ಕೋರೊನಾ ಕಾಟದಿಂದ ಹತ್ತಾರು ರೂಲ್ಸ್ ಜಾರಿಗೆ ಬಂದಿವೆ. ಸದ್ಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಕೋರೊನಾ ನಿಯಮ ಜಾರಿಯಲ್ಲಿವೆ.

ಬೌಲಿಂಗ್ ತುದಿಗೆ ಬರುವ ಬೌಲರ್, ನಾಯಕನಿಂದ ಬಾಲ್ ಪಡೆದು, ತನ್ನ ರೂಢಿಗತ ಸ್ಟೆಪ್ಸ್ ಕಡೆ ಹೊರಡುವಾಗ ಹಳೆ ರೂಢಿಯಲ್ಲಿ ಬಾಯಿಯ ಉಗುಳು-ಜೊಲ್ಲು ಕೈಗೆ ಹಚ್ಚಿಕೊಂಡು ಬಾಲ್ಗೆ ಗಸಗಸ ತಿಕ್ಕತೊಡಗುತ್ತಾನೆ. ‘ಹೇ ಸ್ಟಾಪ್ ಇಟ್’ ಎಂಬ ಧ್ವನಿ ಬರುತ್ತದೆ. ಅದು ಅಂಪೈರ್ ವಾರ್ನಿಂಗ್. ಸದಾ ಬ್ಯಾಟಮನ್ ಕಡೆ ಮುಖ ಮಾಡಿ ನಿಲ್ಲುವ ಅಂಪೈರ್ ಈಗ ಕೆಲವು ಕ್ಷಣಗಳವರೆಗೆ ಬೌಲರ್ ನನ್ನು ಗಮನಿಸುತ್ತಿರಬೇಕು. ‘ಬಾಲ್ಗೆ ಉಗುಳು ಸವರಬೇಡಪ್ಪ, ಮೊದ್ಲೇ ರೂಲ್ಸ್ ಓದಿಲ್ಲವಾ?’ ಎನ್ನುತ್ತಾನೆ. ‘ಛೇ, ಹಳೆ ರೂಢಿ’ ಎಂದು ಬೌಲರ್ ಗೊಣಗುತ್ತಾನೆ.

ಫೀಲ್ಡಿಂಗ್ ತಂಡದಿಂದ ಈ ತಪ್ಪು ಇನ್ನೆರಡು ಸಲ ಪುನರಾವರ್ತನೆಯಾದರೆ, ಪ್ರತಿ ಸಲ ಉಗುಳು ಹಚ್ಚಿದಾಗೊಮ್ಮೆ ಬ್ಯಾಟಿಂಗ್ ತಂಡಕ್ಕೆ 5 ಬೋನಸ್ ರನ್ ಸ್ಪಾಟಿನಲ್ಲೇ ಸಿಗುತ್ತದೆ. ಅಂದಂತೆ ಪ್ರತಿ ಸಲ ಉಗುಳು ಹಚ್ಚಿದಾಗ ಅಂಪೈರ್ ಬಾಲ್ ಪಡೆದು ಸ್ವಚ್ಛಗೊಳಿಸಿ ಕೊಡಬೇಕು!

ಇದು ಕೋರೊನಾ ಕ್ರಿಕೆಟ್ ನಲ್ಲಿ ತಂದಿರುವ ಬದಲಾವಣೆ. ಕೋವಿಡ್ ಕಾರಣಕ್ಕೆ 107 ದಿನ ಬಂದ್ ಆಗಿದ್ದ ಕ್ರಿಕೆಟ್ ಜುಲೈ 8ರಿಂದ ಮತ್ತೆ ಶುರುವಾಗಿದೆ. ಆದರೆ ಕೋರೊನಾ ಕಾಟದಿಂದ ಹತ್ತಾರು ರೂಲ್ಸ್ ಜಾರಿಗೆ ಬಂದಿವೆ. ಸದ್ಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಕೋರೊನಾ ನಿಯಮ ಜಾರಿಯಲ್ಲಿವೆ.

ಕ್ವಾರಂಟೈನ್, ಸೊಷಿಯಲ್ ಡಿಸ್ಟನ್ಸ್

ಸದ್ಯಕ್ಕೆ ಮೈದಾನದಲ್ಲಿ ಮಾಸ್ಕ್ ಹಾಕುವ ಅಗತ್ಯ ಬಿದ್ದಿಲ್ಲವಷ್ಟೇ, ಉಳಿದೆಲ್ಲ ಕೋರೊನಾ ನಿಯಮ ಜಾರಿಯಲ್ಲಿವೆ.

