ಬೆಂಗಳೂರು: ಲಾಕ್ ಡೌನ್ ನಿಂದಾಗಿ ಬಿಡುವು ಪಡೆದಿದ್ದ ಸೆನ್ಸಾರ್ ಮಂಡಳಿ ಸದ್ಯ ಮತ್ತೆ ಕೆಲಸ ಆರಂಭಿಸಿದೆ. ಅಲ್ಲದೇ, ಚಿತ್ರರಂಗ ಕೂಡ ತನ್ನ ಕೆಲಸ ಪ್ರಾರಂಭಿಸಿದೆ. ಕೊರೊನಾ ಹಾವಳಿಯ ಮಧ್ಯೆಯೇ srikrishna@gmail.com ಚಿತ್ರಕ್ಕೆ ಮಹೂರ್ತ ಫಿಕ್ಸ್ ಮಾಡಲಾಗಿದೆ.

ಸಂದೇಶ್ ನಾಗರಾಜ್ ಅವರು ನಿರ್ಮಿಸಿರುವ ಡಾರ್ಲಿಂಗ್ ಕೃಷ್ಣ ಅಭಿನಯದ ಚಿತ್ರ ಜೂ. 18ರಂದು ಅರ್ಜುನ್ ಜನ್ಯಾ ಅವರ ಸ್ಟುಡಿಯೋದಲ್ಲಿ ಸೆಟ್ಟೇರಲಿದೆ. ಈ ಚಿತ್ರಕ್ಕೆ ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಮಹೂರ್ತ ಕಾರ್ಯಕ್ರಮ ಸರಳವಾಗಿ ನೆರವೇರುತ್ತದೆ ಎಂದು ಪ್ರೊಡಕ್ಷನ್ಸ್ ಹೌಸ್ ಘೋಷಿಸಿದೆ.

ಪ್ರಮುಖ ನಟ, ನಿರ್ದೇಶಕ ಮತ್ತು ತಾಂತ್ರಿಕ ಸಿಬ್ಬಂದಿ ಉಪಸ್ಥಿತಿಯಲ್ಲಿ ಚಿತ್ರ ಪ್ರಾರಂಭಿಸಲಾಗುವುದು. ಅರ್ಜುನ್ ಜನ್ಯಾ ಅವರೊಂದಿಗೆ ನಿರ್ದೇಶಕರು ಹಾಡಿನ ಧ್ವನಿ ಮುದ್ರಣ ಪ್ರಾರಂಭಿಸಲಿದ್ದಾರೆ. ಅಲ್ಲದೇ, ಈ ಸಂದರ್ಭದಲ್ಲಿ ಉಳಿದ ಪಾತ್ರ ವರ್ಗಗಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ.

ಆಕ್ಷನ್-ಲವ್ ಎಂಟರ್‌ಟೈನರ್‌ನಲ್ಲಿ ರಾಷ್ಟ್ರ ಪ್ರಶಸ್ತಿ ಜೇತ ದತ್ತಣ್ಣ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. srikrishna@gmail.com ಚಿತ್ರಕ್ಕೆ ಸತ್ಯ ಹೆಗ್ಡೆ ಕ್ಯಾಮೆರಾ ಕೆಲಸ ಮಾಡಿದ್ದಾರೆ.

Leave a Reply

Your email address will not be published.

You May Also Like

ಗದಗ, ನರಗುಂದ, ರೋಣ, ಮುಂಡರಗಿ ತಾಲೂಕಿನಲ್ಲಿಂದು ಸೋಂಕಿರು ಪತ್ತೆ

ಗದಗ: ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ಮದೆನಗುಡಿ ಗ್ರಾಮದ ನಿವಾಸಿ 35 ವರ್ಷದ ಪುರುಷ(ಪಿ-23121)…

ಪುರಸಭೆ ಸದಸ್ಯನಿಗೆ ಕೊರೊನಾ ಪಾಸಿಟಿವ್

ಪಟ್ಟಣದ ಪುರಸಭೆ ಸದಸ್ಯರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಿಂದ ಮಾಸಂಗಿಪುರದ ನಾಗರಿಕರಲ್ಲಿ ಆತಂಕ ಮನೆಮಾಡಿದೆ.

ಚೀನಾ – ಭಾರತೀಯ ಸೈನಿಕರ ನಡುವೆ ಸಂಘರ್ಷ – 76 ಸೈನಿಕರಿಗೆ ಗಾಯ!

ಹೊಸದೆಹಲಿ: ಲಡಾಖ್‌ನ ಗಲ್ವಾನ್‌ ಕಣಿವೆ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಕಾಳಗದಲ್ಲಿ 76…

ಕೊರೊನಾ ಸಂಕಷ್ಟ: ತುರ್ತು ಸಭೆ ಕರೆದ ಸಿಎಂ ಯಡಿಯೂರಪ್ಪ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ತುರ್ತು ಸಭೆ…