ಗದಗ: ಜಿಲ್ಲೆಯಲ್ಲಿ ಕೋವಿಡ್-19 ಪರಿಣಾಮಕಾರಿ ಸೋಂಕು ನಿಯಂತ್ರಣಕ್ಕೆ ಹಾಗೂ ಸಮನ್ವಯ ಕಾರ್ಯನಿರ್ವಹಣೆಗೆ ರಾಜ್ಯ ಸರ್ಕಾರ ನಿರ್ದೇಶಿಸಿದ ಜವಾಬ್ದಾರಿಗಳನ್ನು ಕಾರ್ಯಾನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ 14 ಕಣ್ಗಾವಲು ಸಾರ್ವಜನಿಕ ಆರೋಗ್ಯ ಸುರಕ್ಷತಾ ತಂಡಗಳ ರಚಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

ಈ 14 ತಂಡಗಳ ಕಾರ್ಯ ನಾಯಕರು ಆದೇಶದ ಅನುಬಂಧದಲ್ಲಿ ಸೂಚಿತ ತಮ್ಮ ತಂಡದ ಸದಸ್ಯರೊಂದಿಗೆ ಸಮನ್ವಯತೆ ಸಾಧಿಸಿ, ಸರ್ಕಾರವು ತಂಡಕ್ಕೆ ನಿಗದಿಪಡಿಸಿದ ನಿರ್ದಿಷ್ಟ ಕಾರ್ಯಗಳನ್ನು ಸಂಘಟಿತ ಹಾಗೂ ಸಮನ್ವಯ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು. ಇದೇ ರೀತಿಯಲ್ಲಿ ತಹಶೀಲ್ದಾರರೊಂದಿಗೆ ಸಮನ್ವಯ ಸಾಧಿಸಿ ತಾಲ್ಲೂಕು ಮಟ್ಟದ ತಮ್ಮ ಕಾರ್ಯತಂಡವನ್ನು ರಚಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ತಂಡಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯತಂಡಗಳ ನಾಯಕರು ತಮಗೆ ನಿಯೋಜಿತ ಕಾರ್ಯದ ಕುರಿತಂತೆ ನಿಗದಿತವಾಗಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಆದೇಶದಲ್ಲಿ ತಿಳಿಸಲಾಗಿದೆ.

ತಮ್ಮ ತಂಡದ ಕಾರ್ಯಗಳ ಹೊರತಾಗಿ ಹೆಚ್ಚುವರಿಯಾಗಿ ನಿಗದಿಪಡಿಸಿರುವ ಕಾರ್ಯಗಳನ್ನು ಸಹ ನಿರ್ವಹಿಸಬೇಕು. ಈ ಸೂಚನೆಗಳನ್ನು ಪಾಲಿಸದೇ ಯಾವುದೇ ಕ್ರಮಗಳನ್ನು ಅನುಷ್ಠಾನಗೊಳಿಸದಿದ್ದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ದಿ ಕರ್ನಾಟಕ ಎಪಿಡೆಮಿಕ್ ಡಿಸೀಸ್, ಕೋವಿಡ್-19 ರೆಗ್ಯೂಲೇಶನ್ 2020 ರ ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆದೇಶದ ಅನುಬಂಧದಲ್ಲಿ ತಿಳಿಸಿದಂತೆ ಜಿಲ್ಲಾ ಮಟ್ಟದ ತಂಡದ ಹೆಸರು, ಕಾರ್ಯನಾಯಕರ ಪದನಾಮ, ಹಾಗೂ ನಿರ್ವಹಿಸಬೇಕಾದ ಕಾರ್ಯಗಳ ವಿವರ ಇಂತಿದೆ.

