ಲಕ್ಷ್ಮೇಶ್ವರ: ವೀಕೆಂಡ್ ಕರ್ಫ್ಯೂಗೆ ಪಟ್ಟಣದಲ್ಲಿ ಜನತೆ ಸಾಥ್ ನೀಡಿದ್ದು ಜನರು ಇಲ್ಲದೇ ಬಸ್ಟ್ಯಾಂಡ್, ಬಾನು ಮಾರ್ಕೆಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಬಿಕೋ ಎನ್ನುತ್ತಿದೆ.

ಶನಿವಾರ ಹಾಗು ರವಿವಾರ ವೀಕೆಂಡ್ ಕರ್ಫ್ಯೂಗೆ ಪೊಲೀಸ್ ಅಧಿಕಾರಿಗಳು ಪುರಸಭೆ ಸಿಬ್ಬಂದಿಗಳು ಹಾಗೂ ಮಾಧ್ಯಮ ಮಿತ್ರರರಿಗೆ ಪಟ್ಟಣದ ಶಿಕ್ಷಕ ಪಾಟೀಲ ಅವರು ತಮ್ಮ ಕೈಯಲ್ಲಿ ಆಗುವ ಸೇವೆ ಸಲ್ಲಿಸಿದರು. ಲಕ್ಷ್ಮೇಶ್ವರ ಪಟ್ಟಣದ ಉಮಾ ವಿದ್ಯಾಲಯದ ಶಿಕ್ಷಕ ಪಾಟೀಲ್ ಪೊಲೀಸ್, ಪುರಸಭೆ ಸಿಬ್ಬಂದಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತಂದು ಬಾಟಲಿಗಳಲ್ಲಿ ನೀರು ತುಂಬಿ ಕರ್ತವ್ಯಕ್ಕೆ ಹಾಜರಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಪುರಸಭೆಯ ಸಿಬ್ಬಂದಿಗಳಿಗೆ ಮತ್ತು ಮಾಧ್ಯಮ ಮಿತ್ರರರಿಗೆ ಅವರು ಇರುವಲ್ಲಿ ಹೋಗಿ ನೀರನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸದ್ಯ ಶಾಲೆಗಳು ರಜೆ ಘೋಷಿಸಿದ್ದಾರೆ. ಖಾಲಿ ಮನೆಯಲ್ಲಿ ಕುಳಿತುಕೊಂಡು ಪಗಾರ ತಗೆದುಕೊಳ್ಳಲು ನನಗೆ ಇಷ್ಟ ಇಲ್ಲ. ಆದ್ದರಿಂದ ನನ್ನ ಕೈಯಲ್ಲಿ ಆಗುವ ಸೇವೆಯನ್ನು ನಾನು ಮಾಡುತ್ತಿದ್ದೇನೆ. ನಮಗೋಸ್ಕರ ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್‌ಗೆ ಬಿಸಿಲಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು ಅವರಿಗೆ ನೀರನ್ನು ಹಂಚುತ್ತಿದ್ದೇನೆ ಎನ್ನುತ್ತಾರೆ ಪಾಟೀಲ್.

ಪೊಲೀಸ್, ಪುರಸಭೆ ಸಿಬ್ಬಂದಿಗಳು ಹಾಗೂ ಮಾಧ್ಯಮ ಮಿತ್ರರಿಗೆ ನೀರಿನ ವ್ಯವಸ್ಥೆ ಮಾಡಿರುವ ಶಿಕ್ಷಕ ಪಾಟೀಲ್ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಯಿತು.

Leave a Reply

Your email address will not be published. Required fields are marked *

You May Also Like

ಗಣೇಶೋತ್ಸವ ಆಚರಣೆ ಮಾರ್ಗಸೂಚಿಗಳು: ನಿಯಮ ಪಾಲನೆಗೆ ಡಿಸಿ ಸೂಚನೆ

ಗಣೇಶೋತ್ಸವ ಆಚರಿಸುವ ಸಂಬಂಧ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡಿದ್ದು, ಅವುಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಸರಳ ಗಣೇಶೋತ್ಸವ ಆಚರಿಸುವಂತೆ ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.

ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಹುಡುಗಿಯ ಭಯಾನಕ ಕತೆ!

ಕಳೆದ ನಾಲ್ಕು ವರ್ಷಗಳ ಹಿಂದೆ ನಾಗಾಲ್ಯಾಂಡ್‌ನಿಂದ ಬ್ಯೂಟಿ ಪಾರ್ಲರ್ ಸೇಲ್ಸ್ ಗರ್ಲ್ ಆಗಿ ಬಂದವಳು ಬೆಂಗಳೂರಿಗೆ ಬಂದವಳು ಆಪ್ತರೊಂದಿಗೆ ಜೈಲು ಪಾಲಾಗಿದ್ದಾರೆ.

ರಿಪಬ್ಲಿಕ್‌ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಮೇಲೆ ಕೋಮು ದ್ವೇಷ ಸೃಷ್ಟಿ ಆರೋಪ

ರಿಪಬ್ಲಿಕ್‌ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಕೋಮು ದ್ವೇಷ ಸೃಷ್ಟಿಸಿದ ಆರೋಪ ಹೊತ್ತುಕೊಂಡಿದ್ದಾರೆ. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.

ಗಾಳಿ ಶುದ್ಧಿ ಮಾಡಲಿದೆಯಂತೆ ಯಂತ್ರ: ಬೆಂಗಳೂರಲ್ಲಿ ಪ್ರಾಯೋಗಿಕ ಕಾರ್ಯ

ಈಗಾಗಲೇ ಶುದ್ಧ ಕುಡಿಯುವ ನೀರು ಒದಗಿಸುವ ಯಂತ್ರಗಳು ರಾಜ್ಯದಲ್ಲೆಲ್ಲಡೆ ಕಂಡು ಬರುತ್ತಿವೆ. ಆದರೆ ಇದೀಗ ನೀರಿನಂತೆ ಗಾಳಿಯನ್ನು ಶುದ್ಧೀಕರಣ ಗೊಳಿಸುವ ಯಂತ್ರದಿಂದ ಸಿಲಿಕಾನ ಸಿಟಿಯಲ್ಲಿ ಗಾಳಿ ಶುದ್ಧಿಕರಣ ಮಾಡುವ ಪ್ರಾಯೋಗಿಕ ಕಾರ್ಯ ಕೈಗೊಳ್ಳಲಾಗಿದೆ.