುಲಾಸೆ

ವಿವಾದಕ್ಕೆ ಸಂಬಂಧಿಸಿದಂತೆ ಆಪಾದಿತ ಎಲ್ಲಾ 32 ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. ಈ ಮೂಲಕ ಕೋರ್ಟ್ ನೀಡಿದ ಈ ತೀರ್ಪು ನಿಂದಾಗಿ 28 ವರ್ಷಗಳ ಸುದೀರ್ಘ ಪ್ರಕರಣಕ್ಕೆ ತೆರೆ ಎಳೆದಂತಾಗಿದೆ. ಹಾಗೇ ಪ್ರಕರಣದ ಪ್ರಮುಖ ದೋಷಿಗಳಾದ ಅಡ್ವಾಣಿ, ಉಮಾಭಾರತಿ, ಮುರುಳಿ ಮನೋಹರ್ ಜೋಷಿ ಸೇರಿದಂತೆ ಇತರರು ನಿರಾಳರಾಗಿದ್ದಾರೆ.

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್ ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನದಲ್ಲಿ 50 ಪಾಸಿಟಿವ್ ಪ್ರಕರಣಗಳು…