ತಂಡ 1: ಕೋವಿಡ್-19 ಸೋಂಕಿತ ವ್ಯಕ್ತಿಗಳನ್ನು ಸಿಸಿಸಿ/ಡಿಸಿಎಚ್‌ಸಿ /ಡಿಸಿಎಚ್‌ಗಳಿಗೆ ಸ್ಥಳಾಂತರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಗದಗ ಮೊ:94498-43052, ರೋಗಿಗಳನ್ನು ಸ್ಥಳಾಂತರಿಸಲು ಸಾಕಷ್ಟು ಸಂಖ್ಯೆ ಅಂಬ್ಯುಲೆನ್ಸ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವುದು. ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾದ ರೋಗಿಯ ಸರಿಯಾದ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಖಚಿತಪಡಿಸಿ ಕೊಳ್ಳುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳ ಅನ್ವಯ 3 ಗಂಟೆಗಳೊಳಗಾಗಿ ರೋಗಿಗಳನ್ನು ಚಿಕಿತ್ಸಾ ನಿರ್ಧರಣಾ ಕೇಂದ್ರ ಗಳಿಗೆ ಸ್ಥಳಾಂತರಿಸಿ ತದನಂತರ ಸಿಸಿಸಿ/ ಡಿಸಿಎಚ್‌ಸಿ/ಡಿಸಿಎಚ್ ಗಳಿಗೆ ಸ್ಥಳಾಂತರಿಸುವುದು. ಕಂಟೇನ್‌ಮೆಂಟ್ ವಲಯಗಳನ್ನು ಗುರುತಿಸಲು ಸರಿಯಾದ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಪೊಲೀಸ್ ಮತ್ತು ಕಣ್ಗಾವಲು ಅಧಿಕಾರಿಗಳಿಗೆ ತಿಳಿಸುವುದು. ಸಂಪರ್ಕ ಪತ್ತೆ ತಂಡಕ್ಕೆ ಸಂಪರ್ಕ ಪತ್ತೆ ಕಾರ್ಯವನ್ನು ನಿರ್ವಹಿಸುವುದಕ್ಕೆ ಅನುವಾಗು ವಂತೆ ರೋಗಿಯ ವಿವರಗಳನ್ನು ತಿಳಿಸುವುದು. ಜಿಲ್ಲೆಯಲ್ಲಿರುವ ಅಂಬ್ಯುಲೆನ್ಸ್ಗಳು ಸುಸ್ಥಿತಿಯಲ್ಲಿ ರುವಂತೆ ನೋಡಿಕೊಳ್ಳುವುದು ವಾಹನಗಳ ಚಾಲಕರಿಗೆ ವಿಶೇಷವಾದ ತರಬೇತಿಯನ್ನು ನೀಡುವುದು. ಎಲ್ಲಾ ತಾಲ್ಲೂಕಾ ಆರೋಗ್ಯಾಧಿಕಾರಿಗಳು ಕೂಡಲೇ ಪಾಸಿಟಿವ್ ಬಂದ ಪ್ರಕರಣದ ರೋಗಿಯ ವಿವರಗಳನ್ನು ಸಂಪರ್ಕ ಪತ್ತೆ ತಂಡಕ್ಕೆ ನೀಡುವುದು.

ತಂಡ 2: ಕೋವಿಡ್-19 ಆರೈಕೆ ಕೇಂದ್ರ ಗಳು (ಸಿಸಿಸಿ): ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಗದಗ 82772-33377 , ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ, ಗದಗ ಮೊ:94808-65003, ಅತ್ಯಗತ್ಯತೆಯನ್ನು ಸಿದ್ಧಪಡಿಸುವಿಕೆಗೆ (ಹಾಸಿಗೆಗಳು, ಉಪಕರಣಗಳು, ವೈದ್ಯಕೀಯ, ಅರೆವೈದ್ಯಕೀಯ ಮತ್ತು ಪೂರಕ ಸಿಬ್ಬಂದಿ, ವಾಹನ ಸೌಲಭ್ಯ, ಆಹಾರ, ಸ್ಯಾನಿಟೈ-ಸೇಷನ್) ಮುಂಬರುವ ಪರಿಸ್ಥಿತಿಗೆ ಅನುಗುಣವಾಗಿ ಸಾಮರ್ಥ್ಯವನ್ನು ಸಿದ್ಧಪಡಿಸುವುದು. ಮಾನವ ಸಂಪನ್ಮೂಲಗಳನ್ನು ಗುರುತಿಸುವುದು ಮತ್ತು ತರಬೇತುಗೊಳಿಸುವುದು. ಅವಶ್ಯಕ ಕೇಂದ್ರಗಳನ್ನು ಗುರುತಿಸುವಿಕೆ (ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳು, ಸ್ಟೇಡಿಯಂಗಳು ಇತ್ಯಾದಿ) ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಗುರುತಿಸು ವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.

