ಮುಂಬೈ: ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ತಂಡದ ನಾಯಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದು, ಚೆನ್ನೈ ತಂಡದ ನೂತನ ನಾಯಕರಾಗಿ ರವೀಂದ್ರ ಜಡೇಜಾ ಅವರು ನೇಮಕಗೊಂಡಿದ್ದಾರೆ.ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದ್ದು, ಎಂಎಸ್ ಧೋನಿ ಅವರು ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾ ಅವರಿಗೆ ವರ್ಗಾಯಿಸಿದ್ದಾರೆ ಎಂದು ಹೇಳಿದೆ.

2008ರಲ್ಲಿ ಆರಂಭವಾದ ಐಪಿಎಲ್ ಲೀಗ್‌ನ ಆರಂಭದಿಂದಲೂ ಸಿಎಸ್‌ಕೆ ನಾಯಕರಾಗಿರುವ ಧೋನಿ ಅವರಿಗೆ ಇದು ಐಪಿಎಲ್ ಕೊನೆಯ ಆವೃತ್ತಿ ಆಗಬಹುದು. ಅವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

