ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ಕರ್ನಾಟಕ ಚಾಪ್ಟರ್ ಮಾಜಿ ಅಧ್ಯಕ್ಷ ಡಾ. ರವೀಂದ್ರ ಅವರು ಶುಕ್ರವಾರ ಈ ವಿಡಿಯೋ ಬಿಡುಗಡೆ ಮಾಡಿದ್ದು, ಕಳೆದ ಸೋಮವಾರ ಪರೀಕ್ಷೆಗೆಂದು ಗಂಟಲು ದ್ರವ ಕಳಿಸಿದ್ದರು. ನಾಲ್ಕು ದಿನದ ನಂತರವೂ ಫಲಿತಾಂಶ ಬಾರದ್ದರ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, ವೈದ್ಯಲೋಕದ ನಿಕಟ ಸಂಪರ್ಕವಿರುವ ನಾನೇ ಹಲವು ಸಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದರೂ ಫಲಿತಾಂಶ ಲಭ್ಯವಾಗಲಿಲ್ಲ. ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ್ದಾರೆ.

ಆದಷ್ಟು ಬೇಗ ಟೆಸ್ಟ ಫಲಿತಾಂಶ ನೀಡದೇ ಇದ್ದರೆ, ಆ ವ್ಯಕ್ತಿ ಆ ಅವಧಿಯಲ್ಲಿ ನೂರಾರು ಜನರನ್ನು ಸಂಪರ್ಕಿಸಿದ ಅಂತ ಇಟ್ಟುಕೊಳ್ಳಿ. ನಂತರ ಆತನ ವರದಿ ಪಾಸಿಟಿವ್ ಬಂದರೆ ಏನು ಗತಿ ಎಂದು ಸರ್ಕಾರಕ್ಕೆ ಪ್ರಶ್ನಿಸಿರುವ ಡಾ. ರವೀಂದ್ರ, ಸರ್ಕಾರ ಕೂಡಲೇ ತುರ್ತಾಗಿ ಫಲಿತಾಂಶ ನೀಡುವ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.

ಖಾಸಗಿ ಆಸ್ಪತ್ರೆ, ಲ್ಯಾಬ್ಗಳಿಗೆ ಟೆಸ್ಟ ಮಾಡಲು ಅವಕಾಶ ನೀಡಬೇಕು, ಆದರೆ ಸರ್ಕಾರವೇ ಜನರ ಟೆಸ್ಟಿಂಗ್ ಫೀಸ್ ತುಂಬಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೋವಿಡ್ ಕರ್ತವ್ಯ ನಿರತ ವೈದ್ಯರೊಬ್ಬರು ಮೃತಪಟ್ಟಾಗ ಅವರ ಕುಟುಂಬಕ್ಕೆ  ಪರಿಹಾರ ಕೊಡಲು ಸಾಧ್ಯವಿಲ್ಲ ಎಂದ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಪಂಕಜಕುಮಾರ್ ಪಾಂಡೆಯವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ ರವೀಂದ್ರ.

ಪಿಪಿಇ ಕಿಟ್ ಖರೀದಿಯಲ್ಲೂ ಹಣ ಮಾಡುವ ರಾಜಕಾರಣಿಗಳು, ಅಧಿಕಾರಿಗಳು ಮನುಷ್ಯರೇ ಅಲ್ಲ, ಕಚಡಾ ತಿಂದು ಬದುಕುವವರು ಎಂದು ಹರಿ ಹಾಯ್ದಿದ್ದಾರೆ.

ಶಿಕ್ಷಣ, ಆರೋಗ್ಯದ ಮೇಲೆ ಕಡಿಮೆ ತೆರಿಗೆ ವಿಧಿಸುವ ಬದಲು ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕೇಂದ್ರ ಸರ್ಕಾರವನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋ ನೋಡಿ, ಕೇಳಿ.

ಕೊರೊನಾ ಟೆಸ್ಟ್ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಡಾ.ರವೀಂದ್ರ ಅವರ ವಿಡಿಯೋ
Leave a Reply

Your email address will not be published. Required fields are marked *

You May Also Like

ಶತಾಯಿಷಿ ಸ್ವಾತಂತ್ರ್ಯ ಹೋರಾಟಗಾರ್ತಿ ಶಾಂತಾಬಾಯಿಗೆ ಸನ್ಮಾನ ಮಾಡಿದ ಅನಿಲ ಮೆಣಸಿನಕಾಯಿ

ಗದಗ: ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟ ಮಹಾತ್ಮ ಗಾಂಧೀಜಿಯವರಿಗೆ ತಮ್ಮ ಕೈಯಾರ ಅಡುಗೆ ಮಾಡಿದ ಬಡಿಸಿದ ಮಹಾತಾಯಿ ಸದ್ಯ…

ಅದೇ ಮುಖದೊಂದಿಗೆ ಪ್ರೇಕ್ಷಕರಿಗೆ ಲಗ್ಗೆ ಇಡಲು ಸಜ್ಜಾಗಿದ್ದಾರೆ ಸಂದೇಶ

ವರನಟ ಡಾ. ರಾಜ್ ಕುಮಾರ್ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ ಚಲನಚಿತ್ರ ಇಂದಿಗೂ ಜನಮಾನಸದಲ್ಲಿ ಹಾಗೆಯೇ ಉಳಿದಿದೆ. ಈ ವಿಚಾರ ಯಾಕೆ ಅಂತೀರಾ. ಈಗ ”ಅದೇ ಮುಖ” ಎಂಬ ಸಿನಿಮಾದ ಟೈಟಲ್. ಗಾಂಧಿನಗರದಲ್ಲಿ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ಗರಿಗೆದರುವಂತೆ ಮಾಡಿದೆ.

ಮದ್ಯಕ್ಕೆ ಕೊಡುವ ಪ್ರೋತ್ಸಾಹ ವಿದ್ಯೆಗೆ ನೀಡಿ- ಗುರುಶಾಂತ ಸ್ವಾಮೀಜಿ

ವರದಿ: ಗುಲಾಬಚಂದ ಜಾಧವ ಆಲಮಟ್ಟಿ : ಬಹಳಷ್ಟು ಯುವಕರ ಮನಸ್ಥಿತಿಯಿಂದು ಕೆಟ್ಟು ಹೋಗುತ್ತಲ್ಲಿದೆ. ದುಷ್ಚಟಗಳ ದಾಸರಾಗಿ…

ಗ್ಯಾಂಗ್ ರೇಪ್ ಪ್ರಕರಣದ ಉಳಿದ ಆರೋಪಿಗಳು ಕೇರಳದಲ್ಲಿದ್ದಾರೆಂಬ ಮಾಹಿತಿಯಿದೆ- ಬೊಮ್ಮಾಯಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ರೇಪ್ ವಿಡಿಯೋ ವೈರಲ್ ಆಗಿತ್ತು, ಕೇಂದ್ರ ಸಚಿವರು ಈ ಬಗ್ಗೆ ಟ್ವೀಟ್ ಮಾಡಿದ್ದರು, ನಮ್ಮ ಪೊಲೀಸರು ಅದನ್ನು ಪತ್ತೆ ಹಚ್ಚಿ ಗ್ಯಾಂಗ್ ನ್ನು ಹಿಡಿದಿದ್ದಾರೆ.