ತಂಡ 3: ಸಮರ್ಪಿತ ಕೋವಿಡ್-19 ಆರೋಗ್ಯ ಕೇಂದ್ರ ಮತ್ತು ಕೋವಿಡ್-19 ಆಸ್ಪತ್ರೆಗಳು (ಡಿಸಿಎಚ್‌ಸಿ/ಡಿಸಿಎಚ್): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಗದಗ ಮೊ:94498-43052, ನಿರೀಕ್ಷಿತ ಮಟ್ಟದ ಆಧಾರದ ಮೇಲೆ ಸಾಮರ್ಥ್ಯವನ್ನು ಹೆಚ್ಚಿಸುವುದು. ಕಡ್ಡಾಯವಾಗಿ ಆಸ್ಪತ್ರೆ  ನಿರ್ವಹಣೆ ಮತ್ತು ಮಾನವ ಸಂಪನ್ಮೂಲ ತಂಡವನ್ನು ನಿಯೋಜಿಸುವುದು. ಮಾನವ ಸಂಪನ್ಮೂಲಗಳನ್ನು ಗುರುತಿಸುವುದು ಮತ್ತು ತರಬೇತಿ ನೀಡುವುದು. ನೂತನ ಸೌಲಭ್ಯಗಳನ್ನು ಗುರುತಿಸುವುದು.

ತಂಡ 4: ಸಂಪರ್ಕ ಪತ್ತೆ ಹಚ್ಚುವಿಕೆ : ನಗರ ಪ್ರದೇಶಕ್ಕೆ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ  82772-33377, ಗ್ರಾಮೀಣ ಪ್ರದೇಶಕ್ಕೆ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ, ಮೊ:94808-65003, ಕೋವಿಡ-19ರ ಸೋಂಕು ಪಾಸಿಟಿವ್ ವ್ಯಕ್ತಿಯ ಎಲ್ಲಾ ಸಂಪರ್ಕಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವುದು. 24 ಗಂಟೆಗಳ ಒಳಗಾಗಿ ಎಲ್ಲಾ ಅತಿ ಹೆಚ್ಚಿನ ಅಪಾಯದ ಸಂಪರ್ಕ ಗಳನ್ನು ಗುರುತಿಸುವುದು. ಕರೋನಾ ಸೋಂಕಿತ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಖಚಿತ ಪಡಿಸಿಕೊಳ್ಳುವುದು. ಸಂಪರ್ಕ ಪತ್ತೆಗೆ ಸಂಬAಧಿಸಿದ ಮಾಹಿತಿಯನ್ನು ಸಂಬAಧಪಟ್ಟ ಆಪ್ /ಪೋರ್ಟಲ್‌ಗಳಲ್ಲಿ ಸಕಾಲ ದಲ್ಲಿ ಅಪ್‌ಡೇಟ್ ಮಾಡುವುದು. ಪತ್ತೆ ಹಚ್ಚುವುದಕ್ಕಾಗಿ ಮಾಹಿತಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ. ರಾಜ್ಯ ಸಂಪರ್ಕ ಪತ್ತೆ ತಂಡಗಳೊಂದಿಗೆ ಸಮನ್ವಯ ಸಾಧಿಸುವುದು.

ತಂಡ 5: ಪರೀಕ್ಷೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು,  ಮೊ:94498-43052, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳ ಪ್ರಕಾರ ತೀವ್ರವಾದ ಪರೀಕ್ಷೆ ಮಾಡುವುದು. ಪ್ರಾಥಮಿಕ ಸಂಪರ್ಕಗಳು, ವೈದ್ಯರು ನಿರ್ಧರಿಸಿದ ಎಲ್ಲಾ ಶಂಕಿತ ಪ್ರಕರಣಗಳು, ಎಲ್ಲಾ ಎಸ್‌ಎಆರ್‌ಐ ಪ್ರಕರಣಗಳು, ಎಲ್ಲಾ ಐಎಲ್‌ಐ ಪ್ರಕರಣಗಳು, ಹೆಚ್ಚು ಸಾರ್ವಜನಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳು (ಪೊಲೀಸ್ ವಾಚಮನ್, ತರಕಾರಿ ವ್ಯಾಪಾರಿಗಳು, ಹೋಟೆಲ್ ಕ್ಯಾಶಿಯರ್‌ಗಳು ಇತ್ಯಾದಿ), ಶೀಘ್ರ ಫಲಿತಾಂಶ ಬರುವಂತೆ ನೋಡಿಕೊಳ್ಳಲು ಪ್ರಯೋಗಾಲಯಗಳ ಪೂರ್ಣ ಪ್ರಮಾಣ ಬಳಕೆ. ತಂಡದ ಸದಸ್ಯರಾಗಿರುವ ಜಂಟಿ ಕೃಷಿ ನಿರ್ದೇಶಕರು, ಮೊ:8277931400 ಇವರು ಶೀಘ್ರ ಫಲಿತಾಂಶ ಬರುವಂತೆ ನೋಡಿಕೊಳ್ಳಲು ಸಮನ್ವಯ ಸಾಧಿಸುವುದು.

