ರಾಂಚಿ: ಲಾಕ್ ಡೌನ್ ನಿಂದಾಗಿ ಮದುವೆ ಮುಂದೂಡಿದ್ದರಿಂದ ಮನನೊಂದ 30 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಜಮ್ಶೆಡ್ ಪುರದ ವಿಶ್ವಕರ್ಮ ನಗರದಲ್ಲಿ ನಡೆದಿದೆ.
ಸಂಜೀತ್ ಗುಪ್ತಾ ಆತ್ಮಹತ್ಯೆ ಮಾಡಿಕೊಂಡ ಯುವಕ. ಮದುವೆ ಮುಂದೂಡಿಕೆಯಾಗಿದ್ದರಿಂದಾಗಿ ಈ ಯುವಕ ತುಂಬಾ ನೊಂದುಕೊಂಡಿದ್ದ.
ಶನಿವಾರ ರಾತ್ರಿ ಸಂಜೀತ್ ಊಟ ಮುಗಿಸಿ ತನ್ನ ರೂಮಿಗೆ ತೆರಳಿದ್ದಾನೆ. ಎಂದಿನಂತೆ ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ. ಬೆಳಿಗ್ಗೆ 4ಕ್ಕೆ ಸಂಜೀತ್ ತಂದೆಗೆ ಎಚ್ಚರವಾಗಿದೆ. ಈ ವೇಳೆ ಸಂಜೀತ್ ಮನೆಯ ಹಾಲ್ ನಲ್ಲಿರುವ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಕಂಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.