ಮುಂಬಯಿ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಪಂದ್ಯದ ಸಂದರ್ಭದಲ್ಲಿ ಸನ್‍ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ನಡೆದ ಪಂದ್ಯದ ಸಂದರ್ಭದಲ್ಲಿ ಅಂಪೈರ್ ವೈಡ್ ನೀಡಲು ಮುಂದಾಗಿ ಧೋನಿ, ಆಕ್ಷೇಪಿಸುತ್ತಿದ್ದಂತೆ ತೀರ್ಮಾನ ಬದಲಿಸಿದ್ದ ಘಟನೆ ಸದ್ಯ ಚೆರ್ಚೆಗೆ ಕಾರಣವಾಗಿದೆ.

ಸದ್ಯ ಹರ್ಭಜನ್ ಸಿಂಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಪಂದ್ಯದ ನಂತರ ಸನ್‍ ರೈಸರ್ಸ್ ನಯುವ ಆಟಗಾರರಿಗೆ ಧೋನಿ ಕೆಲವು ಸಲಹೆಗಳನ್ನು ನೀಡಿದ್ದರು. ಈ ಕುರಿತುಕು ಹೈದರಾಬಾದ್ ತಂಡದ ಆಟಗಾರ ಅಬ್ದುಲ್ ಸಮದ್, ಫೋಟೋವನ್ನು ಟ್ವೀಟ್ ಮಾಡಿ ಇಂಪಾರ್ಟೆಂಟ್ ಲೆಸೆನ್ಸ್ ಎಂಬ ಹಣೆ ಬರಹ ನೀಡಿದ್ದರು.

ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದ ಅಭಿಮಾನಿಯೊಬ್ಬ ಯೆಸ್ ಎಂದು ಪಂದ್ಯದಲ್ಲಿ ಅಂಪೈರ್ ತೀರ್ಮಾನ ಬದಲಿಸಿದ್ದ ಕುರಿತ ವಿಡಿಯೋವನ್ನು ರೀ ಟ್ವೀಟ್ ಮಾಡಿದ್ದರು. ಅಭಿಮಾನಿಯ ಟ್ವೀಟ್ಗೆಯ ಪ್ರತಿಕ್ರಿಯೆ ನೀಡಿದ್ದ ಹರ್ಭಜನ್ ಸಿಂಗ್, ನಗುವ ಎಮೋಜಿ ನೀಡಿ ರೀ ಟ್ವೀಟ್ ಮಾಡಿದ್ದರು.

ಹರ್ಭಜನ್ ಸಿಂಗ್ ನಗುವ ಎಮೋಜಿಗಳೊಂದಿಗೆ ಪ್ರತಿಕ್ರಿಯೆ ನೀಡಿದಕ್ಕೆ ಧೋನಿ ತಂಡದ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ನಂಬಿಕೆ ದ್ರೋಹಿ ಎಂದು ಟೀಕೆ ಮಾಡಿ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳು ಕೂಡ ಭಜ್ಜಿ ವಿರುದ್ಧ ಗರಂ ಆಗಿದ್ದಾರೆ.

ಈ ಜಗಳದಲ್ಲಿ ಅಭಿಮಾನಿಗಳು, ಪಾಕಿಸ್ತಾನ ಮಾಜಿ ಆಟಗಾರ ಶಹೀದ್ ಅಫ್ರಿದಿ ಫೌಂಡೇಶನ್ಗೆರ ನೆರವು ನೀಡಲು ಟ್ವೀಟ್ ಮಾಡಿ ಮನವಿ ಮಾಡಿದ್ದ ಹರ್ಭಜನ್ ಸಿಂಗ್ ವಿಷಯ ಪ್ರಸ್ತಾಪಿಸಿ ವ್ಯಂಗ್ಯವಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಧೋನಿಗಿಂದು ಜನ್ಮದಿನ: ವಯಸ್ಸು ನಲವತ್ತು, ಹಂಗೇ ಇದೆ ಗೆಲ್ಲುವ ತಾಕತ್ತು

ನವದೆಹಲಿ: ಮ್ಯಾಚ್ ವಿನ್ನರ್ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 40ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.…

ಮಹಿಳಾ ವಿಶ್ವಕಪ್ ಆತಿಥ್ಯ ವಹಿಸಿದ ಭಾರತ!

2022 ರ ಮಹಿಳಾ ಏಷ್ಯನ್ ಕಪ್ ಆತಿಥ್ಯ ಭಾರತಕ್ಕೆ ಲಭಿಸಿದೆ. 1979ರ ನಂತರ ಇದೇ ಮೊದಲ ಬಾರಿಗೆ ಭಾರತದಲ್ಲಿ ಮಹತ್ವದ ಫುಟ್ಬಾಲ್ ಕ್ರಿಡಾಕೂಟ ನಡೆಯಲಿದೆ.