ತಂಡ 6: ಕಂಟೇನ್‌ಮೆಂಟ್ ವಲಯಗಳು: ನಗರ ಪ್ರದೇಶಕ್ಕೆ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ  82772-33377, ಗ್ರಾಮೀಣ ಪ್ರದೇಶಕ್ಕೆ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ, ಮೊ:94808-65003, ಕಟ್ಟುನಿಟ್ಟಿನ ಪರಿಧಿಯ ನಿಯಂತ್ರಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳ ಪ್ರಕಾರ ಕಂಟೇನ್‌ಮೆಂಟ್ ವಲಯಗಳು ಮತ್ತು ಬಫರ್ ವಲಯಗಳಲ್ಲಿ ತೀವ್ರತರವಾದ ನಿಗಾವಣಿ. ಕಂಟೇನ್‌ಮೆಂಟ್ ವಲಯಗಳಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆಯನ್ನು ಕೈಗೊಳ್ಳುವುದು. ಅವಶ್ಯಕ ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು. ಕಂಟೇನ್‌ಮೆಂಟ್ ವಲಯಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯುವುದು. ಕಂಟೇನ್‌ಮೆAಟ್ ವಲಯಗಳಲ್ಲಿ ಅಗತ್ಯವಿರುವ ಕ್ರಮ ಗಳನ್ನು ಕೈಗೊಳ್ಳುವುದು.


ತಂಡ 7: ಕ್ವಾರಂಟೈನ್ ನಿಗಾವಣೆ (ಹೋಂ ಕ್ವಾರಂಟೈನ್-ಎಚ್‌ಕ್ಯೂ) ಮತ್ತು ಸಿಕ್ಯೂಎಎಸ್ ಹಾಗೂ ಆರೋಗ್ಯ ಸೇತು (ಎಎಸ್): ನಗರ ಪ್ರದೇಶಕ್ಕೆ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ  82772-33377, ಗ್ರಾಮೀಣ ಪ್ರದೇಶಕ್ಕೆ ಉಪ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ, ಮೊ:94808-65003, ಸಮುದಾಯ, ಬೂತ್ ಮಟ್ಟದ ತಂಡಗಳು, ವಾರ್ಡ ಮಟ್ಟದ ಮತ್ತು ಗ್ರಾಮ ಪಂಚಾಯತ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ,  ಕಾರ್ಯಪಡೆಗಳನ್ನು ತೊಡಗಿಸಿಕೊಳ್ಳುವ ಮೂಲಕ ಕಟ್ಟುನಿಟ್ಟಿನ ಹೋಂ ಕ್ವಾರಂಟೈನ್ ಅನ್ನು ಖಚಿತಪಡಿಸುವುದು. ಸಿಕ್ಯೂಎಎಸ್ ಉಲ್ಲಂಘನೆಯಾದ ಸಂದರ್ಭದಲ್ಲಿ ಅದೇ ದಿನದಂದು ಹೋಂ ಕ್ವಾರಂಟೈನ್ ವ್ಯಕ್ತಿಗಳನ್ನು ಸಂಪರ್ಕಿಸುವುದು. ಉಲ್ಲಂಘನೆಯು ಮರುಕಳಿಸಿದ ಸಂದರ್ಭದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಸ್ಥಳಾಂತರಿಸುವುದು. ಪ್ರಥಮ ವರ್ತಮಾನ ವರದಿ ದಾಖಲಿಸುವುದು ಮೊದಲಾದಂತಹ ದಂಡನೀಯ ಉಪಬಂಧಗಳನ್ನು ಜಾರಿಗೊಳಿಸುವುದು. ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಯನ್ನು ಆಗಾಗ್ಗೆ ಸಂಪರ್ಕಿಸುವುದು. ಜಿಲ್ಲಾ ಆರೋಗ್ಯ ಸಹಾಯವಾಣಿ ಸಂಖ್ಯೆಯಿಂದ ಎಲ್ಲಾ ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳಿಗೆ ಕರೆ ಮಾಡುವುದು. ಆರೋಗ್ಯ ಸೇತು ಆ್ಯಪ್‌ನಿಂದ ಶಂಕಿತ, ಅಪಾಯದ ಹಂತದಲ್ಲಿರುವ ಪ್ರಕರಣಗಳನ್ನು ಅನುಸರಣೆ ಮಾಡುವುದು. ಪ್ರಸ್ತುತ/ಸಂಭಾವ್ಯ ಹಾಟ್‌ಸ್ಪಾಟ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚಾರ ಮಾಡುವುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ ಮಟ್ಟದ ಸಮಿತಿ ಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಮಟ್ಟದ ಸಮಿತಿಗಳು ಹೋಂ ಕ್ವಾರಂಟೈನ್ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರಾಜ್ಯಗಳಿಂದ ಕಾಲ್ನಡಿಗೆ ಮೂಲಕ ಆಗಮಿಸಿದ ವ್ಯಕ್ತಿಗಳನ್ನು ಗುರುತಿಸಿ, ಹೋಮ್ ಕ್ವಾರಂಟೈನ್ ಹಾಗೂ ಸಾಂಸ್ಥಿಕ ಕ್ವಾರಂಟೈನ್ ಮಾಡುವುದು.


