ಬೆಂಗಳೂರು: ರಾಜ್ಯ ಸರ್ಕಾರ ಮಹತ್ವದ ನಿರ್ಣಯವೊಂದರಲ್ಲಿ ಪದವಿಯ ಅಂತಿಮ ವರ್ಷವನ್ನು ಹೊರತುಪಡಿಸಿ, ಉಳಿದ ವರ್ಷಗಳ ಪರೀಕ್ಷೆಗಳನ್ನು ರದ್ದುಪಡಿಸಿದೆ.
ಈ ಕುರಿತಂತೆ ಡಿಸಿಎಂ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಮಾಹಿತಿ ನೀಡಿದ್ದು, ಸಾಮಾನ್ಯ ಪದವಿಗಳ ಮೊದಲ ಹಾಗೂ 2ನೇ ವರ್ಷ, ಇಂಜನೀಯರಿಂಗ್ ಪದವಿಯ 1, 2, ಹಾಗೂ 3ನೇ ವರ್ಷದ ಪರೀಕ್ಷೆಗಳು ರದ್ದಾಗಿವೆ. ಇದಲ್ಲದೇ ಡಿಪ್ಲೋಮಾ ತರಗತಿಯ ಮೊದಲ ಹಾಗೂ 2ನೇ ವರ್ಷದ ಪರೀಕ್ಷೆ ಸಹ ರದ್ದಾಗಿದೆ. ಸ್ನಾತಕೋತ್ತರದಲ್ಲೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಪದವಿ, ಡಿಪ್ಲೋಮಾ ಮತ್ತು ಪಿಜಿಯ ಅಂತಿಮ ವರ್ಷದಲ್ಲಿ ಇರದೇ ಇರುವವರಿಗೆ (ಮೊದಲ, ಎರಡನೆ ಅಥವಾ 3ನೆ ವರ್ಷ) ಅವರ ಆಂತರಿಕ ಮೌಲ್ಯಮಾಪನ (ಇಂಟರ್ನಲ್ ಅಸೆಸ್ ಮೆಂಟ್) ಮತ್ತು ಹಿಂದಿನ ಪರೀಕ್ಷೆಯ ಅಂಕಗಳ (ತಲಾ ಶೇ. 50) ಆಧಾರದಲ್ಲಿ ಗ್ರೇಡ್ ನೀಡಿ ಮುಂದಿನ ತರಗತಿಗೆ ಪ್ರಮೋಷನ್ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ನಲ್ಲಿ ಆನ್ ಲೈನ್ ಅಥವಾ ಆಫ್ ಲೈನ್ ಅಥವಾ ಎರಡೂ ಬೆರೆತ ಹೈಬ್ರಿಡ್ ಪರೀಕ್ಷೆ ನಡೆಸಲಾಗುವುದು. ಹಿಂದಿನ ವರ್ಷದ ವಿಷಯ ಬಾಕಿ ಇದ್ದರೆ ಸೆಪ್ಟೆಂಬರ್ ನಲ್ಲೇ ಬರೆಯಲು ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

1 comment
Is it applicable for B.Ed. 1&3 Sem examination?
Plz make it clear and leave the concerned circular.