ರಾಯಪುರ್: ಒಂದು ಕೆಜಿ ಸೆಗಣಿಗೆ 1.50 ರೂ! ಎಷ್ಟಿದೆ ತನ್ನಿ, ನಾವ್ ತಗಳ್ತೀವಿ. ಅಲಲಾ, ಕೊಟ್ಟಿಗೆ ತುಂಬ ಹಸು, ಎಮ್ಮೆ ಸಾಕಿದವರಿಗೆ ಶುಕ್ರದೆಸೆ ಬಂತು ಬಿಡಿ. ಸದ್ಯದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸೆಗಣಿ ಗೊಬ್ಬರ ಮಾಡುತ್ತ ಕಾಯುವುದು ಕಷ್ಟವಿದೆ. ಹೀಗಾಗಿ ಸೆಗಣಿ ಮಾರೋದೆ ಬೆಟರು ಎಂದು ಜಾನುವಾರು ಸಾಕಿದವರು ಖುಷಿಪಡಿ.
ಇದು ಛತ್ತೀಸಗಢ್ ಸರ್ಕಾರದ ಹೊಸ ಯೋಜನೆ. ಇದೇ ಜುಲೈ 21ರಿಂದ ಸೆಗಣಿ ಖರೀದಿ ಆರಂಭವಾಗಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ತಿಳಿಸಿದ್ದಾರೆ. ಕಾಂಗ್ರೆಸ್ ಮುಖ್ಯಮಂತ್ರಿಯ ಈ ಯೋಜನೆಯನ್ನು ಅಲ್ಲಿನ ಆರೆಸ್ಸೆಸ್ ಘಟಕ ಸ್ವಾಗತಿಸಿದೆ.
‘ಗೋದಾನ್ ನ್ಯಾಯ್ ಯೋಜನಾ’ ಸ್ಕೀಮ್ ಅಡಿ ಈ ಸೆಗಣಿ ಖರೀದಿ ನಡೆಯಲಿದ್ದು, ಅಲ್ಲಿನ ವಿರೋಧ ಪಕ್ಷ ಬಿಜೆಪಿ ಇದನ್ನು ತಮಾಷೆ ಮಾಡಿ ಟೀಕಿಸಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಆರೆಸ್ಸೆಸ್ ನ ಗ್ರಾಮ್-ಗಾಂವ್ ಘಟಕದ ಮುಖಂಡರು, ಸಿಎಂಗೆ ಪ್ರಶಂಸಾಪತ್ರ ನೀಡಿ ಯೋಜನೆಯನ್ನು ಶ್ಲಾಘಿಸುವ ಮೂಲಕ ಬಿಜೆಪಿಗೆ ಇರಿಸುಮುರುಸು ಉಂಟು ಮಾಡಿದ್ದಾರೆ.
ಜಾಹೀರಾತು

‘ಸೆಗಣಿಯನ್ನು ಕೆಜಿಗೆ 5 ರೂ. ದರದಲ್ಲಿ ಖರೀದಿಸಿ, ಗೋಮೂತ್ರವನ್ನೂ ಖರೀದಿಸಿ’ ಎಂದು ಗ್ರಾಮ್-ಗಾಂವ್ ಸಿಎಂಗೆ ಮನವಿ ಮಾಡಿದೆ.
ಇಲ್ಲಿ ಗೋ ಸೆಗಣಿ ಎಂದು ಮಾತ್ರ ಉಲ್ಲೇಖವಾಗಿದೆ. ಎಮ್ಮೆ ಸೆಗಣಿ ತಗೋತಾರಾ? ಎನ್ನುವುದು ಪ್ರಶ್ನೆಯಾಗಿದೆ.
ಇದನ್ನೂ ಓದಿ – ಪಿಯುಸಿ ಫಲಿತಾಂಶ ದಿನಾಂಕ ತಿಳಿಸಿದ ಸಚಿವ ಸುರೇಶ್ ಕುಮಾರ್