ತಂಡಗಳು ಟೂರ್ನಿಗೂ ಮೊದಲು ವಾರ ಅಥವಾ ಹೆಚ್ಚು ಕಾಲ ಕ್ವಾರಂಟೈನ್ ಗೆ ಒಳಗಾಗಬೇಕು. ತಂಡ ಆಯ್ಕೆಯಾದ ಕೂಡಲೇ ಕೋರೊನಾ ಟೆಸ್ಟಿಗೆ ಒಳಗಾಗಬೇಕು. ಪಾಸಿಟಿವ್ ಬಂದರೆ ಔಟ್! ಟೆಸ್ಟ್ ಪಂದ್ಯದಲ್ಲಿ ದಿನವೂ ಕೋರೊನಾ ಟೆಸ್ಟಿಂಗ್ ಇರುತ್ತದೆ. ಪಾಸಿಟಿವ್ ಬಂದವರು ರೈಟ್ ಹೇಳಿ ಚಿಕಿತ್ಸೆಗೆ ದಾಖಲಾಗಬೇಕು. ಆ ಜಾಗಕ್ಕೆ ಬರುವವರ ಟೆಸ್ಟ್ ರಿಜಲ್ಟ್ ನೆಗೆಟಿವ್ ಬರಬೇಕು.

ವಿಕೆಟ್ ಬಿದ್ದಾಗ? ಎಲ್ಲ ಗುಂಪು ಸೇರಿ ಸೆಲೆಬ್ರೆಟ್ ಮಾಡಂಗಿಲ್ಲ. ಕೈ ಕೈ ತಟ್ಟಂಗಿಲ್ಲ. ಅಪ್ಪಿಕೊಳ್ಳೋದಂತೂ ಫುಲ್ ಬ್ಯಾನ್. ಸೊಷಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡಬೇಕು!

ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧವಾಗಿರುವ ಪಾಕ್ ತಂಡದಲ್ಲಿ 7 ಜನರಿಗೆ ಪಾಸಿಟಿವ್ ಬಂದಿತ್ತು. ಅವರು ಈಗ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.

ಈಗ ಈ ಎಲ್ಲ ರೂಲ್ಸ್ ನೋಡಿದ ಮೇಲೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಕ್ರಿಕೆಟ್-ಟೆಸ್ಟ್ ನಡೆದಿದೆಯೋ ಅಥವಾ ಕೋರೊನಾ-ಟೆಸ್ಟ್ ನಡೆದಿದಿಯೋ? ಎಂಬ ಅನುಮಾನ ಕಾಡುತ್ತಿದೆ. ಅಂದಂತೆ ಹೀಗೆಲ್ಲ ರೂಲ್ಸ್ ರೂಪಿಸಿದ್ದು ಕನ್ನಡಿಗ ಅನಿಲ್ ಕುಂಬ್ಳೆ ನೇತ್ರತ್ವದ ಸಮಿತಿ.

Corona changed cricket rools

Leave a Reply

Your email address will not be published.

You May Also Like

ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಸುಲಭ ಮೊತ್ತದ ಗುರಿ ನೀಡಿದ ಹೈದರಾಬಾದ್!

ಶಾರ್ಜಾ : ಮನೀಶ್ ಪಾಂಡೆ ಅವರ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ…

ಹರ್ಭಜನ್ ಸಿಂಗ್ ವಿರುದ್ಧ ಚೆನ್ನೈ ಅಭಿಮಾನಿಗಳೇಕೆ ಕಿಡಿ ಕಾರುತ್ತಿದ್ದಾರೆ?

ಮುಂಬಯಿ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಪಂದ್ಯದ ಸಂದರ್ಭದಲ್ಲಿ ಸನ್‍ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ನಡೆದ ಪಂದ್ಯದ ಸಂದರ್ಭದಲ್ಲಿ ಅಂಪೈರ್ ವೈಡ್ ನೀಡಲು ಮುಂದಾಗಿ ಧೋನಿ, ಆಕ್ಷೇಪಿಸುತ್ತಿದ್ದಂತೆ ತೀರ್ಮಾನ ಬದಲಿಸಿದ್ದ ಘಟನೆ ಸದ್ಯ ಚೆರ್ಚೆಗೆ ಕಾರಣವಾಗಿದೆ.

ಅರಬರ ನೆಲದಲ್ಲಿ ಇಂಡಿಯನ್ ಐಪಿಎಲ್! ಜೂಜುಕೋರ ಬಿಸಿಸಿಐನ ಕೋವಿಡ್ ಗೇಮ್

ಇಂಡಿಯನ್ಪ್ರಿಮೀಯರ್ ಲೀಗ್ ಎಂಬುದು ಕೇವಲ ಆಟವಲ್ಲ, ಅದೊಂದುಬ್ಯುಸಿನೆಸ್ ಮತ್ತು ಕಪ್ಪು ಹಣ ಬಿಳಿಪಾಗಿಸುವ ದಂಧೆ.ಹೀಗಾಗಿ ಈ ಕೋರೊನಾ ಬಿಕ್ಕಟ್ಟಿನಲ್ಲೂ ಐಪಿಎಲ್ ನಡೆಸಲುಶತಾಯಗತಾಯ ಯತ್ನಗಳು ನಡೆದ

ರೈನಾರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಪಟ್ಟು ಹಿಡಿದ ಅಭಿಮಾನಿಗಳು!

ಬೆಂಗಳೂರು : ಚೆನ್ನೈ ಸೂಪರ್ ಕಿಂಗ್ಸ್ ತಂಡ ಯಾರೂ ಊಹಿಸದ ರೀತಿಯಲ್ಲಿ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಸೋಲು ಕಾಣುತ್ತಿದೆ.