ಇಂದು ಬಿಸಿಸಿಐ ಸಭೆ: ಐಪಿಎಲ್ ಮತ್ತೆ ಮೈದಾನಕ್ಕೆ?

ಕೋರೊನಾ ಬಿಕ್ಕಟ್ಟಿನ ಕಾರಣಕ್ಕೆ ಕ್ರಿಕೆಟ್ ಮಲಗಿದೆ. ತಿಂಗಳುಗಳ ನಂತರ ಇಂದು ಬಿಸಿಸಿಐ ಮಹತ್ವದ ಸಭೆ ನಡೆಸುತ್ತಿದ್ದು, ದೇಶದಲ್ಲಿ ಮತ್ತೆ ಕ್ರಿಕೆಟ್ ಜ್ವರ ಶುರುವಾಗಬಹುದೇ ಎಂದು ಕಾಯಲಾಗುತ್ತಿದೆ.

ಮುಂಬೈ: ಇಂದು ಶುಕ್ರವಾರ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸಭೆ ನಡೆಸುತ್ತಿದ್ದು ಕ್ರಿಕೆಟ್ ಮರು ಆರಂಭ ಸೇರಿದಂತೆ 11 ವಿಷಯಗಳ ಮೇಲೆ ಚರ್ಚೆ ನಡೆಯಲಿದ್ದು, ಬಹು ನಿರೀಕ್ಷಿತ ಐಪಿಎಲ್ ಮತ್ತೆ ಜೀವ ಪಡೆಯಬಹುದೇ ಎಂದು ಕ್ರಿಕೆಟ್ ಪ್ರಿಯರು ಕಾಯುತ್ತಿದ್ದಾರೆ.

ಬೋರ್ಡ್ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಇತರ 7 ಅಧಿಕಾರಿಗಳಿರುವ ಇರುವ ಅಪೆಕ್ಸ್ ಕೌನ್ಸಿಲ್ ಇಂದು ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದೆ.

ಇಂದಿನ ಸಭೆಯ ಅಜೆಂಡಾ ಹೀಗಿದೆ:

· 2020ರ ಐಪಿಎಲ್ ಲೀಗ್

· ರಣಜಿ ಮುಂತಾದ ದೇಶೀಯ ಕ್ರಿಕೆಟ್ ಆಯೋಜನೆ

· ಭಾರತ ತಂಡದ ಇಂಗ್ಲೆಂಡ್ ಪ್ರವಾಸ

· ಟಿ-20 ವಿಶ್ವಕಪ್ ಟೂರ್ನಾಮೆಂಟಿಗೆ ಸರ್ಕಾರದಿಂದ ತೆರಿಗೆ ವಿನಾಯಿತಿ.

ಸದ್ಯಕ್ಕೆ ಕ್ರಿಕೆಟ್ ಪ್ರಿಯರ ಚಿತ್ತ ಮಾತ್ರ ಐಪಿಎಲ್ ಲೀಗ್ ಕಡೆ ಇರುವುದರಿಂದ ಈ ಸಭೆಗೆ ಮಹತ್ವ ಬಂದಿದೆ. ಈಗ ಇಂಗ್ಲೆಂಡಿನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಕೋರೋನಾ ನಿಯಮಗಳನ್ನು ಪಾಲಿಸಿ ಮೊದಲ ಟೆಸ್ಟ ಅನ್ನು ಯಶಸ್ವಿಯಾಗಿ ಮುಗಿಸಿದ್ದು, 2ನೆ ಟೆಸ್ಟ್ ಕೂಡ ಆರಂಭವಾಗಿದೆ. ಹೀಗಾಗಿ ದೇಶದಲ್ಲೂ ಕೋರೊನಾ ನಿಯಂತ್ರಣ ನಿಯಮ ಪಾಲಿಸಿ ಕ್ರಿಕೆಟ್ ಮರು ಆರಂಭ ಮಾಡಬಹುದು ಎನ್ನುವ ಮಾತುಗಳಿವೆ.

Exit mobile version