ಮಂಗಳೂರು: ಹಡಗುಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ ಕೊರೋನಾ ವಾರಿಯರ್ಸ್ ಗೆ ವಿಶಿಷ್ಟ ರೀತಿಯಿಂದ ಅಭಿನಂದನೆ ಸಲ್ಲಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕೋವಿಡ್‌–19 ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಭಾರತೀಯ ಕರಾವಳಿ ಕಾವಲು ಪಡೆ ಐಸಿಜಿಯ ವರಹಾ ಒಪಿವಿ ಮತ್ತು ಅಮರ್ತ್ಯಾ ಎಫ್‌ಪಿವಿ ಹಡಗನ್ನು ದೀಪಗಳಿಂದ ಬೆಳಗಿಸುವ ಮೂಲಕ ಇಂಡಿಯಾ ಥ್ಯಾಂಕ್ಸ್ ಕೋವಿಡ್–19 ವಾರಿಯರ್ಸ್ ಎಂದು ಗೌರವ ಸೂಚಿಸಲಾಯಿತು.

ದೀಪಾಲಂಕಾರದ ಮೂಲಕ ಕೊರೋನಾ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸಿದ ದೃಷ್ಯ

ಈ ಹಡಗುಗಳು ಪಣಂಬೂರಿನ ತೀರಕ್ಕೆ ಸಮೀಪ ಬಂದ ಕಾರಣ ಅಂಚಿನಲ್ಲಿ ಹಸಿರು ಬೆಳಕು ಹಾಗೂ ಬೆಳಕಿನ ಚಿತ್ರಣಗಳು ಸುಂದರವಾಗಿ ಗೋಚರಿಸಿದವು.
ಕೋವಿಡ್–19 ವಾರಿಯರ್ಸ್ ಶ್ರಮವನ್ನು ಅಭಿನಂದಿಸಲು ಕರಾವಳಿ ತೀರದ ಸುಮಾರು 25 ಕಡೆಗಳಲ್ಲಿ ಕರಾವಳಿ ಕಾವಲು ಪಡೆಯು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದೇಶದಾದ್ಯಂತ ಒಟ್ಟು ಸುಮಾರು 46 ಹಡಗುಗಳು, ಹೆಲಿಕಾಪ್ಟರ್‌ಗಳು ಪಾಲ್ಗೊಂಡಿದ್ದವು.

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ಎಇಇ ಮನೆ ಮೇಲೆ ಎಸಿಬಿ ದಾಳಿ

ಗದಗ: ಇಲ್ಲಿನ ರಾಜೀವ್ ಗಾಂಧಿ ನಗರದಲ್ಲಿರುವ ಬಾಗಲಕೋಟೆ ಜಿಲ್ಲೆಯ ನೀರು‌ ಸರಬರಾಜು ಮಂಡಳಿಯ ಎಇಇ ಹನುಮಂತ…

ಕೊಪ್ಪಳ ಜಿಲ್ಲೆಯಲ್ಲಿಂದು 36 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಮತ್ತೆ 36 ಕೊರೊನಾ ಪಾಸಿಟಿವ್ ಪ್ರಕರಣ ದೃಡಪಟ್ಟಿದ್ದು ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.

ಗದಗ ಜಿಲ್ಲೆಯ 15 ಕಂಟೇನ್ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 15 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.

ಅಭಿಮಾನಕ್ಕಾಗಿ ನನ್ನ ಕಣ್ಣಾಲೆಗಳು ತುಂಬಿಕೊಂಡ ಕ್ಷಣ ಅದು..

ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಬಗೆಗೆ ನೀವೆಲ್ಲ ತೋರಿಸುತ್ತಿರುವ ಅಕ್ಕರೆ, ಅಭಿಮಾನ ನಮ್ಮ ಉತ್ಸಾಹ ಹೆಚ್ಚಿಸಿದೆ. ಇನ್ನು ಕೆಲ ದಿನಗಳಲ್ಲಿಯೇ ಪತ್ರಿಕೆಯನ್ನು ಆರಂಭಿಸುವ ನಮ್ಮ ಕನಸಿಗೆ ನಿಮ್ಮ ಅಭಿಮಾನ ಬಣ್ಣ ತುಂಬಿದೆ