ತಂಡ 8: ಸಾಮಾಜಿಕ ಅಂತರ (ಮುಖಗವಸು ಧರಿಸುವುದು, ಸಾಮಾಜಿಕ ಅಂತರ ಕಾಯುವುದು, ಬೃಹತ್ ಗುಂಪು ಗೂಡುವಿಕೆಯನ್ನು ತಡೆಯುವುದು, ಉಗಿಯುವುದನ್ನು ತಡೆಯುವುದು ಇತ್ಯಾದಿ): ಉಪ ಕಾರ್ಯದರ್ಶಿಗಳು, ಜಿ.ಪಂ. ಮೊ:94808-65003, ಪೊಲೀಸ್ ಉಪ ಅಧೀಕ್ಷಕರು, ಗದಗ ಮೊ: 94808-04420 ಮತ್ತು ನರಗುಂದ 94808-044084. ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ಎಪಿಎಂಸಿ, ಇತ್ಯಾದಿ ಅಂತಹ ಜನನಿಬಿಡ ಪ್ರದೇಶಗಳೆಡೆ ಹೆಚ್ಚು ಗಮನ ನೀಡುವುದು. ಇದರ ಅನುಪಾಲನೆಯಲ್ಲಿ ವಾರ್ಡ ಮಟ್ಟದ ಹಾಗೂ ಗ್ರಾಮ ಪಂಚಾಯತ್ ಮಟ್ಟದ ವಿಪತ್ತು ನಿರ್ವಹಣಾ ಸಮಿತಿಗಳು/ಕಾರ್ಯ ಪಡೆಗಳು, ಎಲ್ಲಾ ಹಿತಾಸಕ್ತಿದಾರರು ಮತ್ತು ಸಮುದಾಯವನ್ನು ತೊಡಗಿಸಿಕೊಳ್ಳುವುದು. ಉಲ್ಲಂಘನೆಯ ಸಂದರ್ಭದಲ್ಲಿ ದಂಡನೀಯ ಕ್ರಮ ಕೈಗೊಳ್ಳುವುದು. ಆಟೋಗಳು ಮತ್ತು ಇತರೆ ವಾಹನಗಳ ಮುಖಾಂತರ ಸಂಚಾರಿ ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಯನ್ನು ಬಳಸುವುದು. ಸಾರ್ವಜನಿಕ ಪ್ರಚಾರಕ್ಕಾಗಿ ಇಐಸಿ ವಸ್ತುಗಳ ಸೃಜನೆ. ವಿವಿಧ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಜನ ಪ್ರತಿನಿಧಿಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸುವುದು ಹಾಗೂ ಜನರಿಗೆ ಅರಿವನ್ನು ಮೂಡಿಸುವುದು.


