ಮುಂಬಯಿ: ಯುವರಾಜ್ ಸಿಂಗ್ ಬೆನ್ನಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್. ಧೋನಿ ಚೂರಿ ಹಾಕಿದ್ದಾರೆ ಎಂದು ಅವರ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದಾರೆ.

ಯುವರಾಜ್ ಸಿಂಗ್ ವೃತ್ತಿ ಜೀವನದಲ್ಲಿ ಸಂಕಷ್ಟದಲ್ಲಿದ್ದಾಗ ಈ ಇಬ್ಬರು ಆಟಗಾರರು ಬೆಂಬಲ ನೀಡಲಿಲ್ಲ. ಯುವರಾಜ್ ಸಿಂಗ್ ಬೆನ್ನಿಗೆ ಸಾಕಷ್ಟು ಮಂದಿ ಚೂರಿ ಹಾಕಿದ್ದು, ಅದರಲ್ಲಿ ಧೋನಿ, ಕೊಹ್ಲಿ ಕೂಡ ಇದ್ದಾರೆ. ಅಲ್ಲದೇ ಅಂದು ಆಯ್ಕೆ ಸಮಿತಿ ಸದಸ್ಯರಾಗಿದ್ದ ಸರಣ್ ದೀಪ್ ಸಿಂಗ್ ಕೂಡ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯುವರಾಜ್ ಸಿಂಗ್, ಮಾಜಿ ನಾಯಕ ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಲಭಿಸಿದ್ದ ಬೆಂಬಲ ಧೋನಿ, ಕೊಹ್ಲಿರಿಂದ ಲಭಿಸಿರಲಿಲ್ಲ ಎಂದು ಹೇಳಿದ್ದರು. ಸರಣ್ದೀವಪ್ ಸಿಂಗ್ ನಿರಂತರವಾಗಿ ಯುವಿಯನ್ನು ತಂಡದಿಂದ ಕೈಬಿಡಬೇಕು ಎಂದು ಒತ್ತಡ ಹೇರಿದ್ದರು. ಆಯ್ಕೆ ಸಮಿತಿ ಪ್ರತಿ ಸಭೆಯಲ್ಲೂ ಅವರದ್ದು ಒಂದೇ ಮಾತಾಗಿತ್ತು. ಕ್ರಿಕೆಟ್ ಕುರಿತು ಎಬಿಸಿ ಗೊತ್ತಿರದ ವ್ಯಕ್ತಿಗಳನ್ನು ಆಯ್ಕೆ ಸಮಿತಿಗೆ ತೆಗೆದುಕೊಂಡ ಸಂದರ್ಭದಲ್ಲಿ ಅವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published.

You May Also Like

ಮುಂಡರಗಿಗೆ ಬಿಇಓ ನೇಮಕ, ಶಿರಹಟ್ಟಿ ಬಿಇಓ ವರ್ಗಾವಣೆ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿಗೆ ಖಾಲಿ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಯುವರಾಜ್ ನಾಯ್ಕ್ ಅವರನ್ನು…

ಸಂಕಷ್ಟದಲ್ಲೂ ಪರೋಪಕಾರಿ ಈ ಆಟೋ ಚಾಲಕ

ಲಾಕ್ ಡೌನ್ ಹಿನ್ನಲೆ ದುಡಿಮೆಯನ್ನೆ ನಂಬಿದ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ತನಗೆಷ್ಟೆ ಸಂಕಷ್ಟ ಎದುರಾದರೂ ಆಟೋ ಚಾಲಕನೊಬ್ಬ ಜನಸೇವೆಗೆ ನಿಂತಿದ್ದಾನೆ.

ಇಂದಿನ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮಾತಾಡಿದ್ದೇನು..?

ದೆಹಲಿ: ದೇಶದ ಗಡಿ ಮತ್ತು ಸಾರ್ವಭೌಮತ್ವ ರಕ್ಷಿಸುವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಬದ್ಧತೆಯನ್ನು ಪ್ರಪಂಚವೇ ನೋಡಿದೆ…