ದಾವಣಗೆರೆ: ಕೊರೊನಾ ಪಾಸಿಟಿವ್ ಎಂದು ಚಿಕಿತ್ಸೆಗೆ ದಾಖಲಾದ ರೋಗಿ ಎಂದು ಹೇಳಲಾದ ವ್ಯಕ್ತಿ ಮತ್ತೊಬ್ಬರೊಂದಿಗೆ ಮೊಬೈಲ್ ನಲ್ಲಿ ಮಾತಾಡಿದ್ದು, ಇದರಲ್ಲಿ ತಮಗೆ ಚಿಕಿತ್ಸೆಯನ್ನೇ ನೀಡಿಲ್ಲ ಎಂದು ಮಾತಾಡಿಕೊಂಡಿದ್ದಾರೆ. ಇದರಿಂದ ಕೊರೊನಾ ಹೆಸರಲ್ಲಿ ರಾಜ್ಯದಲ್ಲಿಯೂ ಲೂಟಿ ನಡೆದಿದೆಯಾ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ವ್ಯಕ್ತಿಯೊಂದಿಗೆ ಮತ್ತೊಬ್ಬರು ನಡೆಸಿದ ಮೊಬೈಲ್ ಸಂಭಾಷಣೆ ಇಂಥ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಆಡಿಯೋದಲ್ಲಿ ಉಲ್ಲೇಖವಾಗುವ ಮಾಹಿತಿಗಳ ಸತ್ಯಾಸತ್ಯತೆಯನ್ನು ಉತ್ತರಪ್ರಭ ಪರಿಶೀಲಿಸಿಲ್ಲ.

ಈ ಕುರಿತು ಸರ್ಕಾರ, ಸಚಿವರು, ಮೇಲಧಿಕಾರಿಗಳು ಗಮನ ನೀಡಬೇಕಿದೆ. ಜೊತೆಗೆ, ರಾಜ್ಯ ಸರ್ಕಾರದ ವಿರುದ್ಧ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರು ಕೂಡ ಅವ್ಯವಹಾರದ ಆರೋಪವನ್ನು ಹೊರಿಸಿದ್ದಾರೆ. ಇಂತಹ ಸಮಯದಲ್ಲಿ ಈ ಆಡಿಯೋ ಕುರಿತು ಯಾರು ತನಿಖೆ ಮಾಡುತ್ತಾರೆ? ಸತ್ಯ ಹೇಗೆ ಹೊರಬರುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕೂಡ ಅಸಾಧ್ಯವೇನೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

You May Also Like

ಲಕ್ಷ್ಮೆಶ್ವರದಲ್ಲಿ ಮಣ್ಣು ಮುಕ್ಕುತ್ತಿದ್ದರೂ ಅಧಿಕಾರಿಗಳು ಮೌನ!

ಅನ್ನ ಭಾಗ್ಯ ಯೋಜನೆಯ ಅಕ್ಕಿ, ಮರಳು ಲೂಟಿ ಮಾಡುವುದು ಆಗಾಗ ಸಾಮಾನ್ಯವಾಗಿದೆ. ಆದರೆ, ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಮಣ್ಣು ಕೂಡ ಸದ್ದಿಲ್ಲದೇ ಲೂಟಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಕೊರೊನಾ ಬಲಿ: ಜಾಗತಿಕ ಮಟ್ಟದಲ್ಲಿ ಸಾವಿನ ಸಂಖ್ಯೆ ಎಷ್ಟು ಗೊತ್ತಾ..?

ನ್ಯೂಯಾರ್ಕ್: ಜಾಗತಿಕ ಮಟ್ಟದಲ್ಲಿ ಕೊರೊನಾ ಭಾರೀ ವಿನಾಶಕ್ಕೆ ಕಾರಣವಾಗಿದೆ. ಜಗತ್ತಿನಲ್ಲಿ ಒಟ್ಟು 4.25 ಲಕ್ಷ ಜನ…

ಗುರುಪೂರ್ಣಿಮೆ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

  ಗುರುಗಳ ವೈಶಿಷ್ಟ್ಯಗಳು  ಶಿಷ್ಯನಿಗೆ ಭಗವಂತನ ಅಸ್ತಿತ್ವದ ಮನವರಿಕೆ ಮಾಡಿಕೊಟ್ಟು ಈಶ್ವರಪ್ರಾಪ್ತಿ ಮಾಡಿಸಿಕೊಡುವುದು: ಹೇಗೆ ಅಮಾವಾಸ್ಯೆಯಂದು…

ಕೋರಿಯಾದಿಂದ ಕೋಲಾರಕ್ಕೂ ಬಂದಿವೆ ಸೋಂಕು ಟೆಸ್ಟ್ ಕಿಟ್ ಗಳು

ಕೊರೋನಾ ಸೋಂಕು ತುರ್ತಾಗಿ ಪತ್ತೆ ಹಚ್ಚಲು ಕೋರಿಯಾದಿಂದ ಕೋಲಾರ ಜಿಲ್ಲೆಯ ಆರೋಗ್ಯ ಇಲಾಖೆಗೆ ರ್ಯಾಪಿಡ್ ಆಂಟಿ ಬಾಡಿ ಟೆಸ್ಟಿಂಗ್ ಕಿಟ್ ಗಳು ಬಂದಿವೆ. ಈ ಮೂಲಕ ಇಪ್ಪತ್ತು ನಿಮಿಷದೊಳಗಾಗಿ ಕೊರೋನಾ ಸೇರಿ ಯಾವುದೇ ಸೋಂಕಿದ್ದರೂ ಪತ್ತೆ ಹಚ್ಚಬಹುದಾಗಿದೆ. ಇದು ದೇಶದಲ್ಲಿ ಮೊದಲ ಪ್ರಯತ್ನ ಎಂದು ಹೇಳಲಾಗುತ್ತಿದೆ.