ತಂಡ 9: ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಜ್ವರ ಚಿಕಿತ್ಸಾಲಯಗಳಿಂದ (ಕೆಪಿಎಂಇ ಮತ್ತು ಔಷಧ ಕೇಂದ್ರಗಳು) ಐಎಲ್‌ಐ/ ಎಸ್‌ಎಆರ್‌ಐ ಪ್ರಕರಣಗಳು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಮೊ:94498-43052, ಕೆಪಿಎಂಇ ಮತ್ತು ಫಾರ್ಮಸಿಗಳು ಶೇಕಡ 100 ರಷ್ಟು ಎಲ್ಲಾ ಐಎಲ್‌ಐ /ಎಸ್‌ಎಆರ್‌ಐ ಪ್ರಕರಣ ಗಳನ್ನು ವರದಿ ಮಾಡುವಂತೆ ಖಚಿತಪಡಿಸಿಕೊಳ್ಳುವುದು. ಪರೀಕ್ಷಾ ತಂಡಗಳೊಂದಿಗೆ ಸಮನ್ವಯತೆ ಮತ್ತು ಪ್ರಕರಣಗಳ ತಡೆರಹಿತ ಮಾಹಿತಿ ವಿನಿಮಯ. ಔಷಧ ಕೇಂದ್ರಗಳು ಮತ್ತು ಸ್ವ್ಯಾಬ್ ಸಂಗ್ರಹಣೆ ಕಾರ್ಯನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ. ಅತ್ಯಂತ ಅಪಾಯದ ಪ್ರಕರಣಗಳ ವೈದ್ಯಕೀಯ ಸ್ಥಿತಿಗತಿಗಳ ಮೇಲ್ವಿಚಾರಣೆ ಮಾಡುವುದು.


ತಂಡ10: ಜಿಲ್ಲಾ ನಿಯಂತ್ರಣ ಕೊಠಡಿ (ಆರೋಗ್ಯ, ಪೊಲೀಸ್ ಮತ್ತು ಕಂದಾಯ): ಅಪರ ಜಿಲ್ಲಾಧಿಕಾರಿಗಳು, ಸ್ಟೇಟ್ ವಾರ್‌ರೂಂ ಮತ್ತು ಜಿಲ್ಲಾ ನಿಯಂತ್ರಣ ಕೊಠಡಿಯ ನಡುವೆ ತಡೆರಹಿತ ಮಾಹಿತಿಯನ್ನು ವಿನಿಮಯ ಮಾಡುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮಸಾಧ್ಯ ಮಾಹಿತಿಯನ್ನು ಮತ್ತು ಸಾರ್ವಜನಿಕರಿಗೆ ಅಂಕಿ ಅಂಶಗಳ ಮಾಹಿತಿಯನ್ನು ಸಕಾಲದಲ್ಲಿ ಪ್ರಸಾರ ಮಾಡುವುದು (ಮಾಧ್ಯಮ ಪ್ರಕಟಣೆ). ವಿಚಕ್ಷಣೆ, ಕಾಲ್ ಸೆಂಟರ್‌ಗಳು, ಮೀಡಿಯಾ ಸ್ಕ್ಯಾನಿಂಗ್ ಮಾದರಿ ಸಂಗ್ರಹಣೆ ಮತ್ತು ಇಂಟರ್‌ಸೆಕ್ಟ್ ಮೌಖಿಕ ಸಮನ್ವಯತೆ. ಸ್ಟೇಟ್ ವಾರ್‌ರೂಂ ಮತ್ತು ಜಿಲ್ಲಾ ನಿಯಂತ್ರಣ ಕೊಠಡಿಯ ನಡುವೆ ತಡೆರಹಿತ ಮಾಹಿತಿಯನ್ನು ವಿನಿಮಯ ಮಾಡುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮಸಾಧ್ಯ ಮಾಹಿತಿ ಯನ್ನು ಸಕಾಲದಲ್ಲಿ ಪ್ರಸಾರ ಮಾಡುವುದು (ಪತ್ರಿಕಾ ಪ್ರಕಟಣೆ). ಸ್ಟೇಟ್ ವಾರ್‌ರೂಂನಿಂದ ಪಡೆದಿರುವ ಅಂಕಿ-ಅಂಶ ಗಳನ್ನು ಮಾಹಿತಿಯನ್ನು ತಾಲ್ಲೂಕು ತಂಡಗಳಿಗೆ ವಿನಿಮಯಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನೋಡಿ ಕೊಳ್ಳುವುದು. ಸಾರ್ವಜನಿಕರಿಂದ ಬಂದಂತಹ ದೂರುಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ, ಅವುಗಳನ್ನು ಇತ್ಯರ್ಥಪಡಿಸಲು ಕ್ರಮ ಜರುಗಿಸುವುದು.


