ಗದಗ: ಕೊರೋನಾಗೆ ಬೆಚ್ಚಿದ ಗದಗ ಜಿಲ್ಲೆಯ ಜನ. ಇಂದು 15 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 35 ಕ್ಕೆ ಏರಿಕೆಯಾಗಿದಡೆ.
ಇಬ್ಬರು ಬಾಲಕರು ಸೇರಿದಂತೆ 15 ಜನರಿಗೆ ಕೊರೋನಾ ಪಾಸಿಟೀವ್ ಪತ್ತೆಯಾಗಿದೆ.
ಈ ಕುರಿತು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್ ಬುಲಿಟನ್ ನಲ್ಲಿ ಮಾಹಿತಿ ನೀಡಿದೆ.
P-1932, P-1933, P-1934, P-1935, P-1936, P-1937, P-1938, P-1794, P-1795 ಇವರು P-913 ಸಂಪರ್ಕದಿಂದ ಸೋಂಕಿತರಾದವರು.
P-1744, P-1745 ಗುಜರಾತ್ ಪ್ರವಾಸದ ಹಿನ್ನೆಲೆ ಸೋಂಕು ತಗುಲಿದೆ.
P-1746, P-1747, P-1748 ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆ ಸೋಂಕು ತಗುಲಿದೆ.
ಪಿ-913 ರಿಂದ ಇಬ್ಬರು ಬಾಲಕರೂ ಸೇರಿದಂತೆ 9 ಜನರಿಗೆ ಸೋಂಕು ತಗುಲಿದೆ.
ಅಹ್ಮದಾಬಾದ್ ನಿಂದ ಬಂದ ಇಬ್ಬರು, ಅಜ್ಮೀರ್ ನಿಂದ ಬಂದ ಒಬ್ಬರು ಹಾಗೂ ಮುಂಬೈನ ಥಾಣೆಯಿಂದ ಬಂದ ಮೂವರಲ್ಲಿ ಕೊರೋನಾ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ 35 ಕ್ಕೇ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಒಬ್ಬರು ಮೃತಪಟ್ಟಿದ್ದು, 5 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಇನ್ನೂ 29 ಜನರಿಗೆ ಜಿಮ್ಸ್ ನ ಕೊರೋನಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮೂಲಕ ಗದಗ ಜಿಲ್ಲೆ ರೆಡ್ ಝೋನ್ ನತ್ತ ಸಾಗಿದಂತಾಗಿದೆ.