ಬಾಗಲಕೋಟೆ: ನಗರದ ಉರಗ ಪ್ರೇಮಿ ಹಾಗೂ ಹಾವು ರಕ್ಷಕ ಡ್ಯಾನಿಯಲ್ ನ್ಯೂಟನ್ ನಿಗೆ ಹಾವು ಕಚ್ಚಿದ್ದು ನಗರದ ಖಾಸಗಿ ಆಸ್ಪತ್ರೆ ಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡ್ಯಾನಿಯಲ್ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವೆ, ಹೋರಾಟ, ಪರಿಸರ ಕಾಳಜಿಯಂತಹ ಕಾರ್ಯಕ್ರಮ ಮೂಲಕ ಗಮನ ಸೆಳೆದಿದ್ದಾರೆ. ನ್ಯೂಟನ್ ಅವರು 3000 ಸಾವಿರ ಗಿಂತ ಅಧಿಕ ಅತ್ಯಂತ ವಿಷಕಾರಿ ಹಾವುಗಳನ್ನು ಅಪಾಯಕಾರಿ ಸ್ಥಳಗಳಲ್ಲಿಯೂ ಹಿಡಿದು ಅವುಗಳನ್ನು ರಕ್ಷಿಸಿದ್ದಾರೆ.

ನಗರದಲ್ಲಿ ಯಾರೇ ಅವರಿಗೆ ಪೋನು ಮಾಡಿದರೆ ಸಾಕು ತಕ್ಷಣ ಸ್ಥಳಕ್ಕೆ ಹೋಗಿ ಹಾವು ಹಿಡಿದು ಉಚಿತ ಸೇವೆ ಮುಖಾಂತರ ಎಲ್ಲರಿಗೂ ಪರಿಚಿತವಾಗಿದ್ದರು, ಡ್ಯಾನಿಯಲ್ ಯವರಿಗೆ ಹಾವು ಕಚ್ಚಿದ ಸುದ್ದಿಕೇಳಿ ಜನರಿಗೆ ಗಾಬರಿ ಯಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಅವರಿಗೆ ಬೇಗ ಗುಣಮುಖವಾಗಲಿ, ಚೇತರಿಕೆ ಕಾಣಲಿ ಎಂಬ ಹಾರೈಕೆಗಳು ವೈರಲ್ ಆಗಿವೆ.

Leave a Reply

Your email address will not be published.

You May Also Like

ಅರಣ್ಯ ಒತ್ತುವರಿ ತೆರವಿನಲ್ಲಿ ಮಾನವೀಯತೆ ಅನುಸರಿಸಲು:ಸಚಿವ ಸಿ.ಸಿ.ಪಾಟೀಲರ ತಾಕೀತು

ರೂ. 5 ಲಕ್ಷ ಪರಿಹಾರ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕೇಲೂರು ಗ್ರಾಮದಲ್ಲಿ ನಿನ್ನೆ ಅರಣ್ಯ…

ಮಸ್ಕಿ: ಚನ್ನಬಸವ ಕುಟುಂಬಕ್ಕೆ ಸಹಾಯಧನ ವಿತರಣೆ

ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ಚನ್ನಬಸವ ಮಡಿವಾಳ ಅವರ ಮನೆಗೆ ತುಂಗಾಭದ್ರ ಕಾಡಾ ಅಧ್ಯಕ್ಷ ಆರ್ ಬಸನಗೌಡ ತುರವಿಹಾಳ ಅವರ ಭೇಟಿ ನೀಡಿ ಅವರ ಕುಟುಂಬಕ್ಕೆ 50 ಸಾವಿರ ಸಹಾಯಧನ ನೀಡಿದರು. ಬಳಿಕ‌ ಆರ್ ಬಸನಗೌಡ ತುರವಿಹಾಳ ಅವರು ಮಾತನಾಡಿ, ಚನ್ನಬಸವನನ್ನು ಹುಡಕಲು ತಾಲೂಕ ಆಡಳಿತ ಸಾಕಷ್ಟು ಪ್ರಯತ್ನ ಪಟ್ಟಿದೆ. ಆದರೂ ಅವರ ದೇಹ ಸಿಗಲಿಲ್ಲ. ಈ ಕುರಿತು ರಾಜ್ಯ ಸರಕಾರ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡಲು ಒತ್ತಾಯ ಮಾಡುತ್ತೇನೆ ಎಂದರು.

ತನ್ನ ದಾಖಲೆಯನ್ನೇ ಮುರಿದು ಸಾಗುತ್ತಿರುವ ಮಹಾಮಾರಿ!

ನವದೆಹಲಿ: ದೇಶದಲ್ಲಿ ಶರವೇಗದಲ್ಲಿ ಹಬ್ಬುತ್ತಿರುವ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ದಾಖಲೆಯನ್ನೇ ಮುರಿದು ಆತಂಕ ಮೂಡಿಸುತ್ತಿದೆ.…