ತಂಡ 11: ಮೃತ ದೇಹದ ನಿರ್ವಹಣೆ: ಗದಗ ಉಪವಿಭಾಗಾಧಿಕಾರಿಗಳು. ಮೃತ ದೇಹಗಳ ಅಂತ್ಯಕ್ರಿಯೆಯನ್ನು ಮಾಡುವ ಸಂದರ್ಭದಲ್ಲಿ ಎಲ್ಲಾ ಗೌರವಯುತ ಶಿಷ್ಟಾಚಾರ ಪಾಲನೆ ಬಗ್ಗೆ ಖಚಿತಪಡಿಸಿಕೊಳ್ಳುವುದು. ಮೃತ ದೇಹಗಳ ಸಾಗಣೆಗಾಗಿ ವಾಹನಗಳ ವ್ಯವಸ್ಥೆಗಳನ್ನು ಮಾಡುವುದು. ಈ ಕಾರ್ಯವಿಧಾನದ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡುವುದು. ಮೃತ್ಯು ಅಡಿಟ್ ವರದಿಯನ್ನು ಆರೋಗ್ಯ ಇಲಾಖೆ ಹಾಗೂ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪ ಕುಲಪತಿಗಳವರಿಗೆ ಕಳುಹಿಸುವುದು. ಭಾರತ ಸರ್ಕಾರದ ಶಿಷ್ಠಾಚಾರದ ಅನ್ವಯ ಜೈವಿಕ ತ್ಯಾಜ್ಯ ನಿರ್ವಹಣೆಗೆ ಕ್ರಮವಹಿಸುವದು.

ತಂಡ 12: ರಸ್ತೆ ಮತ್ತು ರೈಲಿನ ಮೂಲಕ ಅಂತರ್ ರಾಜ್ಯ ಪ್ರಯಾಣಿಕರು (ಅಂತರ್-ರಾಜ್ಯ ಗಡಿಯನ್ನು ಹಂಚಿಕೊಳ್ಳುವ ಜಿಲ್ಲೆಗಳಿಗೆ ಮತ್ತು ಪ್ರಮುಖವಾದ ರೈಲ್ವೆ ನಿಲ್ದಾಣ ಹೊಂದಿರುವ ಜಿಲ್ಲೆಗಳಿಗೆ): ಭೂ ದಾಖಲೆಗಳ ಉಪ ನಿರ್ದೇಶಕರು, ಮೊ:78298-96161 ಅಂತರ್‌ ಜಿಲ್ಲಾ ಚೆಕ್‌ ಪೋಸ್ಟ್ (ಗಡಿ ಅನುಕೂಲ ಕಲ್ಪಿಸುವ ಕೇಂದ್ರಗಳು) ಮತ್ತು ಜಿಲ್ಲಾ ಅನುಕೂಲ ಕಲ್ಪಿಸುವ ಕೇಂದ್ರಗಳ ಕಾರ್ಯನಿರ್ವಹಣೆ ಮೇಲ್ವಿಚಾರಣೆ ಮತ್ತು ಒಳಬರುವ ವಾಹನಗಳ ಸಾಮರ್ಥ್ಯದ ನಿರ್ಧರಣೆ. ನೆರೆಹೊರೆಯ ಜಿಲ್ಲೆಗಳೊಂದಿಗೆ ಸಮನ್ವಯ ಸಾಧಿಸುವುದು. ಅಂತರ್-ರಾಜ್ಯ ಗಡಿ ಮತ್ತು ಜಿಲ್ಲಾ ಅನುಕೂಲ ಕಲ್ಪಿಸುವ ಕೇಂದ್ರ ಗಳಿಗೆ ರೈಲುಗಳಿಂದ ಪ್ರವೇಶಿಸುವ ಮತ್ತು ಇಳಿಯುವ ವ್ಯಕ್ತಿಗಳನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವಂತೆ ಹಾಗೂ ಐಎಸ್‌ಟಿ ಆ್ಯಪ್‌ನ ಮೂಲಕ ದೃಢೀಕರಿಸಿಕೊಳ್ಳುವಂತೆ ನೋಡಿಕೊಳ್ಳುವುದು. ಸಂಪನ್ಮೂಲಗಳನ್ನು ದಕ್ಷವಾಗಿ ನಿಯುಕ್ತಿಗೊಳಿಸುವ ಮೂಲಕ ಚೆಕ್ ಪೋಸ್ಟ್ ಹಾಗೂ ರೈಲ್ವೆ ನಿಲ್ದಾಣ ಗಳ ನಿರೀಕ್ಷಣಾ ಸಮಯವನ್ನು ತಗ್ಗಿಸುವುದು. ಸೇವಾಸಿಂಧುವಿನಲ್ಲಿ ನೋಂದಣಿ ಮಾಡಿಕೊಳ್ಳುವ ಬಗ್ಗೆ ಬಸ್‌ಗಳು ಮತ್ತು ರೈಲುಗಳಲ್ಲಿ ಪ್ರಕಟಣೆ ಮಾಡುವುದು. ಬಾರ್ಡರ್ ಮತ್ತು ಡಿಸ್ಟ್ರಿಕ್ಟ್ ರಿಸೀವಿಂಗ್ ಸೆಂಟರ್‌ಗಳ ಮಧ್ಯೆ ಸಮನ್ವಯ ಸಾಧಿಸುವುದು.


ತಂಡ 13: ವಿಮಾನಯಾನ ಮತ್ತು ನೌಕಾಯಾನದ ಮೂಲಕ ಪ್ರಯಾಣಿಸುವ ಅಂತರ್ ರಾಜ್ಯ ಪ್ರಯಾಣಿಕರು (ವಿಮಾನ ನಿಲ್ದಾಣ ಮತ್ತು ಹಡಗು ನಿಲ್ದಾಣಗಳನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಇತರೆ ಜಿಲ್ಲೆಗಳು):  ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಮೊ:94820-03699 ವಿಮಾನಗಳು ಮತ್ತು ಹಡಗುಗಳು, ದೋಣಿಗಳಿಂದ ಬಂದಿರುವ ವ್ಯಕ್ತಿಗಳು ಕಡ್ಡಾಯವಾಗಿ ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂಬುದನ್ನು ಐಎಸ್‌ಟಿ ಆ್ಯಪ್ ಮೂಲಕ ದೃಢ ಪಡಿಸಿಕೊಳ್ಳುವುದು.


ತಂಡ 14: ಮಾತೃ ಮತ್ತು ಮಗುವಿನ ಆರೋಗ್ಯ ಸೇವಾ ಕಾರ್ಯಕ್ರಮ: ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೋ: 82177-88791 ಪ್ರಸವ ಪೂರ್ವ ಮತ್ತು ಪ್ರಸವೋತ್ತರ ಆರೈಕೆಯನ್ನು ಸಕಾಲದಲ್ಲಿ ಮಾಡುವುದಕ್ಕೆ ಕ್ರಮ. ಸೋಂಕು ತಡೆ ಕಾರ್ಯಕ್ರಮ. ಜಿಲ್ಲಾ ಆರೋಗ್ಯ ನಿಯಂತ್ರಣ ಕೊಠಡಿಯಿಂದ ಮೇಲ್ವಿಚಾರಣೆ.

Leave a Reply

Your email address will not be published. Required fields are marked *

You May Also Like

ಪಕ್ಷದ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆದಿರುವ ಬಿ.ಎಸ್. ಯಡಿಯೂರಪ್ಪ

ಆಲಮಟ್ಟಿ:ಬಿ.ಎಸ್.ಯಡಿಯೂರಪ್ಪ, ರಾಜಕಾರಣದಿಂದ ನಿವೃತ್ತಿಯಾಗಲ್ಲ, ಅವರು ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತರಾಗುತ್ತಾರೆ, ಪಕ್ಷಕ್ಕೆ ಕೋಚ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ…

ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಕಂಡು ಬಂದ ಸೋಂಕು!

ಬೆಂಗಳೂರು: ಇಲ್ಲಿಯ ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಹೌಸ್ ಕೀಪಿಂಗ್…

ಕೆರೆ, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಗದಗ: ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೆರೆಗಳ ಸರ್ವೇ ಕಾರ್ಯವನ್ನು ಕೈಗೊಂಡು ರಾಜಕಾಲುವೆಗಳ…

ಶನಿವಾರವೂ ಶಿಕ್ಷಣ ಇಲಾಖೆಗೆ ರಜೆ

ಎರಡು ಮತ್ತು ನಾಲ್ಕನೇ ಶನಿವಾರ ಮಾತ್ರ ಶಿಕ್ಷಣ ಇಲಾಖೆ ನೌಕರರಿಗೆ ರಜೆ ಘೋಶಿಸಲಾಗಿತ್ತು. ಆದರೆ ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ತಿಂಗಳ ಎಲ್ಲ ಶನಿವಾರವೂ ರಜೆ ಘೋಷಣೆ ಮಾಡಿದೆ.