ಕೊರೊನಾ ಹಿನ್ನೆಲೆ : ಆ.31ರವರೆಗೆ ಪರಿಹಾರ ಸಾಮಗ್ರಿಗಳ ಆಮದಿನ ಮೇಲಿನ ತೆರಿಗೆ ವಿನಾಯಿತಿ ವಿಸ್ತರಣೆ

ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ತನ್ನ ಸಭೆಯಲ್ಲಿ ಕೊರೊನಾ ವೈರಸ್ ಪರಿಹಾರ ಸಾಮಗ್ರಿಗಳ ಆಮದಿಗೆ ಆಗಸ್ಟ್ 31ರವರೆಗೆ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಘೋಷಿಸಿದರು. ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ 43ನೇ ಜಿಎಸ್ಟಿ ಕೌನ್ಸಿಲ್ ಸಭೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಿತು. ಕೌನ್ಸಿಲ್ ಸುಮಾರು ಎಂಟು ತಿಂಗಳಲ್ಲಿ ಮೊದಲ ಬಾರಿಗೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಕೇಂದ್ರದಿಂದ ರಾಜ್ಯಕ್ಕೆ ಜಿ.ಎಸ್.ಟಿ. ದ್ರೋಹ: ಸಿದ್ದರಾಮಯ್ಯ

ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ನೀಡಲು ಸಂಗ್ರಹ ಮಾಡಿದ್ದ ಸೆಸ್ ಹಣವನ್ನು @narendramodi ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಸಿಎಜಿ ನೀಡಿರುವ ವರದಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಬಗೆದಿರುವ ಜಿ ಎಸ್ ಟಿ ದ್ರೋಹಕ್ಕೆ ಪುರಾವೆಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಹ್ಯಾಂಡ್ ಸ್ಯಾನಿಟೈಸರ್ ಅಗತ್ಯ ವಸ್ತುವಂತೆ!: ಅದರ ಮೇಲೆ ಶೇ.18 ಜಿ.ಎಸ್.ಟಿ ಏಕಂತೆ?

ಕೇಂದ್ರ ಸರ್ಕಾರ ಹ್ಯಾಂಡ್ ಸ್ಯಾನಿಟೈಸರ್ ಅಗತ್ಯ ವಸ್ತು ಎನ್ನುತ್ತದೆ . ಆದರೆ ತೆರಿಗೆ ಇಲಾಖೆಯು ಅದನ್ನು ‘ಆಲ್ಕೊಹಾಲ್’ ಕೆಟಗರಿಗೆ ಸೇರಿಸಿ ಶೇ.18 ಜಿ.ಎಸ್.ಟಿ ತೆರಿಗೆ ಹೇರಿದ್ದನ್ನು ಸಮರ್ಥಿಸುತ್ತದೆ.