ಕೇಂದ್ರ ಸರ್ಕಾರ ಹ್ಯಾಂಡ್ ಸ್ಯಾನಿಟೈಸರ್ ಅಗತ್ಯ ವಸ್ತು ಎನ್ನುತ್ತದೆ . ಆದರೆ ತೆರಿಗೆ  ಇಲಾಖೆಯು ಅದನ್ನು ‘ಆಲ್ಕೊಹಾಲ್’ ಕೆಟಗರಿಗೆ ಸೇರಿಸಿ ಶೇ.18 ಜಿ.ಎಸ್.ಟಿ ತೆರಿಗೆ ಹೇರಿದ್ದನ್ನು ಸಮರ್ಥಿಸುತ್ತದೆ.

ಪಣಜಿ:  ಗೋವಾದ ಎಎಆರ್ (ಅಥಾರಿಟಿ ಆಫ್ ಅಡ್ವಾನ್ಸಡ್ ರೂಲಿಂಗ್-ಇದು ಜಿಎಸ್ಟಿಗೆ ಸಂಬಂಧಿಸಿದ ವ್ಯಾಜ್ಯ ಬಗೆಹರಿಸುವ ಕೋರ್ಟ್) ಮಂಗಳವಾರ ಅರ್ಜಿಯೊಂದರ ವಿಚಾರಣೆ ಕುರಿತಂತೆ ತೀರ್ಪು ನೀಡಿದ್ದು, ಆಲ್ಕೊಹಾಲ್ ಆಧರಿತ ಹ್ಯಾಂಡ್ ಸ್ಯಾನಿಟೈಸರ್ಗಳು  ‘ಆಲ್ಕೊಹಾಲ್ ಆಧರಿತ ಉತ್ಪನ್ನಗಳು’ ವಿಭಾಗದಡಿ ಸೇರ್ಪಡೆಯಾಗುವುದರಿಂದ ಅವುಗಳ ಮೇಲೆ ಶೇ.18 ಜಿ.ಎಸ್ಟಿ. ಹಾಕುವುದು  ನಿಯಮಾನುಸಾರ ಸರಿಯಾದ ಕ್ರಮವೇ ಆಗಿದೆ ಎಂದು ಸಮರ್ಥಿಸಿಕೊಂಡಿದೆ.

ಹ್ಯಾಂಡ್ ಸ್ಯಾನಿಟೈಸರ್ ತಯಾರಿಸುವ ಗೋವಾದ ಕೈಗಾರಿಕಾ ಘಟಕವೊಂದು ಎಎಆರ್ ಗೆ ಅರ್ಜಿ ಸಲ್ಲಿಸಿ, ಕೇಂದ್ರ ಗ್ರಾಹಕ ಇಲಾಖೆ ಸ್ಯಾನಿಟೈಸರ್ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿದೆ. ಹೀಗಿದ್ದೂ ಅದಕ್ಕೆ ಶೇ.18 ಜಿ.ಎಸ್ಟಿ. ಏಕೆ ಎಂದು ಕೇಳಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಎಎಆರ್,  ‘ಆಲ್ಕೊಹಾಲ್ ಆಧರಿತ ಎಲ್ಲ ಉತ್ಪನ್ನಗಳು ‘3808 ಎಚ್.ಎಸ್.ಎನ್.’ ಅಡಿ ಬರುತ್ತವಾದ್ದರಿಂದ ಶೇ. 18 ಜಿ.ಎಸ್.ಟಿ ತೆರಿಗೆ ಹಾಕಲೇಬೇಕಾಗುತ್ತದೆ ಎಂದು ಹೇಳಿದೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಆರೋಗ್ಯ ತಜ್ಞರು, ಕೋರೊನಾ ನಿಯಂತ್ರಣಕ್ಕೆ  ಆಲ್ಕೊಹಾಲ್ ಆಧರಿತ ಸ್ಯಾನಿಟೈಸರ್ ಬಳಕೆ ಪರಿಣಾಮಕಾರಿ ಎಂದು ಹೇಳುತ್ತಿದ್ದಾರೆ.  ಕೇಂದ್ರದ ಗ್ರಾಹಕ ವ್ಯವಹಾರ ಇಲಾಖೆ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಅಗತ್ಯ ವಸ್ತು ಎಂದು ಪಟ್ಟಿ ಮಾಡಿದರೆ, ಹಣಕಾಸು ಸಚಿವಾಲಯದ ತೆರಿಗೆ ಇಲಾಖೆಯು ಆಲ್ಕೊಹಾಲ್ ಆಧರಿತ ಉತ್ಪನ್ನಗಳ ಪಟ್ಟಿಗೆ ಸೇರಿಸಿ, ಶೇ. 18ರಷ್ಟು ಜಿ.ಎಸ್.ಟಿ ವಿಧಿಸುತ್ತಿದೆ.

Leave a Reply

Your email address will not be published. Required fields are marked *

You May Also Like

ILI ಲಕ್ಷಣ ವಿರುವವರು ಕೂಡಲೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ- ಸಚಿವ ಡಾ.ಕೆ.ಸುಧಾಕರ್

ನಗರದಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಕೊರೋನಾ ಸೊಂಕು ನಿಯಂತ್ರಣಕ್ಕೆ ಪ್ಲಾಸ್ಮಾ ಥೆರಫಿ

ಕೊರೋನಾ ಸೋಂಕಿಗೆ ಯಾವುದೇ ಔಷಧಿ ಕಂಡು ಹಿಡಿಯಲಾಗಿಲ್ಲ. ಆದರೆ ರಾಜ್ಯದಲ್ಲಿ ಈ ಸೋಂಕು ನಿಯಂತ್ರಣಕ್ಕೆ ಪ್ಲಾಸ್ಮಾ ಥೆರಫಿ ಚಿಕಿತ್ಸೆಗೆ ರಾಜ್ಯದ ವೈದ್ಯರು ಮುಂದಾಗಿದ್ದು ಇಬ್ಬರು ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೂ ಪ್ರೇರಣೆಯಾಗಿದ್ದಾರೆ.

ಉಡುಪಿಯಲ್ಲಿ ಆತಂಕ ಹೆಚ್ಚಿಸಿದ ಕೊರೊನಾ!

ಉಡುಪಿ ಜನರಿಗೆ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಬಂದು ಕ್ವಾರಂಟೈನ್ನಿಲ್ಲಿ ಇರುವವರಲ್ಲಿ ಹೆಚ್ಚು ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಇಂದು ಕೂಡ ಬರೋಬ್ಬರಿ 25 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿಂದು 4169 ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 4169 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ…