ಫೇಸ್ ಕ್ರೀಮ್ ಹೆಸರುಗಳಿಗಾಗಿ ಈಗ ಇಮಾಮಿ ಮ಻ತ್ತು ಹಿಂದೂಸ್ತಾನ್ ಯುನಿಲಿವರ್ ಕಂಪನಿಗಳು ಕೋರ್ಟಿನ ಅಂಗಳದಲ್ಲಿ ಕಾದಾಡುತ್ತಿವೆ.

ಮುಂಬೈ: ಹಿಂದೂಸ್ತಾನ್ ಯುನಿಲಿವರ್ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮಕ್ಕೆ ನಿರ್ಬಂಧಿಸುವ ಜುಲೈ 6ರ ಆದೇಶವನ್ನು ಹಿಂಪಡೆಯಬೇಕು ಎಂದು ಇಮಾಮಿ ಕಂಪನಿ ಮಾಡಿದ್ದ ಮನವಿಯನ್ನು ಬಾಂಬೆ  ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ಆರ್.ಡಿ. ಧನುಕಾ ಮತ್ತು ವಿ.ಜಿ. ಬಿಸ್ತ್ ಅವರಿದ್ದ ಪೀಠವು, ಜುಲೈ 6ರಂದು ಏಕ ಸದಸ್ಯ ಪೀಠ ನೀಡಿದ ಆದೇಶದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿದೆ.

ಏನಿದು ಕ್ರೀಮ್ ರಗಳೆ?

ಇದು ಒಂಥರಾ ಇಂಟರೆಸ್ಟಿಂಗ್ ಸ್ಟೋರಿ. ‘ಫೇರ್ & ಲವ್ಲಿ’ಯ ಫೇರ್ ಪದವು ಕಪ್ಪು ಬಣ್ಣದವರನ್ನು ಹೀಯಾಳಿಸುತ್ತದೆ ಎಂಬ ವಾದಗಳು ಜೋರಾದ ನಂತರ ಹಿಂದುಸ್ತಾನ್ ಯುನಿಲಿವರ್ ಕಂಪನಿಯು ಹೆಸರು ಬದಲಾವಣೆಗೆ ಒಪ್ಪಿತು. ಫೇರ್ & ಲವ್ಲಿಯನ್ನು ಗ್ಲೋ & ಲವ್ಲಿ ಎಂದೂ, ಗಂಡಸರ ಕ್ರೀಮಿಗೆ ‘ ಗ್ಲೋ & ಹ್ಯಾಂಡ್ಸಮ್’ ಎಂದೂ ನಾಮಕರಣ ಮಾಡಿತು. ಆದರೆ ಇಮಾಮಿ ಕಂಪನಿಯ ಗಂಡಸರ ಫೇಸ್ ಕ್ರೀಂ ಹೆಸರು ‘ಫೇರ್ & ಹ್ಯಾಂಡ್ಸಮ್’ ಎಂದಿದೆ. ಹಿಂದೂಸ್ತಾನ್ ಲಿವರ್ ಕಂಪನಿಯ  ‘ಗ್ಲೋ & ಹ್ಯಾಂಡ್ಸಮ್’ ಹೆಸರು ತನ್ನ ಬ್ರ್ಯಾಂಡ್ ಹೆಸರನ್ನು ನಕಲು ಮಾಡುವ ಯತ್ನ ಎಂದು ಇಮಾಮಿ ಕಂಪನಿ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಟ್ರೇಡ್ ಮಾರ್ಕ್ ಆಕ್ಟ್ ನ 142 ನಿಯಮದ ಪ್ರಕಾರ ಇದು ಅಪರಾಧ ಎಂದು ಇಮಾಮಿ ವಾದಿಸುತ್ತಿದೆ. ಕೋರ್ಟಿನಲ್ಲಿ ಏನೋ ಒಂದು ಆಗುತ್ತದೆ, ನೀವು ನಿಮಗೆ ಇಷ್ಟವಾದ ಕ್ರೀಮ್ ಹಚ್ಚಿಕೊಳ್ಳುವುದನ್ನು ಮುಂದುವರೆಸಿ.

Leave a Reply

Your email address will not be published.

You May Also Like

ಮಾಜಿ ಪಿಎಂ ದೇವೇಗೌಡರಿಗೆ ಪ್ರಶಂಸಾ ಪತ್ರ ಕಳುಹಿಸಿದ ಹಾಲಿ ಪಿಎಂ

ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಪಿಎಂ ಕೇರ್ ಹಾಗೂ ಕರ್ನಾಟಕ, ಕೇರಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇವೇಗೌಡ ಅವರನ್ನು ಪ್ರಶಂಶಿಸಿ ಪತ್ರ ಬರೆದಿದ್ದಾರೆ.

ಸಿಎಂ ಗೆಹ್ಲೋಟ್ V/s ಡಿಸಿಎಂ ಪೈಲಟ್: ರಾಜಸ್ತಾನ ಸರ್ಕಾರ ಕೆಡವಲು ಆಪರೇಷನ್ ಕಮಲ

ರಾಜಸ್ತಾನದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ದೊಡ್ಡ ಆಫರ್ ನೀಡಿತ್ತು ಎಂದು 20 ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ. ಡಿಸಿಎಂ ಸಚೀನ್ ಪೈಲಟ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಮಹದಾಯಿ ವಿಚಾರ: 4 ವಾರಗಳಲ್ಲಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಆದೇಶ!

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಮಲಪ್ರಭಾ ನದಿಗೆ ನೀರು ತಿರುಗಿಸುತ್ತಿದೆ ಎಂದು ಗೋವಾ ರಾಜ್ಯ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಗೋವಾ ಮನವಿ ಪರಿಶೀಲಿಸಿ ಇದಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಪರಿಶೀಲನೆ ನಡೆಸಲು ನಾಲ್ಕು ವಾರಗಳಲ್ಲಿ ತಜ್ಞರನ್ನೊಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ.